ಇಂದಿನಿಂದ ಆಳ್ವಾಸ್ ವಿರಾಸತ್
Team Udayavani, Jan 12, 2018, 7:40 AM IST
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾ ಗಿರಿ ಸನಿಹ ಪುತ್ತಿಗೆ ವಿವೇಕಾನಂದ ನಗರ ದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಜ. 12ರಿಂದ 14ರ ವರೆಗೆ ನಡೆಯುವ ಆಳ್ವಾಸ್ ವಿರಾಸತ್-2018 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಸಕಲ ಸಿದ್ಧತೆಗಳಾಗಿವೆ.
ಶುಕ್ರವಾರ ಸಂಜೆ 5.15ರಿಂದ ಮೆರ ವಣಿಗೆ, 5.30ರಿಂದ 6.45ರ ವರೆಗೆ ಸಭೆ ನಡೆಯಲಿದೆ. ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ಯಲ್ಲಿ ನಾಗಾಲ್ಯಾಂಡ್ ರಾಜ್ಯ ಪಾಲ ಪಿ.ಬಿ. ಆಚಾರ್ಯ ಉದ್ಘಾ ಟಿಸಲಿದ್ದಾರೆ. ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕರಾದ ಪದ್ಮಭೂಷಣ ರಾಜನ್ -ಸಾಜನ್ ಮಿಶ್ರಾ ಸಹೋದರರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.
160 ಅಡಿ ಉದ್ದ, 60 ಅಡಿ ಅಗಲದ ವಿಶಾಲ ವೇದಿಕೆ, 50,000 ಮಂದಿ ಕುಳಿತು ಕಾರ್ಯಕ್ರಮ ಆಸ್ವಾದಿಸ ಬಹು ದಾದ ಗ್ಯಾಲರಿ, ಮೋಹಕ ವಿದ್ಯು ದ್ದೀಪಾಲಂಕಾರ, ಅತ್ಯುತ್ತಮ ಬೆಳಕು- ಧ್ವನಿ ವ್ಯವಸ್ಥೆ ವಿರಾಸತ್ ಸಂಭ್ರಮಕ್ಕೆ ಪೂರಕವಾಗಿದೆ. ವ್ಯವಸ್ಥಿತ ಪಾರ್ಕಿಂಗ್, ಖಾದ್ಯಗಳ ಮಳಿಗೆ ಗಳಿವೆ. ವಿದ್ಯಾರ್ಥಿ ಸ್ವಯಂ ಸೇವಕರು, ಮಾರ್ಗದರ್ಶಿ ಶಿಕ್ಷಕರು, ವಿವಿಧ ವಿಭಾಗಗಳ ನಿರ್ವಹಣ ಸಿಬಂದಿ, ಆಡಳಿತ ಮಂಡಳಿಯವರು ವಿರಾಸತ್ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಆಳ್ವಾಸ್ ವಿರಾಸತ್ ಸಮಯಪ್ರಜ್ಞೆ, ಶಿಸ್ತಿಗೆ ಹೆಸರಾಗಿದೆ.
ಉಚಿತ ಸಾರಿಗೆ: ಸಂಜೆ 5ರಿಂದ ಮೂಡಬಿದಿರೆ ನಿಶ್ಮಿತಾ ಟವರ್ ಬಳಿಯಿಂದ ಪುತ್ತಿಗೆಗೆ ಮತ್ತು ಕಾರ್ಯಕ್ರಮ ಮುಗಿದ ಬಳಿಕ ಮೂಡಬಿದಿರೆಗೆ ತೆರಳಲು ಉಚಿತ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಜ. 9ರಿಂದ ನಡೆದ ರಾಷ್ಟ್ರೀಯ ಚಿತ್ರಕಲಾವಿದರ ಶಿಬಿರ ಆಳ್ವಾಸ್ ವರ್ಣ ವಿರಾಸತ್-2018ರಲ್ಲಿ ಎಕ್ರಿಲಿಕ್ ಮಾಧ್ಯಮದಲ್ಲಿ ಸಿದ್ಧವಾದ ಚಿತ್ರಗಳ ಸಹಿತ ಅಪರೂಪದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಆಸಕ್ತರು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ವೀಕ್ಷಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಸಿಟಿ ಸೆಂಟರ್ ಬಳಿ ಹೊತ್ತಿ ಉರಿದ ಕಾರು… ಮಹಿಳೆ ಪಾರು
ಆಳ್ವಾಸ್ ವಿರಾಸತ್‌ಗೆ ತೆರೆ; ಮೂಡುಬಿದಿರೆಯಲ್ಲಿ 6 ದಿನ ಕಳೆಗಟ್ಟಿದ್ದ ಸಂಭ್ರಮ
Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು
ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು
Mangaluru: ಮೂಲಗೇಣಿ ಹಕ್ಕು ಸದನದಲ್ಲಿ ಚರ್ಚೆ: ಐವನ್ ಡಿ’ಸೋಜಾ
MUST WATCH
ಹೊಸ ಸೇರ್ಪಡೆ
Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ
Madikeri: ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ – ಆರೋಪಿ ಪರಾರಿ
Parliament: ʼಪ್ಯಾಲೆಸ್ತೀನ್ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!
KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.