Mangaluru ಅಮೃತ ವರ್ಷದಿಂದ ಭಾರತಕ್ಕೆ ಅಮೃತ ಕಾಲ
"ನನ್ನ ಮಣ್ಣು ನನ್ನ ದೇಶ' ಅಭಿಯಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ
Team Udayavani, Sep 10, 2023, 11:15 PM IST
ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತವು ಮುಂದಿನ 25 ವರ್ಷದಲ್ಲಿ ಅಭಿವೃದ್ಧಿಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದೊಂದಿಗೆ ಅಮೃತ ಕಾಲದೆಡೆಗೆ ದಾಪುಗಾಲು ಇಡಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಹುತಾತ್ಮರಾದ ದೇಶದ ಸ್ವಾತಂತ್ರÂ ಸೇನಾ ಯೋಧರು, ಪೊಲೀಸ್ ಅಧಿಕಾರಿಗಳ ಸ್ಮರಣಾರ್ಥ ಹೊಸ ದಿಲ್ಲಿಯ ಕರ್ತವ್ಯಪಥದಲ್ಲಿ ನಿರ್ಮಿಸ ಲಾಗುವ “ಅಮೃತ ವನ’ ನಿರ್ಮಾಣ ಪ್ರಯುಕ್ತ ದ.ಕ. ಜಿಲ್ಲೆಯ ಧಾರ್ಮಿಕ ಕ್ಷೇತ್ರ, ಹಳ್ಳಿ ಹಳ್ಳಿಗಳಿಂದ ಪವಿತ್ರ ಮಣ್ಣನ್ನು ಸಂಗ್ರಹಿಸುವ “ನನ್ನ ಮಣ್ಣು ನನ್ನ ದೇಶ’ ಅಭಿಯಾನ ಕಾರ್ಯಕ್ರಮಕ್ಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಹೊರಾಂಗಣದಲ್ಲಿ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣಕ್ಕಾಗಿ ದೇಶಾದ್ಯಂತ ಉಕ್ಕು ಸಂಗ್ರಹ ಮಾಡುವ ಮೂಲಕ ವಿನೂತನ ಕ್ರಾಂತಿ ನಡೆದಿತ್ತು. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ವಿವಿಧ ಯಾತ್ರೆಗಳ ಮೂಲಕ ಹೊಸ ಸಂಚಲನ ಸೃಷ್ಟಿಯಾಗಿತ್ತು. ಇದೇ ಸ್ವರೂಪದಲ್ಲಿ ಇದೀಗ ಮೂರನೇ ದೊಡ್ಡ ಜಾಗೃತಿ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೆತ್ತಿಕೊಂಡಿದ್ದಾರೆ. ದೇಶದ ಪ್ರತೀ ಮಣ್ಣು ಪವಿತ್ರ ಎಂಬ ನೆಲೆಯಿಂದ ಹಳ್ಳಿ ಹಳ್ಳಿಯ ಮಣ್ಣು, ಪುಣ್ಯ ಕ್ಷೇತ್ರದ ಮಣ್ಣು ಸಂಗ್ರಹಿಸಿ ದಿಲ್ಲಿಯಲ್ಲಿ ಅಮೃತ ವನ ನಿರ್ಮಾಣ ಯೋಜನೆ ಕೈಗೊಂಡಿರುವುದು ಅದ್ವಿತೀಯ ಕಾರ್ಯ ಎಂದರು.
ಭಾರತದಲ್ಲಿ ಮಣ್ಣು, ನೀರು, ಗಾಳಿ, ಗೋವು, ಹಾವು ಸಹಿತ ಪ್ರಕೃತಿಯನ್ನು ದೇವರಂತೆ ಕಾಣಲಾಗುತ್ತಿದೆ. ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲದ ಇಂತಹ ಪೂಜ್ಯ ಪರಿಕಲ್ಪನೆಯಿಂದ ಭಾರತ ಶ್ರೇಷ್ಠ ಭಾರತವಾಗಿ ಮೂಡಿಬಂದಿದೆ. ರಾಷ್ಟ್ರಭಕ್ತಿಯ ಜಾಗೃತಿ ದೇಶದಲ್ಲಿ ಮೋದಿಯವರ ಮೂಲಕ ಸಾಕಾರವಾಗುತ್ತಿದೆ ಎಂದರು.
ಜೋಡೋ ಭಾರತ್ ಅಂದವರಿಗೆ ಭಾರತ ಬೇಡವೇ: ಶಾಸಕ ಕಾಮತ್
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ದೇಶದ 7 ಸಾವಿರಕ್ಕೂ ಅಧಿಕ ಸ್ಥಳದಿಂದ ಮಣ್ಣು ಸಂಗ್ರಹಿಸಿ ದಿಲ್ಲಿಯಲ್ಲಿ ಅಮೃತವನ ಸಾಕಾರವಾಗಲಿದೆ. ಇಂಡಿಯಾ ಬದಲಿಗೆ ಭಾರತ ಎಂಬ ಪರಿಕಲ್ಪನೆಯೇ ರೋಮಾಂಚನಕಾರಿ ಸಂಗತಿ. ಜೋಡೋ ಭಾರತ್ ಮಾಡಿದವರಿಗೆ ಈಗ ಭಾರತ ಅಂದಾಗ ಸಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ವಿಪರ್ಯಾಸ. ಹಬ್ಬ ಹರಿದಿನಗಳಿಗೆ ಹಲವು ನಿಯಮಾವಳಿಯ ಮೂಲಕ ರಾಜ್ಯ ಸರಕಾರ ನಿರ್ಬಂಧಗಳನ್ನು ಹಾಕುತ್ತಿರುವುದು ಹಿಂದೂ ಧಾರ್ಮಿಕತೆಗೆ ದೊಡ್ಡ ಪೆಟ್ಟು ನೀಡುತ್ತಿದೆ ಎಂದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಶಾಸಕರಾದ ಡಾ| ವೈ.ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳ್ಯರ್ ಸ್ವಾಗತಿಸಿದರು. ಸಂದೇಶ್ ಶೆಟ್ಟಿ ನಿರೂ ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫಲ
Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್
Mangaluru: ಮತ್ತೆ ಫ್ಲೆಕ್ಸ್ , ಬ್ಯಾನರ್‌ಗಳ ಉಪಟಳ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.