ಇಂಡಿಗೋ ವಿಮಾನದಲ್ಲಿ ತುಳು, ಕೊಂಕಣಿಯಲ್ಲಿ ಉದ್ಘೋಷಣೆ
Team Udayavani, May 3, 2017, 4:00 PM IST
ಮಹಾನಗರ: ಕಡಿಮೆ ದರದಲ್ಲಿ ಮಂಗಳೂರು- ಬೆಂಗಳೂರು, ,ಮಂಗಳೂರು- ಮುಂಬಯಿ ಮಧ್ಯೆ ಸೋಮ ವಾರದಿಂದ ಆರಂಭಗೊಂಡ ಇಂಡಿಗೋ ವಿಮಾನದಲ್ಲಿ ಉದ್ಘಾಟನೆ ಪ್ರಯುಕ್ತ ಪೈಲಟ್ ತುಳು, ಕೊಂಕಣಿ ಭಾಷೆಯಲ್ಲಿ ಉದ್ಘೋಷಣೆ ನೀಡುವ ಮೂಲಕ ಪ್ರಯಾಣಿಕರಿಗೆ ವಿನೂತನ ಸ್ವಾಗತ ನೀಡಲಾಯಿತು.
ವಿಮಾನ ಉದ್ಘಾಟನೆಯಂದು ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ 180 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದರಲ್ಲಿ ಬಹುತೇಕರು ಮಂಗಳೂರಿನವರೇ ಆಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉದ್ಘಾಟನೆಯ ಉಡುಗೊರೆಯಾಗಿ ತಮ್ಮ ಸ್ಥಳೀಯ ಭಾಷೆಯಲ್ಲಿ ಸ್ವಾಗತ ಕೋರಲಾಯಿತು. ವಿಶೇಷವೆಂದರೆ ಈ ವಿಮಾನದ ಪೈಲಟ್ ಕೂಡ ಮೂಲತಃ ಮಂಗಳೂರಿನವರು.
ವಿಮಾನ ಟೇಕಾಫ್ ಆಗುವ ವೇಳೆ ಪೈಲಟ್ ಡ್ಯಾನಿಯಲ್ ಲೋಬೋ ಅವರು ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಉದ್ದೇಶಿಸಿ, ಕುಡ್ಲದ ಬಾನೊಡು ಪ್ರಥಮವಾದ್ ಪೋವೋಂದುಪ್ಪುನ ಇಂಡಿಗೋ ವಿಮಾನಡ್ ಒಪ್ಪುನ ಮಾತೆರ್ಗಲಾ
ಇಂಡಿಗೋ ಪರವಾದ್ ಪುರೆರ್ಗಲಾ ಸೊಲ್ಮೆಲು (ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಹಾರಾಟ ನಡೆಸುತ್ತಿರುವ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಎಲ್ಲರಿಗೂ ಸ್ವಾಗತ) ಎಂದು ತುಳುವಿನಲ್ಲಿ ಹೇಳಿದರು. ಅಂತೆಯೇ ಕೊಂಕಣಿಯಲ್ಲೂ ಸ್ವಾಗತಿಸಿದರು. ವಿಮಾನವು ಬೆಂಗಳೂರು ತಲುಪುತ್ತಿದ್ದಂತೆ ಮತ್ತೆ ತುಳು, ಕೊಂಕಣಿಯಲ್ಲಿ ವಂದನೆ ಹೇಳಲಾಯಿತು.
ಇಂಡಿಗೋ ತನ್ನ ಮೊದಲ ದಿನದ ಸಂಚಾರ ಆರಂಭಿಸಿದ ಹಿನ್ನೆಲೆಯಲ್ಲಿ ಈ ರೀತಿ ಸ್ಥಳೀಯ ಭಾಷೆಯನ್ನು ಬಳಸಿಕೊಂಡು ಪ್ರಯಾಣಿಕರಿಗೆ ಖುಷಿ ನೀಡುವ ಪ್ರಯತ್ನ ಮಾಡಿದೆ. ಆದರೆ ಇದು ಉದ್ಘಾಟನೆಯ ದಿನ ಮಾತ್ರವಿತ್ತು. ಸಾಮಾನ್ಯ ವಾಗಿ ಹಿಂದಿ, ಇಂಗೀÉಷ್ನಲ್ಲಿ ಮಾತ್ರ ಉದ್ಘೋ ಷಣೆ ಮಾಡಲಾಗುತ್ತದೆ ಎಂದು ಇಂಡಿಗೋ ವಿಮಾನದ ಮಂಗಳೂರು ವಿಭಾಗದ ಮುಖ್ಯಸ್ಥೆ ಅರ್ಚನಾ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.