ಅಮರಪಟ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 150ರ ಸಂಭ್ರಮ

"ಮುನಿಸು ತರವೇ ಮುಗುದೇ'-ಕವಿ ಸುಬ್ರಾಯ ಚೊಕ್ಕಾಡಿ ಕಲಿತ ಶಾಲೆ

Team Udayavani, Nov 21, 2019, 5:18 AM IST

gg-23

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1869 ಶಾಲೆ ಆರಂಭ (ಅಂದಾಜು)
ಪ್ರಸ್ತುತ 100 ವಿದ್ಯಾರ್ಥಿಗಳು

ಸುಳ್ಯ: ಊರವರು ಈಗಲೂ ಅಜ್ಜನಗದ್ದೆ ಶಾಲೆ ಎಂದೇ ಅಕ್ಕರೆ ತೋರುವ ತಾಲೂಕಿನ ಅತಿ ಹಿರಿಯ ಶಾಲೆ ಎಂಬ ಹೆಗ್ಗಳಿಕೆ ಇರುವ ಅಮರಪಟ್ನೂರು ಸ.ಹಿ.ಪ್ರಾ.ಶಾಲೆ ಈಗ 150ನೇ ವರ್ಷ. ಲಭ್ಯ ಮಾಹಿತಿಗಳ ಪ್ರಕಾರ ಈ ಶಾಲೆಗೆ 150 ವರ್ಷ ದಾಟಿರಬಹುದು. ಈ ಬಾರಿಯ ಶೈಕ್ಷಣಿಕ ಅವಧಿಯಲ್ಲಿ 150 ವರ್ಷ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಅದಕ್ಕಾಗಿ ಸಮಿತಿ ರಚನೆ ಆಗಿದೆ.

ಶಾಲೆ ಇತಿಹಾಸ
ಪ್ರಾರಂಭದಲ್ಲಿ ಚೊಕ್ಕಾಡಿಕಟ್ಟೆಯಲ್ಲಿ ಐಗಳ ಶಾಲೆ ಆಗಿತ್ತು ಎನ್ನುತ್ತದೆ ಲಭ್ಯ ಮಾಹಿತಿ. ಅಲ್ಲಿ ಎಷ್ಟು ವರ್ಷ ಇದ್ದಿರಬಹುದು ಎಂಬ ಬಗ್ಗೆ ದಾಖಲೆಗಳು ಇಲ್ಲ. ಈ ಶಾಲೆ ಆರಂಭದ ಹಿಂದೆ ಊರವರ ಪ್ರಯತ್ನ ಇದ್ದು, ಸ್ಥಾಪನೆಗೆ ಶ್ರಮಿಸಿದ ಪ್ರಮುಖರ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಅದಾದ ಬಳಿಕ ಅಜ್ಜನಗದ್ದೆಗೆ (ಈಗಿನ ಅಮರಪಟ್ನೂರು) ಸ್ಥಳಾಂತರವಾಯಿತು. ಸ್ಥಳೀಯ ಬೋರ್ಡ್‌, ಅನಂತರ ಜಿಲ್ಲಾ ಬೋರ್ಡ್‌ ಆಡಳಿತಕ್ಕೆ ಒಳಪಟ್ಟಿತ್ತು. 1926ರ ನ. 29ರಂದು ಮಂಜೂರಾತಿ ದೊರೆತಿದೆ. ಶಾಲೆ ಪ್ರಾರಂಭವಾದ ಅನಂತರ 85 ವರ್ಷಕ್ಕೂ ಅಧಿಕ ಕಾಲ ಎಲಿಮೆಂಟರಿ ಶಾಲೆ ಆಗಿತ್ತು.

ಈ ಶಾಲೆಗೆ ಸ್ವಂತ ಜಾಗದ ಕಟ್ಟಡ ಸಮಸ್ಯೆ ಉಂಟಾದ ಸಂದರ್ಭ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅಜ್ಜನ ತಂದೆ (ಮುತ್ತಜ್ಜ) ಗಣಪಯ್ಯ ಅವರು ಅರ್ಧ ಎಕ್ರೆಯಷ್ಟು ಸ್ವಂತ ಸ್ಥಳದಲ್ಲಿ (ಈಗಿರುವ ಶಾಲಾ ಪ್ರದೇಶ) ಮಣ್ಣಿನ ಗೋಡೆಯ ಕಟ್ಟಡ ಕಟ್ಟಿ ಶಾಲೆ ನಡೆಸಲು ಸಹಕಾರ ನೀಡಿದರು. ಅದಕ್ಕಾಗಿ ವರ್ಷಕ್ಕೆ 6 ರೂ. ಬಾಡಿಗೆ ಅನ್ನು ಅವರಿಗೆ ನೀಡಲಾಗುತ್ತಿತ್ತು. ಅನಂತರ ಶಾಲೆಗೆ ಸ್ವಂತ ಜಾಗ, ಕಟ್ಟಡ ವ್ಯವಸ್ಥೆ ಆಗಿ ಹಂತ ಹಂತವಾಗಿ ಪ್ರಗತಿ ಕಂಡಿತು.

ಶಾಲೆ ಉಳಿವಿಗೆ ಭೂದಾನ
1950-51ರಲ್ಲಿ ಈ ಶಾಲೆಗೆ ಸ್ವಂತ ಜಾಗ ಇಲ್ಲ ಎಂಬ ಕಾರಣಕ್ಕೆ ಕುಕ್ಕುಜಡ್ಕಕ್ಕೆ ವರ್ಗಾಯಿಸುವ ಪ್ರಯತ್ನ ನಡೆಯಿತು. ಆಗ ಶಾಲಾ ಅಧ್ಯಕ್ಷರಾಗಿದ್ದ ಎಸ್‌. ಸುಬ್ರಾಯ ಅವರ ನೇತೃತ್ವದಲ್ಲಿ ಗ್ರಾಮಸ್ಥರು 1951ರ ಡಿ. 22 ರಂದು ಸಭೆ ಸೇರಿದರು. ಶಾಲೆ ವರ್ಗಾಯಿಸದಂತೆ ಜಿಲ್ಲಾ ಬೋರ್ಡ್‌ ಅಧ್ಯಕ್ಷರನ್ನು ಕೇಳಿಕೊಳ್ಳುವ ನಿರ್ಣಯ ಕೈಗೊಂಡರು. ಶಾಲೆ ಇರುವ ಖಾಸಗಿ ಜಾಗ, ಕಟ್ಟಡವನ್ನು ದಾನಪತ್ರ ರೂಪದಲ್ಲಿ ಗಣಪಯ್ಯ ಅವರ ಕುಟುಂಬಸ್ಥರು ಜಿಲ್ಲಾ ಬೋರ್ಡ್‌ ಕಮಿಟಿಗೆ ಹಸ್ತಾಂತರಿಸಿದರು. ಸಭೆ ನಿರ್ಣಯದಂತೆ ಪೈಲೂರು ಕೃಷ್ಣಯ್ಯ ಅವರ ನೇತೃತ್ವದಲ್ಲಿ ಮಂಗಳೂರಿಗೆ ತೆರಳಿ ಜಿಲ್ಲಾ ಬೋರ್ಡ್‌ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಈ ಎಲ್ಲ ಪ್ರಯತ್ನದ ಫಲವಾಗಿ ಶಾಲೆ ಇಲ್ಲಿ ಉಳಿಯಿತು. ಜತೆಗೆ ಕುಕ್ಕುಜಡ್ಕದಲ್ಲಿ ಹೊಸ ಶಾಲೆ ತೆರೆಯುವಂತಾಯಿತು ಎನ್ನುತ್ತಾರೆ ಗ್ರಾಮದ ಹಿರಿಯರು.

ಶಾಲಾ ಪ್ರಗತಿ
1950ರಿಂದ 1979ರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಎಸ್‌. ಸುಬ್ರಾಯ ಅಜ್ಜನಗದ್ದೆ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಗರಿಷ್ಠ ಅವಧಿಗೆ ಅವರೆ ಅಧ್ಯಕ್ಷರಾಗಿದ್ದರು. ಕೆ. ಗಣಪಯ್ಯ ಅವರು ಮುಖ್ಯಗುರುವಾಗಿದ್ದ ಸಂದರ್ಭ 40 ಅಡಿ ಉದ್ದದ ಶಾಲಾ ಕಟ್ಟಡ, ಪಿಠೊಪಕರಣ, ಆಟದ ಬಯಲು, ನೀರಿನ ಬಾವಿ ಮೊದಲಾದ ಅಭಿವೃದ್ಧಿ ಕಾಮಗಾರಿ ನಡೆಯಿತು. ಅನಂತರ ಸರಕಾರದ ಬೇರೆ ಯೋಜನೆಯಡಿ ಅಭಿವೃದ್ಧಿ ಕೆಲಸಗಳು ಆಗಿವೆ.

330ಕ್ಕೂ ಅಧಿಕ ವಿದ್ಯಾರ್ಥಿಗಳು
1950ರಲ್ಲಿ ಶಾಲೆಯಲ್ಲಿ 87 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಇದ್ದರು. ಅದರ ಹಿಂದಿನ ಅಂಕಿ ಅಂಶಗಳು ದಾಖಲಾಗಿಲ್ಲ. ಈ ಶಾಲೆ ಹೈಯರ್‌ ಪ್ರೈಮರಿ ಆದ ಬಳಿಕ 1974ರಲ್ಲಿ 157 ಮಕ್ಕಳಿದ್ದರು. ಕ್ರಮೇಣ ಸಂಖ್ಯೆ 350 ದಾಟಿದ್ದು ಇದೆ. ಪ್ರಸ್ತುತ 1ರಿಂದ 8ನೇ ತರಗತಿ ತನಕ ಇದ್ದು 100 ಮಕ್ಕಳಿದ್ದಾರೆ. 6 ಮಂದಿ ಶಿಕ್ಷಕರಿದ್ದಾರೆ.

ಊರಿನ ಏಕೈಕ ಶಾಲೆ
ಆ ಕಾಲದಲ್ಲಿ ಪುತ್ತೂರು ತಾಲೂಕಿಗೆ ಸೇರಿದ್ದ ಸುಳ್ಯದಲ್ಲಿ ಇದ್ದದ್ದು ಅಮರಪಟ್ನೂರು ಮತ್ತು ಸಂಪಾಜೆ ಕಿರಿಯ ಪ್ರಾಥಮಿಕ ಶಾಲೆ. ಹೀಗಾಗಿ ಕುಕ್ಕುಜಡ್ಕ, ಶೇಣಿ, ಚೊಕ್ಕಾಡಿ, ಐವರ್ನಾಡು ಸೇರಿದಂತೆ ತಾಲೂಕಿನ ವಿವಿಧ ಭಾಗದಿಂದ ಕಲಿಕೆಗೆ ಬರುತ್ತಿದ್ದರು. ಪ್ರಸ್ತುತ ಕುಕ್ಕುಜಡ್ಕ, ಚೊಕ್ಕಾಡಿ ಪರಿಸರದಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳು ಇವೆ.

ಸಾಧಕರು
ಮುಖ್ಯವಾಗಿ “ಮುನಿಸು ತರವೇ ಮುಗುದೇ’ ಪದ್ಯ ರಚಿಸಿದ್ದ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಸಹಿತ ಅನೇಕರು ಇಲ್ಲಿನ ಹಳೆ ವಿದ್ಯಾರ್ಥಿಗಳು. ನೂರಾರು ಮಂದಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ನನ್ನ ಮುತ್ತಜ್ಜ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಿ ಶಾಲೆ ನಡೆಸಲು ನೀಡಿದ್ದರು. ಇದಕ್ಕಾಗಿ ವಾರ್ಷಿಕ 6 ರೂ. ಸಂದಾಯವಾಗುತ್ತಿತ್ತು. 69 ವರ್ಷದ ಹಿಂದೆ ಸ್ವಂತ ಜಾಗ ಇಲ್ಲದ ಕಾರಣ ಕುಕ್ಕುಜಡ್ಕಕ್ಕೆ ಶಾಲೆ ವರ್ಗಾವಣೆಗೆ ಪ್ರಯತ್ನ ನಡೆದಿತ್ತು. ಆಗ ಈ ಊರಿನ ಹಿರಿಯರು ಈ ಸ್ಥಳ ಮಾರಾಟ ರೂಪದಲ್ಲಿ ನೀಡುವಂತೆ ಕೇಳಿಕೊಂಡಿದ್ದರು. ನನ್ನ ಅಜ್ಜ ಹಾಗೂ ಮನೆಯವರು ಸೇರಿ ತೀರ್ಮಾನ ಮಾಡಿ ಮಾರಾಟ ಮಾಡುವ ಬದಲು ಜಾಗವನ್ನು ದಾನರೂಪದಲ್ಲಿ ಶಾಲೆಗೆ ನೀಡಿದ್ದರು. ನನ್ನ ಮುತ್ತಜ್ಜನಿಂದ ತೊಡಗಿ ಮೊಮ್ಮಕ್ಕಳ ತನಕ ನಾವೆಲ್ಲರೂ ಇದೇ ಶಾಲೆಯಲ್ಲಿ ಕಲಿತದ್ದು. ನಾನು 1946ರಿಂದ 1951ರ ಅವಧಿಯಲ್ಲಿ ಇಲ್ಲಿನ ವಿದ್ಯಾರ್ಥಿಯಾಗಿದ್ದೆ.
-ಸುಬ್ರಾಯ ಚೊಕ್ಕಾಡಿ , ಕವಿ ಮತ್ತು ಶಾಲಾ ಹಳೆ ವಿದ್ಯಾರ್ಥಿ

ಲಭ್ಯ ಮಾಹಿತಿ ಪ್ರಕಾರ ಶಾಲೆಗೆ 150 ವರ್ಷ ಆಗಿದೆ. ಈ ವರ್ಷ ಸಾಧೈಕ ಶತಮಾನೋತ್ಸವ ಆಚರಿಸಲು ಸಮಿತಿ ರಚಿಸಲಾಗಿದೆ. ಪ್ರಸ್ತುತ 100 ಮಕ್ಕಳಿದ್ದು, 8ನೇ ತರಗತಿ ತನಕ ಕಲಿಕೆ ನಡೆಯುತ್ತಿದೆ.
-ರಮಾಕಿಶೋರಿ ಕೆ., ಮುಖ್ಯಶಿಕ್ಷಕಿ

- ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

Social Media: In this country, people under the age of 16 cannot use Instagram, Facebook!

Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.