ಹಳೆ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನ
Team Udayavani, Dec 30, 2017, 12:21 PM IST
ಮಹಾನಗರ: ಶ್ರೀ ರಾಮಕೃಷ್ಣ ಮಿಶನ್ ಬಾಲಕಾಶ್ರಮದ ಹಳೆ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಜರಗಿತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮೀ ಜಿತಕಾಮಾನಂದಜೀ ಮಾತನಾಡಿ, ಶಿಸ್ತು ಬದ್ಧ ಶಿಕ್ಷಣವನ್ನು ಇಲ್ಲಿ ಪಡೆದು ಜೀವನದಲ್ಲಿ ಉನ್ನತ ಹಂತಕ್ಕೆ ತಲಪಿರುವುದು ಸಂತಸದ ಸಂಗತಿ. ಆಶ್ರಮ ಎಂದಿಗೂ ನಿಮಗಾಗಿ ತೆರೆದಿದೆ ಎಂದರು.
ಆಶ್ರಮದ ಸಂಪರ್ಕ ಇರಲಿ
ಅಧ್ಯಕ್ಷತೆ ವಹಿಸಿದ್ದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಎ.ಶಿವಕುಮಾರ್ ಮಾತನಾಡಿ, ಪ್ರತಿಯೋರ್ವ ಹಳೆ
ವಿದ್ಯಾರ್ಥಿಯೂ ಆಶ್ರಮದ ಸಂಪರ್ಕ ಇಟ್ಟುಕೊಳ್ಳಬೇಕು ಎಂದರು. ಸ್ವಾಮೀ ಧರ್ಮವೃತಾನಂದಜಿಯವರು ಶುಭ ಹಾರೈಸಿದರು. ಸುಧಾಕರ ಶೆಟ್ಟಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಬೆಳವಣಿಗೆಯಲ್ಲಿ ಸಕ್ರಿಯ ವಾಗಿ ದುಡಿಯುತ್ತಿರುವ 50ರ ದಶಕದ ಹಿರಿಯ ಹಳೆವಿದ್ಯಾರ್ಥಿ ಲಕ್ಶ್ಮೀ ನಾರಾಯಣ ಶೆಣೈ ಮತ್ತು ಸುಧಾಕರ ಶೆಟ್ಟಿಯವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಹಳೆವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಿತು. ಕಾರ್ಯದರ್ಶಿ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.