ಅಂಗನವಾಡಿ ಕಾರ್ಯಕರ್ತೆಯರಿಂದ ಸಮಾಜ ತಿದ್ದುವ ಕೆಲಸ: ಶಾಸಕಿ
Team Udayavani, Apr 10, 2017, 3:29 PM IST
ನಗರ : ಮಕ್ಕಳ ಎರಡನೇ ತಾಯಿ ಎಂಬ ಗೌರವವನ್ನು ಹೊಂದಿರುವ, ಸಮಾಜವನ್ನು ತಿದ್ದುವ ಕೆಲಸ ಮಾಡುವ ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತೆಯರು ಸಮಯಪ್ರಜ್ಞೆ, ಸ್ವತ್ಛತೆ, ಸಮಾಜಮುಖೀ ಚಿಂತನೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದು ಸಂಸದೀಯ ಕಾರ್ಯದರ್ಶಿ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾ ಯಕಿಯರ ಸಂಘ ಪುತ್ತೂರು ಇದರ ವತಿಯಿಂದ ಪುರಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ, ನಿವೃತ್ತರಿಗೆ ಸಮ್ಮಾನ, ವಲಯದ ಉತ್ತಮ ಕಾರ್ಯಕರ್ತೆ, ಸಹಾಯಕಿಯರ ಗುರುತಿಸುವ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಮಕ್ಕಳನ್ನು ತಿದ್ದಿ ತೀಡುವವಳು ತಾಯಿ.ಮಹಾಭಾರತದಲ್ಲಿ ಶ್ರೀಕೃಷ್ಣನಿಗೆ ಯಶೋದಾ ತುಂಬಿದ ಸ್ಥಾನವನ್ನು ಇಂದು ಅಂಗನಧಿವಾಡಿ ಕಾರ್ಯಕರ್ತರು ನಿಭಾಯಿಸುತ್ತಿದ್ದಾರೆ. ಸಮಾಜದಲ್ಲಿ ನಾಯಕತ್ವ ಬೆಳೆ ಸುವ ಜವಾಧಿಬ್ದಾರಿ ನಿಭಾಧಿಯಿಸುವ ಜತೆಗೆ ಸಮಾಜಕ್ಕೆ ತಾಯಿಯಾಗಬೇಕು, ಮಹಿಳಾ ಶಕ್ತಿಯ ಧ್ವನಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನಿಷ್ಪತ್ತಿ ಪಾಲಿಸುತ್ತಿಲ್ಲ
ಅಂಗನವಾಡಿ ವ್ಯವಸ್ಥೆ ಆರಂಭವಾದ ಸಂದರ್ಭ ಕಾರ್ಯಕರ್ತರಿಗೆ 100 ರೂ., ಸಹಾಯಕಿಯರಿಗೆ 50 ರೂ. ಮಾತ್ರ ಗೌರವ ಧನ ಸಿಗುತ್ತಿತ್ತು. ಆಗ ಕೇಂದ್ರ ಮತ್ತು ರಾಜ್ಯದ 90:10 ನಿಷ್ಪತ್ತಿಯ ವೇತನ ನೀಡಲಾಗುತ್ತಿತ್ತು. ಆ ಬಳಿಕ ಅದನ್ನು 60;40 ನಿಷ್ಪತ್ತಿಗೆ ಬದಲಾಯಿಸಲಾಯಿತು. ಆದರೆ ಇದನ್ನು ಪಾಲಿಸಲಾಗುತ್ತಿಲ್ಲ ಎಂದು ಹೇಳಿದ ಶಕುಂತಳಾ ಟಿ. ಶೆಟ್ಟಿ, ರಾಜ್ಯ ಸರಕಾರ 5,200 ರೂ. ನೀಡುವಾಗ ಕೇಂದ್ರ ಕನಿಷ್ಠ 6,000 ರೂ. ಆದರೂ ವೇತನ ಕೊಡಬೇಕಿತ್ತು ಎಂದು ಅಭಿಪ್ರಾಯಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ ಅವರು ಮಾತನಾಡಿ, ಸಮಾಜದಲ್ಲಿ ಗುರುತಿಸಿಕೊಳ್ಳುವ ಗೌರವ ಕಾರ್ಯಕರ್ತೆಯರು ನಾವು. ಭಾರತೀಯ ಸಂಸ್ಕೃತಿ ಯನ್ನು ಅಳವಡಿಸಿಕೊಳ್ಳುವ ಮೂಲಕ ಮಕ್ಕಳನ್ನು ಬೆಳೆಸಬೇಕು ಎಂದರು. ಅಂಗನವಾಡಿ ಕಾರ್ಯ ಕರ್ತರಿಗೇ ಇರುವ ಬ್ಯಾಂಕ್ ವ್ಯವಸ್ಥೆಯನ್ನು ಬಳಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತಿಗೊಳ್ಳುತ್ತಿರುವ ಕೋಡಿಂಬಾಡಿ ವಲಯದ ರಾಧಾ ಹಾಗೂ ಮುಕ್ರಂಪಾಡಿ ವಲಯದ ಶಿವಮ್ಮ ಅವರನ್ನು ಶಾಸಕರು ಸಮ್ಮಾನಿಸಿದರು. ತಾಲೂಕು ಸಂಘದ ಉಪಾಧ್ಯಕ್ಷೆ ಶೋಭಾ, ಕಾರ್ಯದರ್ಶಿ ಜಯಲತಾ, ಜತೆ ಕಾರ್ಯದರ್ಶಿ ರಾಜರಾಜೇಶ್ವರಿ, ಕೋಶಾಧಿಕಾರಿ ಪುಷ್ಪಾವತಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷೆ ಮೀನಾಕ್ಷಿ ಸ್ವಾಗತಿಸಿ, ಶ್ರೀಲತಾ ವಂದಿಸಿದರು. ಪ್ರಶಸ್ತಿ ಪುರಸ್ಕೃತ ಕಾರ್ಯಕರ್ತೆ ಅರುಣಾ ಡಿ. ಕಾರ್ಯಕ್ರಮ ನಿರ್ವಹಿಸಿದರು.
ಮಹಾಸಭೆ
ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಪುತ್ತೂರು ಇದರ ಮಹಾಸಭೆ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಸಿಡಿಪಿಒ ಶಾಂತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ವಲಯದ ಉತ್ತಮ ಕಾರ್ಯಕರ್ತೆ, ಸಹಾಯಕಿಯರ ಗುರುತಿಸುವ ಕಾರ್ಯಕ್ರಮ ನಡೆಧಿಯಿತು. ನಿವೃತ್ತಿ ಹೊಂದಿದ ಒಟ್ಟು 9 ಮಂದಿ ಕಾರ್ಯಕರ್ತೆಯವರು ಹಾಗೂ ಸಹಾಯಕಿಯನ್ನು ಗೌರವಿಸಲಾಯಿತು.
ಸಿಎಂಗೆ ಬೇಸರ
ರಾಜ್ಯ ಸರಕಾರ 3 ವರ್ಷಗಳಲ್ಲಿ 500 ರೂ. ನಂತೆ ಹಾಗೂ ಈ ವರ್ಷ 1,000 ರೂ. ನಂತೆ ಗೌರವ ಧನ ಏರಿಕೆ ಮಾಡಿದೆ. ಹೋರಾಟ ಪ್ರತಿಯೊಬ್ಬರ ಹಕ್ಕು. ಆದರೆ ರಾಜಕೀಯ ಮಿಶ್ರಿತ ಹೋರಾಟ ಸರಿಯಲ್ಲ. ಯಾರ ವಿರುದ್ಧ ಹೋರಾಟ ನಡೆಸ ಬೇಕಿತ್ತೋ ಅಲ್ಲಿ ನಡೆಸಬೇಕಿತ್ತು. ಅದರಲ್ಲೂ ಪ್ರತಿಭಟನೆಯಲ್ಲಿ ಎಷ್ಟು ಅಂಗನವಾಡಿ ಕಾರ್ಯಕರ್ತೆಯರಿದ್ದರು ಎಂಬುದೂ ಪ್ರಶ್ನಾರ್ಹ ? ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸ್ಪಂದಿಸು ತ್ತಿದ್ದರೂ ಪ್ರತಿಭಟನೆ ನಡೆಸಿರುವುದು ಮುಖ್ಯಮಂತ್ರಿಗಳಿಗೆ ಬೇಸರ ತರಿಸಿದೆ ಎಂದು ಇಲಾಖೆಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಶಕುಂತಳಾ ಟಿ. ಶೆಟ್ಟಿ ಹೇಳಿದರು. ಆದರೆ ದ.ಕ. ಜಿಲ್ಲೆಯಲ್ಲಿ ಇಂತಹ ರಾಜಕೀಯ ಪ್ರೇರಿತ ಸಂಘಟನೆ ಇರದಿರುವುದು ಖುಷಿಯ ವಿಚಾರ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.