ಅಮಿತ್ ಶಾನೆಟ್ಟಿದ್ದರುದ್ರಾಕ್ಷಿಗಿಡ ಮತ್ತೆ ಅವರನ್ನುಸ್ವಾಗತಿಸುತ್ತಿದೆ
Team Udayavani, Feb 15, 2018, 10:54 AM IST
ಮಹಾನಗರ: ಒಂದೂವರೆ ವರ್ಷ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನೆಟ್ಟಿದ್ದ ಮೂರು ಇಂಚಿನ ರುದ್ರಾಕ್ಷಿ ಗಿಡ ಜಿಲ್ಲೆಗೆ ಮತ್ತೆ ಅವರನ್ನು ಸ್ವಾಗತಿಸುತ್ತಿದೆ.
ದೇಶದ ಎಪ್ಪತ್ತನೇ ಸ್ವಾತಂತ್ರ್ಯ ಸಂಭ್ರಮ ಹಾಗೂ ಬಲಿದಾನ ಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ತಿರಂಗಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ನಗರಕ್ಕೆ ಆಗಮಿಸಿದಾಗ ಪಿವಿಎಸ್ ವೃತ್ತದ ಬಳಿಯ ಬಿಜೆಪಿ ಕಚೇರಿ ಎದುರು ರುದ್ರಾಕ್ಷಿ ಗಿಡವನ್ನು ನೆಟ್ಟಿದ್ದರು. ಇದೀಗ ಸುಮಾರು 12 ಇಂಚು ಬೆಳೆದಿದೆ.
ಒಂದೂವರೆ ವರ್ಷದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಫೆ. 19ರಿಂದ 21ರ ವರೆಗೆ ಪ್ರವಾಸ ಕೈಗೊಳ್ಳುವ ಸಂಭವವಿದೆ. ಶಾ ಪ್ರವಾಸ ಪಟ್ಟಿಯಲ್ಲಿ ಸದ್ಯಕ್ಕೆ ಬಿಜೆಪಿ ಕಚೇರಿ ಭೇಟಿ ಇಲ್ಲ. ಒಂದುವೇಳೆ ಭೇಟಿ ನೀಡಿದರೆ ತಾವು ನೆಟ್ಟ ಗಿಡವನ್ನು ನೋಡಬಹುದು.
ಬಾಟಲಿ ನೀರು ಹಾಕಬೇಡಿ!
ಗಿಡದ ಸುತ್ತ ಕಟ್ಟೆಯೊಂದಿಗೆ ಕಬ್ಬಿಣದ ಬೇಲಿ ಹಾಕಲಾಗಿದೆ. ಜತೆಗೆ ರುದ್ರಾಕ್ಷಿ ಗಿಡ ಪವಿತ್ರ. ಅದಕ್ಕೆ ಬಾಟಲಿ ನೀರು ಹಾಕಬೇಡಿ ಎಂದು ಬೋರ್ಡ್ ಹಾಕಲಾಗಿದೆ. ಪಕ್ಕದಲ್ಲೇ ಇರುವ ರಿಕ್ಷಾ ಸ್ಟಾಂಡ್‌ನ ಚಾಲಕರೂ ಗಿಡದ ಪೋಷಣೆಗೆ
ಸಹಕರಿಸುತ್ತಿದ್ದಾರೆ.
ಪಾವಿತ್ರ್ಯದ ಸಂಕೇತ
ರುದ್ರಾಕ್ಷಿ ಗಿಡ ಎಲ್ಲೆಡೆ ಬದುಕುವ ಸಾಧ್ಯತೆ ಕಡಿಮೆ. ಸದಾ ಇದರಲ್ಲಿ ಎಲೆ ಇರುವುದರಿಂದ ಮರದಡಿ ನೆರಳು ಸಾಮಾನ್ಯ. ದೀರ್ಘಕಾಲ ಬಾಳ್ವಿಕೆ ಬರುತ್ತ ದೆಂಬ ಕಾರಣಕ್ಕಾಗಿ ಇದನ್ನು ನೆಡಲು ತೀರ್ಮಾನಿಸಲಾಯಿತು ಎನ್ನುತ್ತಾರೆ ಬಿಜೆಪಿ ಮುಖಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.