ಸಕ್ರಿಯವಾದ “ಡಿಜಿಟಲ್‌ ಮಾರ್ಕೆಟಿಂಗ್‌’ ವಂಚನ ಜಾಲ

ಹಣ ದ್ವಿಗುಣ, ಉದ್ಯೋಗ ಆಮಿಷ; ಯುವಜನರೇ ಗುರಿ

Team Udayavani, Feb 26, 2023, 6:53 AM IST

ಸಕ್ರಿಯವಾದ “ಡಿಜಿಟಲ್‌ ಮಾರ್ಕೆಟಿಂಗ್‌’ ವಂಚನ ಜಾಲ

ಮಂಗಳೂರು: ಉದ್ಯೋಗ, ಹೆಚ್ಚು ಹಣ ಗಳಿಸಬೇಕೆಂಬ ಯುವಜನತೆಯ ಆಸೆ, ಅಗತ್ಯವನ್ನೇ ವಂಚನ ಅಸ್ತ್ರವಾಗಿ ಪ್ರಯೋಗಿಸು ತ್ತಿರುವ ಸೈಬರ್‌ ವಂಚಕರು “ಡಿಜಿಟಲ್‌ ಮಾರ್ಕೆ ಟಿಂಗ್‌’ ಬಲೆಯನ್ನು ಕರಾವಳಿಗೂ ವಿಸ್ತರಿಸಿದ್ದಾರೆ.
“ಅರೆಕಾಲಿಕ ಉದ್ಯೋಗ, ಪೂರ್ಣಕಾಲಿಕ ಉದ್ಯೋಗ’ ಎಂಬ ಜಾಹೀರಾತು ನೀಡಿ ಬಳಿಕ ಡಿಜಿಟಲ್‌ ಮಾರ್ಕೆಟಿಂಗ್‌ ನೆಟ್‌ವರ್ಕ್‌ಗೆ ಆನ್‌ಲೈನ್‌ನಲ್ಲೇ ಸದಸ್ಯರನ್ನಾಗಿಸಿಕೊಳ್ಳುತ್ತಾರೆ.

ಆನ್‌ಲೈನ್‌ನಲ್ಲೇ ಖಾತೆ ತೆರೆದು ಅದರಲ್ಲಿಯೇ ಹಣದ ವ್ಯವಹಾರ ನಮೂದಿಸುತ್ತಿರುವಂತೆ ತೋರಿಸುತ್ತಾರೆ. ಹೂಡಿಕೆ ಮಾಡುವ ಹಣ ದ್ವಿಗುಣ ವಾಗುತ್ತದೆ ಎಂದು ನಂಬಿಸುತ್ತಾರೆ. ಕೆಲವೊಮ್ಮೆ ಆರಂಭಿಕವಾಗಿ ಹೂಡಿಕೆ ಹಣವನ್ನು ವಾಪಸ್‌ ನೀಡುತ್ತಾರೆ. ಇನ್ನು ಕೆಲವೊಮ್ಮೆ ಮೊದಲು ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿಸಿ ನೀಡುತ್ತಾರೆ. ಅದನ್ನು ಆನ್‌ಲೈನ್‌ನಲ್ಲಿರುವ ಖಾತೆಯಲ್ಲಿಯೂ ತೋರಿಸುತ್ತಾರೆ. ಇದು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿ ಮುಂದೆ ಹೆಚ್ಚು ಹೂಡಿಕೆ ಮಾಡಲು ಪ್ರೇರಣೆ ನೀಡುತ್ತದೆ. ಅನಂತರ ಹೂಡಿದ ಹಣವೇ ಸಿಗುವುದಿಲ್ಲ. ಆ ವೆಬ್‌ಸೈಟ್‌ ಲಿಂಕ್‌ ಕೂಡ ಸಿಗುವುದಿಲ್ಲ. ಈ ಜಾಲಕ್ಕೆ ಕರಾವಳಿ ಜಿಲ್ಲೆಗಳಲ್ಲಿಯೂ ಅನೇಕ ಮಂದಿ ಯುವಜನತೆ ಬೀಳುತ್ತಿರುವುದು ಪೊಲೀಸ್‌ ಇಲಾಖೆಯ ಗಮನಕ್ಕೆ ಬಂದಿದೆ.

ಪೋನಿl ಸ್ಕೀಮ್‌, ಕ್ರಿಪ್ಟೊ ವ್ಯವಹಾರ
ಸದ್ಯ ಡಿಜಿಟಿಲ್‌ ಮಾರ್ಕೆಟಿಂಗ್‌ ವಂಚನೆಯಲ್ಲಿ ಪೋನಿl (ಟಟnzಜಿ scಜಛಿಞಛಿ) ಮತ್ತು ಕ್ರಿಪ್ಟೋ ಕರೆನ್ಸಿ ವ್ಯವಹಾರ ಜಾಲಗಳು ಹೆಚ್ಚು ಸಕ್ರಿಯವಾಗಿವೆ. ಇದರ ಜತೆಗೆ ಕ್ಯುಆರ್‌ ಕೋಡ್‌, ಕೆವೈಸಿ ಅಪ್‌ಡೇಟ್‌, ಲಾಟರಿ, ಆನ್‌ಲೈನ್‌ ಮಾರ್ಕೆಟ್‌ ಮೊದ ಲಾದ ವಂಚನೆಗಳು ಕೂಡ ವ್ಯಾಪಕವಾಗಿ ನಡೆಯು ತ್ತಿವೆ. ಯಾರಿಗೆ ಯಾವುದರ ಅಗತ್ಯವಿದೆ ಎಂಬು ದನ್ನು ಆನ್‌ಲೈನ್‌ನಲ್ಲಿಯೇ ವಿವಿಧ ಕಳ್ಳದಾರಿ ಮೂಲಕ ಅಧ್ಯಯನ ಮಾಡುವ ವಂಚಕರು ಅದಕ್ಕೆ ತಕ್ಕಂತೆ ಬಲೆ ಹೆಣೆಯುತ್ತಾರೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು ಮತ್ತು ಪೊಲೀಸರು.

ಫೋನ್‌ನ ಮಾಹಿತಿ ಸುರಕ್ಷಿತವಲ್ಲ
ಫೋನ್‌ನಲ್ಲಿರುವ ಎಲ್ಲ ಮಾಹಿತಿ ಸುರಕ್ಷಿತ ವಲ್ಲ. ಆ್ಯಪ್‌ ಡೌನ್‌ಲೋಡ್‌ ಮಾಡುವಾಗ ನಾವೇ ಕೆಲವು ಪರ್ಮಿಷನ್‌ (ಆ್ಯಕ್ಸೆಸ್‌) ನೀಡಿರು ತ್ತೇವೆ. ಕೆಮರಾ, ಜಿಪಿಎಸ್‌ ಲೊಕೇಶನ್‌, ಗ್ಯಾಲರಿ, ಕಾಂಟ್ಯಾಕ್ಟ್, ಎಸ್‌ಎಂಎಸ್‌ ಮೊದಲಾದ ಪರ್ಮಿ ಷನ್‌ಗಳನ್ನು ಆ್ಯಪ್‌ಗ್ಳು ಕೇಳುತ್ತವೆ. ಅದನ್ನು ನೀಡಿರುತ್ತೇವೆ. ಇದರಿಂದಾಗಿ ನಮ್ಮ ಮೊಬೈಲ್‌ನ ಹಲವು ಚಟುವಟಿಕೆಗಳನ್ನು ಕದಿಯುವ ಅಪಾಯ ಇರುತ್ತದೆ. ನಾವು ಡೌನ್‌ಲೋಡ್‌ ಮಾಡಿ ಕೊಳ್ಳುವ ಕೆಲವು ಆ್ಯಪ್‌ನವರೇ ನಮ್ಮ ಮಾಹಿತಿ ಕದ್ದು ಬೇರೆಯವರಿಗೆ ಮಾರಾಟ ಮಾಡುವ ಸಾಧ್ಯತೆಯೂ ಇರುತ್ತವೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞ ಡಾ| ಅನಂತ ಪ್ರಭು ಜಿ. ಅವರು.

ಫೈನಾನ್ಶಿಯಲ್‌ ಪ್ರೊಫೈಲಿಂಗ್‌
ಡಿಜಿಟಲ್‌ ಟ್ರಾನ್ಸಾಕ್ಷನ್‌ ಮೂಲಕ ನಾವು ಎಲ್ಲಿ, ಯಾವುದಕ್ಕೆ ಹಣ ಖರ್ಚು ಮಾಡುತ್ತೇವೆ, ಎಷ್ಟು ಹಣ ಬ್ಯಾಲೆನ್ಸ್‌ ಇದೆ, ಅಗತ್ಯವೇನು, ಯಾವುದಕ್ಕೆ ಹೂಡಿಕೆ ಮಾಡುವ ಆಸಕ್ತಿ ಇದೆ ಎಂಬ ಮಾಹಿತಿಯನ್ನು ಕೂಡ ತಿಳಿದುಕೊಳ್ಳುವ ವಂಚಕರು ಅದಕ್ಕೆ ತಕ್ಕಂತೆ “ಫೈನಾನ್ಶಿಯಲ್‌ ಪ್ರೊಫೈಲಿಂಗ್‌’ ಸಿದ್ಧಪಡಿಸಿ ಅದಕ್ಕೆ ಪೂರಕವಾಗಿ ವಂಚನಾ ಜಾಲ ಹೆಣೆಯುತ್ತಾರೆ. ಅದೇ ರೀತಿಯ ಜಾಹೀರಾತು, ಲಿಂಕ್‌ಗಳನ್ನು ಕಳುಹಿಸಿ ಆಕರ್ಷಿಸುತ್ತಾರೆ. “ಮಾರ್ಕೆಟ್‌ ಬಾಸ್ಕೆಟ್‌ ಅನಾಲಿಸಿಸ್‌’ ಕೂಡ ಉಪಯೋಗಿಸುತ್ತಾರೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ ಟೂಲ್ಸ್‌ನ್ನು ಕೂಡ ದುರುಪಯೋಗ ಪಡಿಸಿಕೊಂಡು ವಂಚಿಸುತ್ತಾರೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ವಂಚನ ಜಾಲಕ್ಕೆ ಅನೇಕ ಮಂದಿ ಸಿಲುಕಿ ತೊಂದರೆಗೀಡಾಗಿರುವುದು ಗಮನಕ್ಕೆ ಬಂದಿದೆ. ಯಾವುದೇ ಅನಧಿಕೃತ ಸೈಟ್‌ಗಳಲ್ಲಿ ವ್ಯವಹಾರ ನಡೆಸಲೇಬಾರದು. ಪರಿಶೀಲನೆ ನಡೆಸಿಯೇ ಮುಂದುವರಿಯಬೇಕು. ಸಂಶಯ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರೆ ಅದನ್ನು ದೃಢೀಕರಿಸಿ ಸೂಕ್ತ ಸಲಹೆ ನೀಡುತ್ತೇವೆ. ನಕಲಿ ಸೈಟ್‌ಗಳಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಆಮಿಷಕ್ಕೆ ಒಳಗಾಗದೆ ಎಚ್ಚರವಾಗಿರಬೇಕು.
-ಡಾ| ವಿಕ್ರಮ್‌ ಅಮಟೆ,
ಪೊಲೀಸ್‌ ವರಿಷ್ಠಾಧಿಕಾರಿ, ದ.ಕ. ಜಿಲ್ಲೆ

ಸಹಾಯವಾಣಿ
ಸಂಪರ್ಕಿಸಿ
ಸೈಬರ್‌ ಕ್ರೈಂ ಮೂಲಕ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡರೆ ಕೂಡಲೇ ಸೈಬರ್‌ ಕ್ರೈಂ ಹೆಲ್ಪ್ ಲೈನ್‌ 1930ಕ್ಕೆ ಕರೆ ಮಾಡಿ. ಇದರಿಂದ ಹಣ ಮೋಸಗಾರರ ವಶವಾಗದಂತೆ ತಡೆಯಬಹುದು. http://www.cybercrime.gov.in ನಲ್ಲಿ ದೂರು ಸಲ್ಲಿಸಬಹುದು. ಜಠಿಠಿಟs ಇರುವ ವೆಬ್‌ಸೈಟ್‌ಗಳು(URL) ಸುರಕ್ಷಿತವಾಗಿರುತ್ತವೆ. ಜಠಿಠಿಟs ಬದಲು ಜಠಿಠಿಟ ಮಾತ್ರ ಹೊಂದಿರುವ ವೆಬ್‌ಸೈಟ್‌/ಯುಆರ್‌ಎಲ್‌ಗ‌ಳು ಸುರಕ್ಷಿತವಲ್ಲ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾರೆ.

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-ewewq

ODI; ಹ್ಯಾರಿಸ್‌ ರೌಫ್ ಗೆ ಹೆದರಿದ ಆಸೀಸ್‌ : 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.