ತಾಲೂಕು ಮಟ್ಟದಲ್ಲಿ ಇನ್ನೂ ಖಾತೆ ತೆರೆಯದ ಮೈತ್ರಿ ಯೋಜನೆ
Team Udayavani, Mar 9, 2019, 1:05 AM IST
ಬೆಳ್ತಂಗಡಿ: ಲೈಂಗಿಕ ಅಲ್ಪಸಂಖ್ಯಾಕರ ಬದುಕಿಗೆ ಆಸರೆಯಾಗುವುದಕ್ಕಾಗಿ ಸರಕಾರ ಜಾರಿಗೊಳಿಸಿರುವ “ಮೈತ್ರಿ ಯೋಜನೆ’ಯಡಿ ಮಂಗಳೂರು ಹೊರತುಪಡಿಸಿ ಯಾವುದೇ ತಾಲೂಕಿನಲ್ಲಿ ಫಲಾನುಭವಿಗಳಿಲ್ಲ.
ಮಂಗಳೂರು ನಗರದಲ್ಲಿ ಈ ಯೋಜನೆಯಡಿ 28 ಮಂದಿ ಮಾಸಿಕ 500 ರೂ. ಪಿಂಚಣಿ ಪಡೆಯುತ್ತಿದ್ದಾರೆ. ಉಳಿದಂತೆ ಯಾವುದೇ ತಾಲೂಕುಗಳಲ್ಲಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.
ಜಿಲ್ಲೆಯಲ್ಲಿ ಒಟ್ಟು 1,672 ಮಂದಿ ಲೈಂಗಿಕ ಅಲ್ಪಸಂಖ್ಯಾಕರಿದ್ದರೂ ಅಧಿಕೃತರ ಸಂಖ್ಯೆ 300 ಮಾತ್ರ. ಪ್ರಸಕ್ತ ಸಾಲಿನಲ್ಲಿ ಒಟ್ಟು 8 ಮಂದಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.
ಬಿಕ್ಷಾಟನೆ ಆದಾಯ
ಭಿಕ್ಷಾಟನೆ ವೃತ್ತಿ ಆಗಿಸಿಕೊಂಡಿರುವ ಲೈಂಗಿಕ ಅಲ್ಪಸಂಖ್ಯಾಕರ ಬದುಕಿಗೆ ಆಸರೆಯಾಗಲು ಮಾಸಿಕ 500 ರೂ. ಪಿಂಚಣಿ ಯೋಜನೆ ಇದು. ಆದರೆ ಶಿಕ್ಷಣ, ಅರಿವಿನ ಕೊರತೆಯ ಪರಿಣಾಮವಾಗಿ ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.
ಕ್ರಿಮಿನಲ್ ಕೇಸಿನ ಭಯ
ವೈದ್ಯರ ಪ್ರಮಾಣಪತ್ರ ಪಡೆಯಲು ಅಂಜಿಕೆ ಒಂದೆಡೆಯಾದರೆ, ಯೋಜನೆಯ ದುರ್ಬಳಕೆ ಆದಲ್ಲಿ, ಅನರ್ಹರು ಅರ್ಜಿ ಸಲ್ಲಿಸಿದರೆ ಕ್ರಿಮಿನಲ್ ದಾವೆ ಹೂಡುವ ಅಧಿಕಾರ ಸರಕಾರಕ್ಕಿದೆ. ಹೀಗಾಗಿ ಕಾನೂನು ತೊಡಕಿನ ಅಂಜಿಕೆಯೂ ಅಡ್ಡಿಯಾಗಿದೆ.
ಯೋಜನೆಯ ಅಂಶಗಳೇನು?
ಸೌಲಭ್ಯ ಪಡೆಯಲು ವಯೋಮಿತಿ 42ರಿಂದ 64 ವರ್ಷ. ವಯೋ ದೃಢೀಕರಣ ಪತ್ರ ಕಡ್ಡಾಯ. ವಾಸಸ್ಥಳ ದೃಢೀಕರಣಕ್ಕಾಗಿ ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಬೇಕು. ಬಿಪಿಎಲ್ ಕಾರ್ಡ್‌ಇಲ್ಲದಿದ್ದರೆ ಸ್ವಯಂಘೋಷಿತ ಆದಾಯ ಪ್ರಮಾಣ ಪತ್ರ ಕಡ್ಡಾಯ. ಅರ್ಜಿ ಸಲ್ಲಿಸಿದ ಬಳಿಕ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ಬ್ಯಾಂಕ್ ಖಾತೆ ಇಲ್ಲದಿದ್ದಲ್ಲಿ ಅಂಚೆಕಚೇರಿ ಮೂಲಕ ವಿತರಣೆ. ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರ, ಪರಿ ಶೀಲನೆಯಾಗಿ ತಿಂಗಳಲ್ಲಿ ಮಾಸಾಶನ ಸಿಗುತ್ತದೆ.
ರಾಜ್ಯ ಫಲಾನುಭವಿಗಳು
2013-14 215
2014-15 720
2015-16 1,034
2016-17 1,241
2017-18 1,244
ಲಿಂಗತ್ವ ಅಲ್ಪಸಂಖ್ಯಾಕರಿಗೆ ಸರಕಾರದ ಮೈತ್ರಿ ಯೋಜನೆಯ ಜತೆಗೆ ಸ್ವ ಉದ್ಯೋಗಕ್ಕಾಗಿ ಮಹಿಳಾ ಅಭಿವೃದ್ಧಿ ನಿಗಮದಿಂದ 25 ಸಾವಿರ ರೂ. ಸಾಲ ಹಾಗೂ 25 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿದೆ.
– ವಿನಯ ಕುಮಾರಿ,
ಸಮಾಲೋಚಕಿ, ಮಹಿಳಾ ಅಭಿವೃದ್ಧಿ ನಿಗಮ ಲೈಂಗಿಕ ಅಲ್ಪಸಂಖ್ಯಾಕರನ್ನು ರಕ್ಷಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ನವಸಹಜ ಚಾರಿಟಿ ಸುಮಾರು 172 ಮಂದಿಯನ್ನು ಸಲಹುತ್ತಿದೆ.
– ಪ್ರವೀಣ್
ನವಸಹಜ ಚಾರಿಟೆಬಲ್ ಟ್ರಸ್ಟ್
– ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.