ಕಾಯ್ದೆಗೆ ತಿದ್ದುಪಡಿ ತಂದು ಮತ್ತೆ ಅರ್ಜಿ ಸ್ವೀಕಾರ
ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ಅಪೂರ್ಣ ಅವಧಿ ತೊಡಕು
Team Udayavani, Sep 26, 2019, 5:02 AM IST
ಪುತ್ತೂರು: ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ-57ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಗೆ ಅರ್ಜಿ ಸಲ್ಲಿಕೆ ಅವಧಿ ಅಪೂರ್ಣವಾಗಿರುವುದು ತೊಡಕಾಗಿ ಪರಿಣಮಿಸಿದೆ. ಕೊನೆ ದಿನಾಂಕ ಮುಗಿಯುವ ಮುನ್ನ ಲೋಕಸಭಾ ಚುನಾವಣೆ ಘೋಷಣೆಯಾದದ್ದೇ ಇಂತಹ ಸಂದಿಗ್ಧಕ್ಕೆ ಕಾರಣ.
ನೀತಿಸಂಹಿತೆ ಜಾರಿಯಿಂದ ಅರ್ಜಿ ಸಲ್ಲಿಕೆ ಅವಧಿ ಪೂರ್ಣವಾಗಿರಲಿಲ್ಲ. ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೂ ಅಡ್ಡಿಯಾಗಿದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತಂದು ಹೊಸದಾಗಿ ಅರ್ಜಿ ಸ್ವೀಕಾರ ಮತ್ತು ಅಂತಿಮ ದಿನಾಂಕ ನಿಗಪಡಿಸಲು ಸರಕಾರ ಚಿಂತನೆ ನಡೆಸಿದೆ.
ಅವಧಿ ಅಪೂರ್ಣ
1964ರ ಕಲಂ 94ಎ (4)ಗೆ 2018ರ ಮಾ. 17ರಂದು ತಿದ್ದುಪಡಿ ತಂದು 2018ರ ಅ. 25ರಂದು ಮಾರ್ಗಸೂಚಿ ಪ್ರಕಟಿಸಲಾಗಿತ್ತು. 2019ರ ಮಾ. 16ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆ ದಿನ ನಿಗದಿಪಡಿಸಿ ಸುತ್ತೋಲೆ ಹೊರಡಿಸ
ಲಾಗಿತ್ತು. ಮಾ. 10ರಿಂದ ನೀತಿಸಂಹಿತೆ ಜಾರಿಗೊಂಡದ್ದು ಕೊನೆಯ 6 ದಿನ ಅರ್ಜಿ ಸಲ್ಲಿಸಲು ಅಡ್ಡಿಯಾಗಿತ್ತು. ಇದರಿಂದ ಮಾ. 16 ಕೊನೆಯ ದಿನಾಂಕ ಎಂದು ಪರಿಗಣಿಸಲು ಸಾಧ್ಯವಾಗದೆ ಇಡೀ ಪ್ರಕ್ರಿಯೆಯೇ ಅರ್ಧಕ್ಕೆ ನಿಂತುಬಿಟ್ಟಿದೆ. ವಿಲೇವಾರಿಗೂ ತೊಡಕು ಶಾಸಕರ ಅಧ್ಯಕ್ಷತೆಯ ಅಕ್ರಮ-ಸಕ್ರಮ ಸಮಿತಿ ಅರ್ಜಿ ವಿಲೇವಾರಿಯ ಅಧಿಕಾರ ಹೊಂದಿದೆ. ಸರಕಾರ ಕಾಯ್ದೆಗೆ ತಿದ್ದುಪಡಿ ತಂದು, ಹೊಸ ಅಂತಿಮ ದಿನಾಂಕ ನಿಗದಿಪಡಿಸಿದ ಬಳಿಕವೇ ಸಮಿತಿ ಅರ್ಜಿ ವಿಲೇ ಮಾಡಬಹುದು ಅನ್ನುವುದು ಕಂದಾಯ ಅಧಿಕಾರಿಗಳ ಅಭಿಪ್ರಾಯ. ಕಾಯ್ದೆಗೆ ತಿದ್ದುಪಡಿ ತಂದಲ್ಲಿ ಚುನಾವಣ ನೀತಿಸಂಹಿತೆ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಇದ್ದವರಿಗೆ ಮತ್ತೆ ಅವಕಾಶ ಸಿಗಲಿದೆ.
ಮೂರು ಅವಕಾಶ
1964ರ ಕರ್ನಾಟಕ ಭೂ ಕಂದಾಯ ಕಾಯ್ದೆಗೆ 1991ರಲ್ಲಿ ತಿದ್ದುಪಡಿ ತಂದು ನಮೂನೆ-50ರಲ್ಲಿ ಆರು ತಿಂಗಳ ಕಾಲ ಅರ್ಜಿ ಸ್ವೀಕಾರ ನಡೆದಿತ್ತು. ಬಾಕಿ ಉಳಿದವರಿಗೆ 1998ರ ನ. 1ರಿಂದ 1999ರ ಎ. 30ರ ವರೆಗೆ ನಮೂನೆ-53ರಲ್ಲಿ ಮತ್ತು 2018ರ ನವೆಂಬರ್‌ನಿಂದ ನಮೂನೆ -57ರಲ್ಲಿ ಅರ್ಜಿ ಸಲ್ಲಿಸಲು ನೀಡಲಾಗಿತ್ತು. ಹಾಗಾಗಿ ಇದು ಮೂರನೆಯ ಅವಕಾಶ.
ಇದುವರೆಗೆ ಆದ ಸಾಗುವಳಿ ಸಕ್ರಮ
ನಮೂನೆ 50 ಮತ್ತು 53ರಲ್ಲಿ ಉಭಯ ಜಿಲ್ಲೆಗಳಲ್ಲಿ 1,02,934 ಅರ್ಜಿದಾರರ 3.47 ಲಕ್ಷ ಎಕರೆ ಅನಧಿಕೃತ ಸಾಗುವಳಿ ಭೂಮಿ ಸಕ್ರಮವಾಗಿದೆ.
ಗರಿಷ್ಠ-ಕನಿಷ್ಠ
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 2.34 ಲಕ್ಷ ಎಕರೆ ಅನಧಿಕೃತ ಸಾಗುವಳಿ ಸಕ್ರಮಕ್ಕೆ 1,26,576 ಅರ್ಜಿ ಸಲ್ಲಿಕೆಯಾಗಿವೆ. ದ.ಕ. ಜಿಲ್ಲೆಯಲ್ಲಿ 158,816.89 ಎಕರೆ ಸಾಗುವಳಿ ಸಕ್ರಮಕ್ಕೆ 88,549 ಅರ್ಜಿ ಮತ್ತು ಉಡುಪಿ ಜಿಲ್ಲೆಯಲ್ಲಿ 76,013.36 ಎಕರೆ ಸಕ್ರಮಕ್ಕೆ 38,027 ಅರ್ಜಿ ಸಲ್ಲಿಸಲಾಗಿದೆ. ಆಯಾ ತಾಲೂಕು ಕಚೇರಿ ಕಡತ ನಿರ್ವಾಹಕರು ನೀಡಿದ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 31,123 ಅರ್ಜಿ (ಗರಿಷ್ಠ), ಮೂಲ್ಕಿ 125 (ಕನಿಷ್ಠ) ಅರ್ಜಿ ಸಲ್ಲಿಕೆಯಾಗಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ 18,651 (ಗರಿಷ್ಠ), ಕಾಪುವಿನಲ್ಲಿ 206 (ಕನಿಷ್ಠ) ಸಲ್ಲಿಕೆಯಾಗಿದೆ.
ಕಾಯ್ದೆಗೆ ತಿದ್ದುಪಡಿ
ಅನಧಿಕೃತ ಸಾಗುವಳಿ ಸಕ್ರಮಕ್ಕೆ ನಮೂನೆ-57ರಲ್ಲಿ ಅರ್ಜಿ ಸಲ್ಲಿಕೆ ಸಂದರ್ಭ ಚುನಾವಣೆ ನೀತಿಸಂಹಿತೆ ಜಾರಿ ಆಗಿ ಅವಧಿ ಮುಂದಕ್ಕೆ ಹೋಯಿತು. ಮುಂದುವರಿಸಬೇಕಾದರೆ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ತತ್‌ಕ್ಷಣ ಸರಕಾರ ಪೂರಕ ಕ್ರಮ ಕೈಗೊಳ್ಳಲಿದೆ.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ, ದ.ಕ.
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.