ಆಳ್ವಾಸ್ ವರ್ಣ ವಿರಾಸತ್: ರಾಷ್ಟ್ರೀಯ ಚಿತ್ರಕಲಾ ಶಿಬಿರ ಪ್ರಾರಂಭ
Team Udayavani, Jan 10, 2018, 11:15 AM IST
ಮೂಡಬಿದಿರೆ: “ಶುಷ್ಕ ಮನಸ್ಸು ಮರಣವಿದ್ದಂತೆ. ಮನಸ್ಸನ್ನು ಜೀವಂತವಿರಿಸಲು ಕಲೆ, ಸಂಸ್ಕೃತಿ, ಸಾಹಿತ್ಯ ಸಂಸರ್ಗ ಅವಶ್ಯ. ನಮ್ಮ ಉದ್ದೇಶ ಮರಣವಾಗಬಾರದು. ಸಕಲ ಜೀವಿಗಳ ಪ್ರೀತಿಸಿ ಬದುಕುವಂತಹ ಜಾಯಮಾನ ನಮ್ಮದಾಗಬೇಕು. ಕಲೆಗೆ ಜೀವ ನೀಡುವ ಕಲಾವಿದರು ಅಸೀಮ ಭಾವನೆಯಿಂದ ಪ್ರಕೃತಿಯಲ್ಲಿರುವ ನೈಜ ಸಂಸ್ಕೃತಿ ಯನ್ನು ಕಲೆಯ ರೂಪದಲ್ಲಿ ಮೂಡಿಸಲಿ’ ಎಂದು ಮೂಡ ಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾ ರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಆಳ್ವಾಸ್ ವಿರಾಸತ್ 2018ರ ಅಂಗವಾಗಿ ಜ. 9ರಿಂದ 14ರ ವರೆಗೆ ನಡೆಯಲಿರುವ “ಆಳ್ವಾಸ್ ವರ್ಣವಿರಾಸತ್ 2018′ ರಾಷ್ಟ್ರಮಟ್ಟದ ಸಮಕಾಲೀನ ಚಿತ್ರಕಲಾ ಶಿಬಿರಕ್ಕೆ ಮಂಗಳವಾರ ಅವರು ಚಾಲನೆ ನೀಡಿದರು. ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ವಹಿಸಿದ್ದರು. ಕರ್ನಾಟಕ ಲಲಿತ ಅಕಾಡೆಮಿಯ ಸದಸ್ಯ ರಾಜೇಂದ್ರ ಕೇದಿಗೆ, ಮಂಗಳೂರು ಕೆಎಂಸಿಯ ಪ್ರಾಧ್ಯಾಪಕ ಡಾ| ಸಿ.ಕೆ. ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ದೇಶದ ವಿವಿಧ ರಾಜ್ಯಗಳ ಸುಮಾರು 20 ಮಂದಿ ಹಿರಿಯ ಹಾಗೂ ಯುವ ಕಲಾವಿದರಿಗೆ ಕುಂಚ ಪರಿಕರ ಗಳನ್ನು ನೀಡುವ ಮೂಲಕ ಶಿಬಿರಕ್ಕೆ ಸ್ವಾಗತಿಸಲಾಯಿತು. ಶಿಬಿರ ಸಲಹಾ ಸಮಿತಿಯ ಸದಸ್ಯರಾದ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ಲಿಖೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.