ಭಾರತ್‌ ಗ್ರೂಪ್‌ ಆಫ್‌ ಕಂಪೆನೀಸ್‌ನ ಇಡಿ ಅನಂತ್‌ ಜಿ. ಪೈ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ


Team Udayavani, Jul 28, 2019, 5:52 AM IST

2707MLR47-ANANTH-PAI

ಮಂಗಳೂರು: ‘ಒಬ್ಬ ವ್ಯಕ್ತಿಎಷ್ಟು ವರ್ಷ ಬದುಕಿದ್ದಾನೆ ಎನ್ನುವುದಕ್ಕಿಂತ ಬದುಕಿದ ಅವಧಿಯಲ್ಲಿ ಆತ ಮಾಡಿದ ಸಾಧನೆ ಮುಖ್ಯ’ ಎಂದು ಮಣಿಪಾಲ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಪ್ರೊ| ಎಚ್.ಎಸ್‌. ಬಲ್ಲಾಳ್‌ ಹೇಳಿದರು.

ಜು. 14ರಂದು ನಿಧನ ಹೊಂದಿದ ಭಾರತ್‌ ಗ್ರೂಪ್‌ ಆಫ್‌ ಕಂಪೆನೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್‌ ಜಿ. ಪೈ ಅವರಿಗೆ ನಗರದ ಡಾ| ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ್‌ ಗ್ರೂಪ್‌ ಆಫ್‌ ಕಂಪೆನೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಅನಂತ್‌ ಜಿ. ಪೈ ಅವರು ಕೇವಲ 46 ವರ್ಷಗಳ ಕಾಲ ಬದುಕಿದ್ದರೂ ಈ ಅಲ್ಪಾವಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.

ಬಿ. ಗಣಪತಿ ಪೈ ಅವರ ಮರಣಾನಂತರ ಭಾರತ್‌ ಸಮೂಹ ಸಂಸ್ಥೆಗಳ ಆಡಳಿತ ಚುಕ್ಕಾಣಿಯನ್ನು ಹಿಡಿದ ಪುತ್ರ ಅನಂತ್‌ ಜಿ. ಪೈ ಅವರು ವ್ಯವಹಾರವನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿ ಕೇವಲ 7 ವರ್ಷಗಳ ಅವಧಿಯಲ್ಲಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ದೂರದೃಷ್ಟಿಯ ವ್ಯಕ್ತಿತ್ವದ ಅನಂತ್‌ ಪೈ ಅವರು ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅಗಲಿರುವುದು ಆಘಾತ ತಂದಿದೆ ಎಂದ ಹೇಳಿದರು.

ಮಣಿಪಾಲ್ ಗ್ರೂಪ್‌ ಮತ್ತು ಭಾರತ್‌ ಗ್ರೂಪ್‌ ಮಧ್ಯೆ ಸುದೀರ್ಘ‌ ಕಾಲದ ಸಂಬಂಧವಿದೆ ಎಂದ ಅವರು, ಭಾರತ್‌ ಗ್ರೂಪ್‌ ಆರಂಭಿಸಿದ ಕಾರ್ಕಳದಭುವನೇಂದ್ರ ಕಾಲೇಜಿಗೆ ಮಣಿಪಾಲ್ ಗ್ರೂಪ್‌ ಆರ್ಥಿಕ ನೆರವು ಸಹಾಯ ನೀಡಿ ನೆರವಾಗಿತ್ತು. ಇತ್ತೀಚೆಗೆ ಈ ಕಾಲೇಜಿನ ಅಭಿವೃದ್ಧಿಯ ಬಗ್ಗೆ ಅನಂತ್‌ ಜಿ. ಪೈ ಅವರ ಜತೆ ತಾನು ಮಾತುಕತೆ ನಡೆಸಿದ್ದೆ ಎಂದು ಡಾ| ಎಚ್. ಎಸ್‌. ಬಲ್ಲಾಳ್‌ ನೆನಪಿಸಿಕೊಂಡರು.

ಶಾಸಕ ಯು.ಟಿ. ಖಾದರ್‌ ಮಾತನಾಡಿ, ಶಾಲಾ ದಿನಗಳಲ್ಲಿ ಕದ್ರಿ ಪರಿಸರ ದಲ್ಲಿ ತಾನು ಮತ್ತು ಅನಂತ್‌ ಜಿ. ಪೈ ಜತೆಯಾಗಿ ಆಡಿದ್ದೆವು ಮತ್ತು ಸ್ಕೌಟ್ಸ್‌ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆವು ಎಂದು ತಮ್ಮ ಒಡನಾಟವನ್ನು ನೆನಪಿಸಿಅವರ ನಿಧನದಿಂದ ಓರ್ವ ಸೋದರ ನನ್ನು ಕಳೆದುಕೊಂಡಿದ್ದೇನೆ ಎಂದರು.

ಭಾರತ್‌ ಸಮೂಹ ಸಂಸ್ಥೆಯ ಕಂಪೆನಿಸೆಕ್ರೆಟರಿ ವಾಸುದೇವ ಪೈ ಮಾತನಾಡಿ, ಅನಂತ್‌ ಜಿ. ಪೈ ಅವರು ಹೊಸ ವ್ಯವಹಾರ ದೃಷ್ಟಿಕೋನಗಳನ್ನು ಪರಿಚಯಿಸಿಸಂಸ್ಥೆಯನ್ನು ಉನ್ನತಿಗೆ ಕೊಂಡೊಯ್ದ್ದಿ ದ್ದರು. ಅವರ ನಿಧನದಿಂದ ತುಂಬ ಲಾರದ ನಷ್ಟವಾಗಿದೆ ಎಂದರು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್‌, ಉದ್ಯಮಿಗಳಾದ ಅಮ್ಮುಂಜೆ ನಾಗೇಂದ್ರ ನಾಯಕ್‌, ಶ್ಯಾಮ್‌ ಪಟೇಲ್ (ಶಿಕಾಗೊ), ಬಾಲಕೃಷ್ಣ ಶೆಟ್ಟಿ (ಸಿನೆ ಪೊಲೀಸ್‌), ಪ್ರಶಾಂತ್‌ ಶೇಟ್, ಅಜಿತ್‌ ಪೈ, ಪಿಂಟೂ (ಅಮೆರಿಕ), ಸುರೇಶ್‌ ಪೈ, ರೂಪೇಶ್‌ ಪಟೇಲ್, ಮೃನಾಲ್ ಪಟೇಲ್, ಎಂ.ಎನ್‌. ಪೈ (ಚಿನ್ಮಯ ವಿದ್ಯಾ ಸಂಸ್ಥೆ), ಸಿಂಡಿಕೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್‌ ಭಾಸ್ಕರ ಹಂದೆ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಕಾರ್ಕಳ ಶಾರದೋತ್ಸವ ಸಮಿತಿಯ ಮುಕುಂದ ಶೆಣೈ, ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪಾಂಶುಪಾಲ ಮಂಜುನಾಥ ಕೋಟ್ಯಾನ್‌, ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾದ ನಿತ್ಯಾನಂದ ಪೈ, ಭಾರತ್‌ ಸಮೂಹ ಸಂಸ್ಥೆಯ ಡಾ| ದಿನೇಶ್‌ ಕಿಣಿ ಅವರು ಅನಂತ್‌ ಜಿ. ಪೈ ಅವರ ವ್ಯಕ್ತಿತ್ವದ ಗುಣಗಾನ ಮಾಡಿ ನುಡಿ ನಮನ ಸಲ್ಲಿಸಿದರು.

ನುಡಿ ನಮನದ ಬಳಿಕ ಅನಂತ್‌ ಜಿ. ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪ್ರಾರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಅನಂತ್‌ ಜಿ. ಪೈ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾ ಯಿತು. ಭಾರತ್‌ ಸಮೂಹ ಸಂಸ್ಥೆಯ ನಿರ್ದೇಶಕರಾದ ಆನಂದ್‌ ಜಿ. ಪೈ, ಸುಬ್ರಾಯ ಎಂ. ಪೈ, ನಾಗೇಂದ್ರ ಡಿ. ಪೈ, ಸುಧೀರ್‌ ಎಂ. ಪೈ, ವೆಂಕಟೇಶ್‌ ಎಂ. ಪೈ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಮಣಿಪಾಲ್ ಮೀಡಿಯಾ ನೆಟ್ವರ್ಕ್‌ ಲಿ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಪೈ, ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್‌. ಪೈ, ವನಿತಾ ಜಿ. ಪೈ, ಅಕಾಡೆಮಿ ಆಫ್‌ ಜನರಲ್ ಎಜುಕೇಶನ್‌ನ ಆಡಳಿತ ಅಧಿಕಾರಿ ಡಾ| ಎಚ್. ಶಾಂತಾರಾಮ, ಸಂಸದ ನಳಿನ್‌ ಕುಮಾರ್‌ ಕಟೀಲು, ಉಜ್ವಲ್ ಡೆವಲಪರ್ನ ಪುರುಷೋತ್ತಮ ಶೆಟ್ಟಿ, ಮಾಜಿ ಸಚಿವರಾದ ರಮಾನಾಥ ರೈ, ಕೆ. ಅಮರನಾಥ ಶೆಟ್ಟಿ, ಶಕುಂತಳಾ ಶೆಟ್ಟಿ ಮೊದಲಾದವರು ಶ್ರದ್ಧಾಂಜಲಿ ಸಲ್ಲಿಸಿದರು. ಅನಂತ್‌ ಜಿ. ಪೈ ಅವರ ಪುತ್ರಿ ಅನ್ವಿತಾ, ತಂದೆಯ ಗುಣ ವಿಶೇಷಗಳನ್ನು ವಿವರಿಸಿದರು. ಶಿಕ್ಷಣ ಎಂಬುದು ಜಗತ್ತನ್ನು ಬದಲಾಯಿ ಸುವ ಶಕ್ತಿಯಿರುವ ಅಸ್ತ್ರ ಎಂದು ಹೇಳಿ ತನಗೆ ಶಿಕ್ಷಣ ಪಡೆಯುವಂತೆ ಪ್ರೇರೇಪಿ ಸಿದ್ದರು. ಕೌಟುಂಬಿಕ ಸಂಬಂಧಗಳನ್ನು ಕಲಿಸಿದ್ದರು ಎಂದು ಸ್ಮರಿಸಿದರು.

ಲೆಕ್ಕ ಪರಿಶೋಧಕ ಶಿವಾನಂದ ಪೈ ಸ್ವಾಗತಿಸಿ, ಪ್ರಸ್ತಾವನೆಗೈದು ದಿ| ಅನಂತ್‌ ಜಿ. ಪೈ ಅವರನ್ನು ಪರಿಚ ಯಿಸಿದರು. ಬಿ. ಗಣಪತಿ ಪೈ ಅವರ ಉತ್ತರಾಧಿಕಾರಿಯಾಗಿದ್ದ ಅನಂತ್‌ ಜಿ. ಪೈ ಅವರು ಅಪ್ಪಟ ಮಾನವ ಪ್ರೇಮಿ ಯಾಗಿದ್ದರು. ಅವರ ಅಗಲಿಕೆಯಿಂದ ನಾವು ಮಾಣಿಕ್ಯವೊಂದನ್ನು ಕಳೆದು ಕೊಂಡಿದ್ದೇವೆ ಎಂದರು.

ಬಹುಮುಖ ಪ್ರತಿಭೆ
ಮಣಿಪಾಲ್ ಟೆಕ್ನಾಲಜೀಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೌತಮ್‌ ಪೈ ಮಾತನಾಡಿ, 26 ವರ್ಷಗಳ ಹಿಂದೆ ತಾನು ಅನಂತ್‌ ಜಿ. ಪೈ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದು, ಆ ಬಳಿಕ ನಾವಿಬ್ಬರೂ ವ್ಯವಹಾರಕ್ಕೆ ಸಂಬಂಧಿಸಿ ಹಲವು ಬಾರಿ ಭೇಟಿಯಾಗಿ ಚರ್ಚಿಸಿದ್ದೇವೆ. ಅನಂತ್‌ ಅವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಅವರೊಬ್ಬ ಉತ್ತ್ತಮ ಸ್ನೇಹಿತರಾಗಿದ್ದರು. ಅವರ ಅಗಲಿಕೆ ಅಪಾರ ನೋವು ತಂದಿದೆ ಎಂದರು.

ಟಾಪ್ ನ್ಯೂಸ್

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಟಿ20: ಆಸ್ಟ್ರೇಲಿಯ 3-0 ಜಯಭೇರಿ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Australia’s assistant coach to skip Perth test because of the IPL auction!

BGT 2024: ಐಪಿಎಲ್‌ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್‌!

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.