ಅಂಜುಶ್ರೀ ಸಾವು ಪ್ರಕರಣಕ್ಕೆ ತಿರುವು… ವಿಷ ಸೇವಿಸಿ ಆತ್ಮಹತ್ಯೆ?
Team Udayavani, Jan 10, 2023, 7:15 AM IST
ಕಾಸರಗೋಡು : ಪೆರುಂಬಳ ಬೇನೂರು ನಿವಾಸಿ, ಮಂಜೇಶ್ವರ ಸರಕಾರಿ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ (19) ಸಾವಿಗೆ ವಿಷ ಸೇವನೆ ಕಾರಣ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಹೊಟೇಲ್‌ನಿಂದ ಆನ್‌ಲೈನ್ ಮೂಲಕ ತರಿಸಿದ ಆಹಾರ ಸೇವನೆಯಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ತನ್ನ ಸ್ನೇಹಿತ ಬೆಂಡಿಚ್ಚಾಲ್ ಮಂಡಲಿಪಾರ ನಿವಾಸಿ ವಿಪಿನ್ ರಾಜ್ ಇತ್ತೀಚೆಗೆ ಅನಾರೋಗ್ಯದಿಂದ ನಿಧನಹೊಂದಿದ ಕಾರಣ ಮನನೊಂದು ವಿಷ ಸೇವಿಸಿರಬೇಕೆಂದು ಪೊಲೀಸರು ತಿಳಿಸಿದ್ದಾರೆ. ಅಂಜುಶ್ರೀ ಅವರ ಫೋನ್‌ನಲ್ಲಿ ವಿಪಿನ್‌ರಾಜ್ ಮಾಹಿತಿ ಲಭಿಸಿದೆ ಎನ್ನಲಾಗಿದೆ.
ಜ. 7ರಂದು ಘಟನೆ ಸಂಭವಿಸಿದ್ದು, ಬೇಕಲ ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪೊಲೀಸರು ವಿದ್ಯಾರ್ಥಿನಿಯ ಮನೆಗೆ ತೆರಳಿ ಮನೆಯವರಿಂದ ಹಾಗೂ ಸಂಬಂಧಿಕರಿಂದ, ಗೆಳೆಯರಿಂದ ಹೇಳಿಕೆ ಸಂಗ್ರಹಿಸಿದ್ದಾರೆ. ಇದೇ ವೇಳೆ ಆಕೆ ಬರೆದಿಟ್ಟಿರುವುದೆಂದು ಸಂಶಯಿಸಿರುವ ಪತ್ರವೊಂದು ಲಭಿಸಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಫಾರೆನ್ಸಿಕ್ ಪರೀಕ್ಷೆಯ ವರದಿ ಇನ್ನೆರಡು ದಿನಗಳೊಳಗೆ ಲಭಿಸುವ ಸಾಧ್ಯತೆಯಿದ್ದು, ಆಕೆಯ ದೇಹ ಸೇರಿರುವ ವಿಷ ಯಾವುದೆಂದು ಬಳಿಕವಷ್ಟೇ ದೃಢಪಡಲಿದೆ.
ಕ್ಯಾನ್ಸರ್‌ನಿಂದ ಸ್ನೇಹಿತ ಸಾವು
ವಿಪಿನ್ ರಾಜ್ ಕ್ಯಾನ್ಸರ್ ಬಾಧಿಸಿ ಮೃತಪಟ್ಟಿದ್ದು, ಅದಾಗಿ 41ನೇ ದಿನ ಅಂಜುಶ್ರೀ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಅವರಿಬ್ಬರ ಮನೆ ಸುಮಾರು 15 ಕಿ.ಮೀ. ಅಂತರದಲ್ಲಿದ್ದು, ಪರಿಚಯ ಹೇಗಾಯಿತು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ವಿಪಿನ್ ರಾಜ್ ವಿದ್ಯಾನಗರದ ಐಟಿಐಯಲ್ಲಿ ಕಲಿತಿದ್ದು. ಈ ಸಂದರ್ಭದಲ್ಲಿ ಪರಿಚಯವಾಗಿರಬೇಕೆಂದು ಶಂಕಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.