ಕರಾವಳಿಯಾದ್ಯಂತ ಅಂಗಾರಕ ಸಂಕಷ್ಟಿ ಆಚರಣೆ
Team Udayavani, Sep 18, 2019, 4:25 AM IST
ಅಂಗಾರಕ ಸಂಕಷ್ಟಿ ಸಂಭ್ರಮದ ಅಂಗವಾಗಿ ಶರವು ದೇಗುಲವನ್ನು ಭಕ್ತರು ಒಟ್ಟು ಸೇರಿ 18 ಬಗೆಯ 5 ಲಕ್ಷ ಹೂವುಗಳಿಂದ ವೈವಿಧ್ಯಮಯವಾಗಿ ಅಲಂಕರಿಸಿದ್ದರು.
ಮಂಗಳೂರು/ಉಡುಪಿ: ಕರಾವಳಿಯ ಗಣಪತಿ ಹಾಗೂ ಇತರ ಪ್ರಮುಖ ದೇವಾಲಯಗಳಲ್ಲಿ ಅಂಗಾರಕ ಸಂಕಷ್ಟಿ ಮಂಗಳವಾರ ನಡೆಯಿತು. ಸಾವಿರಾರು ಮಂದಿ ಸಂಕಷ್ಟಿ ಉಪವಾಸ ಕುಳಿತು ದೇವರ ದರ್ಶನ ಪಡೆದು ಕೃತಾರ್ಥರಾದರು.
ಶರವು ಮಹಾಗಣಪತಿ ದೇವಸ್ಥಾನಕ್ಕೆ ಬೆಳಗ್ಗಿನಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ದೇವರಿಗೆ ಗರಿಕೆ, ಹಿಂಗಾರ, ಹೂ ಅರ್ಪಿಸಿ, ಪಂಚಕಜ್ಜಾಯ, ಗಣಪತಿ ಹವನ, ಅಪ್ಪದ ಪೂಜೆ ಸೇವೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಇಡೀ ದಿನ 10 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಧ್ಯಾಹ್ನ ವೇಳೆ 12.30ಕ್ಕೆ ಪ್ರಸಾದ ವಿತರಣೆ ಆರಂಭವಾಗಿದ್ದು, 2.30ರ ತನಕ ಸರತಿ ಸಾಲು ಮುಂದುವರಿದಿತ್ತು.
ಶರವು ದೇವಳದ ದೇಗುಲದ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಮತ್ತು ಸುದೇಶ್ ಶಾಸ್ತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ 11.30ರಿಂದ ಮಹಾಗಣಪತಿ ಯಾಗ ಪೂರ್ಣಾಹುತಿ, 12ಕ್ಕೆ ಮಹಾಗಣಪತಿ ದೇವರಿಗೆ ಮಹಾಪೂಜೆ ನಡೆಯಿತು. ಈ ಸಂದರ್ಭ ಎಸ್. ರಾಹುಲ್ ಶಾಸ್ತ್ರಿ, ವಿಠಲ್ ಭಟ್, ಗಣೇಶ್ ಭಟ್, ಶಶೀಂದ್ರ ಭಟ್ ಉಪಸ್ಥಿತರಿದ್ದರು.
ಅಂಗಾರಕ ಸಂಕಷ್ಟಿ ಸಂಭ್ರಮದ ಅಂಗವಾಗಿ ಶರವು ಕ್ಷೇತ್ರದ ಇಡೀ ದೇಗುಲವನ್ನು ಭಕ್ತರು ಒಟ್ಟು ಸೇರಿ 18ಬಗೆಯ 5 ಲಕ್ಷ ಹೂವುಗಳಿಂದ ವೈವಿಧ್ಯಮಯವಾಗಿ ಅಲಂಕರಿಸಿದ್ದರು.
ಆನೆಗುಡ್ಡೆಯಲ್ಲೂ ಭಕ್ತರ ಗಡಣ
ಕುಂದಾಪುರ ಸಮೀಪದ ಆನೆಗುಡ್ಡೆ ದೇವಸ್ಥಾನಕ್ಕೆ ಸುಮಾರು 20,000 ಭಕ್ತರು ಭೇಟಿ ನೀಡಿದರು. ಸುಮಾರು 4,000 ಜನರು ಭೋಜನ ಪ್ರಸಾದ ಸ್ವೀಕರಿಸಿದರು. ಅರ್ಚಕ ಚಂದ್ರಕಾಂತ ಉಪಾಧ್ಯಾಯ ಮತ್ತು ಸಹೋದರರು, ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಹಸ್ರನಾಳಿಕೇರ ಗಣಪತಿ ಯಾಗ ನಡೆಯಿತು. ಸುಮಾರು 8,000 ಪಂಚಗಜ್ಜಾಯ ಪ್ಯಾಕೇಟ್‌ಗಳನ್ನು ಭಕ್ತರು ಕೊಂಡುಕೊಂಡರು.
ಮಂಗಳೂರಿನ ಮಣ್ಣಗುಡ್ಡೆ ಹರಿದಾಸ ಲೇನ್‌ನಲ್ಲಿರುವ ನವದುರ್ಗಾ ಮಹಾಗಣಪತಿ ದೇವಸ್ಥಾನ, ಸಿದ್ಧಿವಿನಾಯಕ ದೇವಸ್ಥಾನ ಬಿಕರ್ನಕಟ್ಟೆ, ಕದ್ರಿ ಮಂಜುನಾಥ ದೇವಸ್ಥಾನ, ಉರ್ವ ಮಹಾಗಣಪತಿ, ಕುದ್ರೋಳಿ ಗೋಕರ್ಣನಾಥ, ಗಣೇಶಪುರ ಮಹಾಗಣಪತಿ, ಮರೋಳಿ ಸೂರ್ಯನಾರಾಯಣ, ಬೋಳೂರು ಮಾರಿಯಮ್ಮ ದೇವಸ್ಥಾನ, ಕಾಸರಗೋಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಹಟ್ಟಿಯಂಗಡಿ, ಉದ್ಯಾವರ, ಪಡುಬಿದ್ರಿ, ಉಪ್ಪೂರು, ಬಾರಕೂರು ಬಟ್ಟೆ ವಿನಾಯಕ ಸಹಿತ ವಿವಿಧ ಗಣಪತಿ ದೇವಸ್ಥಾನಗಳಲ್ಲಿ ಅಂಗಾರಕ ಸಂಕಷ್ಟಿ ವ್ರತಾಚರಣೆ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.