ಜಾಂಬೂರಿ; ಆರ್ಥಿಕ ವಹಿವಾಟಿಗೆ ಚೈತನ್ಯ


Team Udayavani, Dec 26, 2022, 6:10 AM IST

ಜಾಂಬೂರಿ; ಆರ್ಥಿಕ ವಹಿವಾಟಿಗೆ ಚೈತನ್ಯ

ಮೂಡುಬಿದಿರೆ: ಜಾಂಬೂರಿ ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತವಾಗಿರದೆ ಕೋವಿಡ್‌ ಅನಂತರ ಆರ್ಥಿಕ ವಹಿವಾಟಿಗೆ ಚೇತರಿಕೆ ನೀಡುವಲ್ಲೂ ಪ್ರಮುಖ ಪಾತ್ರ ವಹಿಸಿದೆ.

ಜಾಂಬೂರಿಯ ಭಾಗವಾಗಿರುವ ಪ್ರದರ್ಶನ-ಮಾರಾಟ ಮೇಳಕ್ಕೆ ದ.ಕ. ಮಾತ್ರವಲ್ಲದೆ ರಾಜ್ಯದ ವಿವಿಧೆಡೆಗ ಳಿಂದ, ಹೊರ ರಾಜ್ಯಗಳಿಂದಲೂ ವ್ಯಾಪಾರ ವಹಿವಾಟುದಾರರು ಆಗಮಿ ಸಿದ್ದು, ವಿವಿಧ ವಸ್ತು-ಉತ್ಪನ್ನಗಳನ್ನು ಪ್ರದರ್ಶನ / ಮಾರಾಟಕ್ಕಿಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಬಳಿಕ ನಡೆಯು ತ್ತಿರುವ ಬೃಹತ್‌ ಉತ್ಸವ ಇದಾಗಿದೆ. ಡಿ. 27ರ ತನಕ ಉತ್ಸವ ನಡೆಯಲಿದೆ.

ನೂರಕ್ಕೂ ಅಧಿಕ ಸ್ಟಾಲ್‌ಗ‌ಳು ಒಂದೆಡೆಯಾದರೆ, ನೂರಾರು ಸಂಖ್ಯೆಯಲ್ಲಿ ಸಂತೆ ವ್ಯಾಪಾರಿಗಳು ಇನ್ನೊಂದು ಕಡೆಯಿದ್ದಾರೆ. ತಿಂಡಿ, ತಿನಿಸುಗಳು, ಬಟ್ಟೆ, ಚಪ್ಪಲಿ, ಕೃಷಿ ಉತ್ಪನ್ನಗಳು, ಮಕ್ಕಳ ಆಟಿಕೆ, ನರ್ಸರಿ, ತರಕಾರಿ ಬೀಜಗಳು, ಫ್ಯಾನ್ಸಿ ಐಟಂಗಳು ಹೀಗೆ ದೊಡ್ಡ ಪಟ್ಟಿಯೇ ಇದೆ.

ಉತ್ತಮ ವಹಿವಾಟು
ಉದಯವಾಣಿ ಜತೆ ಮಾತನಾಡಿದ ಪುತ್ತೂರಿನ ಫ್ಯಾನ್ಸಿ ವ್ಯಾಪಾರಿ ರಾಮಚಂದ್ರ ಅವರು, ನುಡಿಸಿರಿ ವೇಳೆ ಮಾರಾಟ ಮೇಳದಲ್ಲಿ ಭಾಗವಹಿಸುತ್ತಿದ್ದೆ. ಎರಡು ವರ್ಷದ ಬಳಿಕ ಮೂಡುಬಿದಿರೆಗೆ ವ್ಯಾಪಾರಕ್ಕೆ ಬಂದಿದ್ದು, ಈವರೆಗೆ ವಹಿವಾಟು ಉತ್ತಮವಾಗಿಯೇ ಸಾಗಿದೆ. ದಿನಕ್ಕೆ 1,500-2,000 ರೂ. ವರೆಗೆ ವ್ಯಾಪಾರ ನಡೆಯುತ್ತಿದೆ. ಇದು ಕಳೆದರಡು ವರ್ಷಗಳ ಬಳಿಕ ಕಂಡು ಬಂದಿರುವ ಉತ್ತಮ ವಹಿವಾಟು ಎನ್ನುತ್ತಾರೆ.

ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಆಟೋ, ಟ್ಯಾಕ್ಸಿ, ಬಸ್‌ಗಳಲ್ಲಿಯೂ ಜನರು ಕುಟುಂಬ, ಸ್ನೇಹಿತರೊಂದಿಗೆ ಜಾಂಬೂರಿಗೆ ಆಗಮಿಸುತ್ತಿದ್ದಾರೆ. ಆಟೋ ಚಾಲಕರು ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಸ್‌ಗಳೂ ತುಂಬಿ ತುಳುಕುತ್ತಿವೆ. ವಿದ್ಯಾಗಿರಿ ಮಾತ್ರವಲ್ಲದೆ, ಮೂಡುಬಿದಿರೆ ಆಸುಪಾಸಿನ ಅಂಗಡಿ, ಹೊಟೇಲ್‌ ಲಾಡ್ಜ್ ಗಳಿಗೂ ವಹಿವಾಟು ಹೆಚ್ಚಾಗಿದೆ.

ಡಿಜಿಟಲ್‌ ವ್ಯವಹಾರ
ಡಿಜಿಟಲ್‌ ವ್ಯವಹಾರಕ್ಕೂ ಜಾಂಬೂರಿ ವೇದಿಕೆಯಾಗಿದೆ. ಪ್ರತೀ ಮಳಿಗೆಯವರೂ ಕ್ಯುಆರ್‌ ಕೋಡ್‌ ಹೊಂದಿದ್ದು, ಡಿಜಿಟಲ್‌ ವ್ಯವಹಾರವೇ ಹೆಚ್ಚಾಗಿ ನಡೆಯುತ್ತಿದೆ. ಸಣ್ಣ ಟೀ ಸ್ಟಾಲ್‌ನಲ್ಲೂ, ಐಸ್‌ಕ್ಯಾಂಡಿ ಮಾರುವವ ಬಳಿಯಲ್ಲೂ ಸ್ಕ್ಯಾನರ್‌ಗಳು ಕಂಡು ಬಂದಿದೆ. ಪರ್ಸ್‌ನಲ್ಲಿ ನಗದು ಇಲ್ಲದಿದ್ದರೂ ಮೊಬೈಲ್‌ ಇದ್ದರೆ ಸಾಕು ಎನ್ನುವುದು ಇಲ್ಲಿಯೂ ಸಾಬೀತಾಗಿದೆ.

-ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಟ್ರಾಫಿಕ್ ಮೇಲೆ ಪರಿಣಾಮ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಟ್ರಾಫಿಕ್ ಮೇಲೆ ಪರಿಣಾಮ

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.