‘ಅಂಬೇಡ್ಕರ್ ಸತ್ಯ, ನ್ಯಾಯಗಳ ಆರಾಧಕರು’
Team Udayavani, Apr 18, 2018, 2:39 PM IST
ಉರ್ವಾ: ಅಂಬೇಡ್ಕರ್ ಅವರು ಸತ್ಯ, ನ್ಯಾಯಗಳ ಶ್ರೇಷ್ಠ ಆರಾಧಕರು. ಭಾರತ ಕಂಡ ಹಿರಿಯ ಮುತ್ಸದ್ಧಿ. ಅಸ್ಪೃಶ್ಯತೆಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದ ಹಿರಿಯ ಮಾನವತಾವಾದಿ ಎಂದು ಲೇಖಕಿ ಅರುಣಾ ನಾಗರಾಜ್ ಅಭಿಪ್ರಾಯಪಟ್ಟರು. ಉರ್ವ ಮಂಗಳಾ ಮಹಿಳಾ ಮಂಡಳಿ ವತಿಯಿಂದ ಅಂಗನವಾಡಿ ಕೇಂದ್ರ ದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವನಕ್ರಮ ಆದರ್ಶ
ಸರ್ವ ಸಮಾನತೆಯಿಂದ ಹೃದಯಗಳನ್ನು ಬೆಸೆಯುವ ಮನಸ್ಸುಗಳ ಸೇತುವೆ ನಿರ್ಮಾಣ ಮಾಡಬೇಕೆಂದು ಪಣತೊಟ್ಟವರು ಅಂಬೇಡ್ಕರ್. ಅವರ ಕಾಯಕನಿಷ್ಠೆ, ಕಠಿನ ಪರಿಶ್ರಮ, ಶಿಸ್ತು, ಜೀವನಪ್ರೀತಿ ಇಂದಿನ ಪೀಳಿಗೆಗೆ ಆದರ್ಶ ಎಂದರು.
ಪ್ರತಿಜ್ಞೆ
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ‘ನಾನು ಮತದಾನ ಮಾಡುತ್ತೇನೆ’ ಎಂಬುದಾಗಿ ಸದಸ್ಯೆಯರು ಪ್ರತಿಜ್ಞೆಗೈದರು. ನ್ಯಾಯವಾದಿ ಪುಷ್ಪಲತಾ ಗಟ್ಟಿ ಅವರು, ಕಾನೂನಿನಲ್ಲಿ ಮಹಿಳೆಯರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಂಡಳಿಯ ಖಜಾಂಚಿ ಸುಗಂಧಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಂತಾ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.