Chaddi Gang: ವೃದ್ಧ ದಂಪತಿಗೆ ಹಲ್ಲೆಗೈದು ಭಾರೀ ಚಿನ್ನಾಭರಣ ದರೋಡೆ
Team Udayavani, Jul 9, 2024, 7:50 AM IST
ಮಂಗಳೂರು : ದರೋಡೆಕೋರರು ಮಂಗಳ ವಾರ ನಸುಕಿನ ವೇಳೆ ಕೋಟೆಕಣಿ ಮುಖ್ಯರಸ್ತೆಯ ಮನೆ ಯೊಂದರ ಕಿಟಕಿಯ ಸರಳುಗಳನ್ನು ತುಂಡರಿಸಿ ವೃದ್ಧ ದಂಪತಿ ವಿಕ್ಟರ್ ಮೆಂಡೋನ್ಸ (71) ಮತ್ತು ಅವರ ಪತ್ನಿ ಪೆಟ್ರೀಶಿಯಾ ಅವರಿಗೆ ಹಲ್ಲೆ ನಡೆಸಿದ್ದರು. ವಿಕ್ಟರ್ ಮೆಂಡೋನ್ಸ ಅವರ ಕಾಲಿಗೆ ರಾಡ್ನಿಂದ ಹಲ್ಲೆ ನಡೆಸಿದ್ದು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ದಂಪತಿ ಮಾತ್ರ ಇದ್ದರು. ಅವರ ಮಕ್ಕಳಿಬ್ಬರು ವಿದೇಶದಲ್ಲಿದ್ದಾರೆ.
ತಡರಾತ್ರಿ 1.40 ರ ಸುಮಾರಿಗೆ ನಾಲ್ವರು ದರೋಡೆ ಕೋರರು ಮನೆಯ ಕೋಣೆಯ ಕಿಟಕಿಯ ಗಾಜು ತೆಗೆದು ಸರಳುಗಳನ್ನು ತುಂಡರಿಸಿ ಒಳನುಗ್ಗಿ ಪಕ್ಕದ ಕೋಣೆಯ ಕಪಾಟು ಜಾಲಾಡಿ ಬೆಡ್ರೂಮ್ನಲ್ಲಿ ಮಲಗಿದ್ದ ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿ ಕಪಾಟು ಗಳಲ್ಲಿದ್ದ ಚಿನ್ನಾಭರಣ, ಮೊಬೈಲ್ ಅನ್ನು ದರೋಡೆ ಮಾಡಿದ್ದರು. ಆ ಬಳಿಕ ವಿಕ್ಟರ್ ರವರ ಕಾರಿನ ಕೀ ಪಡೆದು ಕಾರಿನಲ್ಲಿ ನಸುಕಿನ ವೇಳೆ 4.40ರ ಸುಮಾರಿಗೆ ವೇಳೆಗೆ ಪರಾರಿಯಾಗಿದ್ದರು.
ಕಳೆದ ರವಿವಾರ ನಸುಕಿನ ವೇಳೆ ಕೋಡಿಕಲ್ ವಿವೇಕಾ ನಂದ ನಗರದ ಮನೆಯೊಂದರಲ್ಲಿ ಕಳವು ನಡೆದಿತ್ತು. ಅಲ್ಲಿನ ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ದೃಶ್ಯವನ್ನಾಧರಿಸಿ ಆ ಕೃತ್ಯವನ್ನು ಚಡ್ಡಿ ಗ್ಯಾಂಗ್ ನಡೆಸಿದ್ದರ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದರು. ಕೋಟೆಕಣಿಯಲ್ಲಿ ದರೋಡೆ ನಡೆಸಿದ ತಂಡದ ದಿರಿಸು “ಚಡ್ಡಿ ಗ್ಯಾಂಗ್’ನ ಡ್ರೆಸ್ಕೋಡ್ನ್ನು ಹೋಲುತ್ತಿತ್ತು.
ಚಡ್ಡಿ, ಮಂಕಿಕ್ಯಾಪ್, ರಾಡ್, ಸೂಡ್ರೈವರ್…
ದರೋಡೆಕೋರರು ಬರ್ಮುಡ ಚಡ್ಡಿ, ಅರ್ಧ ತೋಳಿನ ಬನಿಯಾನ್, ಮಾಸ್ಕ್ ಸಹಿತ ಮಂಕಿಕ್ಯಾಪ್ ಧರಿಸಿದ್ದರು. ಕೈಯಲ್ಲಿ ರಾಡ್, ಸೂð ಡ್ರೈವರ್ ಮತ್ತು ಟಾರ್ಚ್ ಹಿಡಿದಿದ್ದರು. ಹಿಂದಿ, ಕನ್ನಡ ಭಾಷೆ ಮಾತನಾಡುತ್ತಿದ್ದರು ಎಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
ಏನೇನು ದರೋಡೆ? 4 ಚಿನ್ನದ ಬಳೆಗಳು, ಎಂಟು ಚಿನ್ನದ ಸರಗಳು, 1 ಹವಳದ ಸರ, 6 ಜತೆ ಕಿವಿಯ ಓಲೆಗಳು, 2 ಬಂಗಾರದ ಪೆಂಡೆಂಟ್ಗಳು, 4 ವಜ್ರದ ಪೆಂಡೆಂಟ್ಗಳು, 1 ಚಿನ್ನದ ಬ್ರಾಸ್ಲೆಟ್, 4 ಚಿನ್ನದ ಉಂಗುರಗಳು, ವಿವಿಧ ಕಂಪೆನಿಗಳ 10 ವಾಚ್ಗಳು, ಒಂದು ಮೊಬೈಲ್ನ್ನು ದರೋಡೆ ಮಾಡಿದ್ದರು. ಮೂರು ಮೊಬೈಲ್ಗಳನ್ನು ನೆಲಕ್ಕೆ ಬಡಿದು ಒಡೆದು ಹಾಕಿದ್ದರು.
7 ಸಿಸಿ ಕೆಮರಾ: ವಿಕ್ಟರ್ ಮೆಂಡೋನ್ಸ ಅವರು ತಮ್ಮ ಮನೆಯಲ್ಲಿ ಭದ್ರತೆಗೆ ಹೆಚ್ಚು ಗಮನ ಹರಿಸಿದ್ದರು. ಅದೇ ಕಾರಣಕ್ಕೆ ಮನೆ ಸುತ್ತಮುತ್ತ 7 ಸಿಸಿ ಕೆಮರಾಗಳನ್ನು ಅಳವಡಿಸಿದ್ದರು.
ಸಿಸಿ ಕೆಮರಾದಲ್ಲಿ ದಾಖಲಾದ ದೃಶ್ಯಗಳ ಪ್ರಕಾರ ದರೋ ಡೆಕೋರರು ತಡರಾತ್ರಿ 1.40ರ ಸುಮಾರಿಗೆ ಮನೆಯೊಳಗೆ ಪ್ರವೇಶಿಸಿದ್ದರು. ಮೊದಲು ಪೂರ್ವ ಭಾಗದ ಕೋಣೆಗೆ ನುಗ್ಗಿ ಅಲ್ಲಿಂದ ಮನೆಯ ಮೇಲಂತಸ್ತಿಗೆ ಹೋಗಿ ಕಪಾಟು ಜಾಲಾಡಿ ಬಳಿಕ ಬೆಡ್ರೂಮ್ಗೆ ಬಂದಿದ್ದರು. ಅಲ್ಲಿ ದಂಪತಿಗೆ ಹಲ್ಲೆ ನಡೆಸಿ ಸೊತ್ತುಗಳನ್ನು ಲೂಟಿ ಮಾಡಿ ಬ್ಯಾಗ್ಗೆ ಹಾಕಿಕೊಂಡು 4.40ರ ಸುಮಾರಿಗೆ ತೆರಳಿದ್ದರು.
ಕಾರ್ಯಕ್ರಮಕ್ಕಾಗಿ ಚಿನ್ನ ತಂದಿದ್ದರು: ಮನೆಯಲ್ಲಿ ಚಿನ್ನಾಭರಣ ಇಟ್ಟುಕೊಳ್ಳುತ್ತಿರಲಿಲ್ಲ. ಕಳೆದ ವಾರ ಚರ್ಚ್ ಕಾರ್ಯಕ್ರಮ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮಗಳು ಇದ್ದ ಕಾರಣ ಚಿನ್ನಾಭರಣವನ್ನು ಬ್ಯಾಂಕ್ನ ಸೇಫ್ಲಾಕರ್ನಿಂದ ಮನೆಗೆ ತಂದು ಇಟ್ಟಿದ್ದೆವು ಎಂದು ಪೆಟ್ರೇಷಿಯಾ ಅವರು ತಿಳಿಸಿದ್ದಾರೆ.
“ಕ್ಯಾಶ್ ಕೊಡಿ… ಕ್ಯಾಶ್ ಕೊಡಿ’ ಒತ್ತಾಯ: ದರೋಡೆಕೋರರು ಬೆಡ್ರೂಮ್ಗೆ ನುಗ್ಗಿದ ಕೂಡಲೇ ದಂಪತಿ ಬಳಿ “ಕ್ಯಾಶ್ ಕೊಡಿ..ಕ್ಯಾಶ್ ಕೊಡಿ’ ಎಂದು ಒತ್ತಾಯಿ ಸಿದ್ದರು. ಕ್ಯಾಶ್ ಸ್ವಲ್ಪ ಇರುವುದು ಎಂದಾಗ ಕಪಾಟು ತಡ ಕಾಡಿದ್ದರು. ಕ್ಯಾಶ್ ಸಿಗದೇ ಇದ್ದಾಗ ಕೋಪಗೊಂಡು ಮತ್ತಷ್ಟು ಹೊಡೆದಿದ್ದರು. ಪೆಟ್ರೀಶಿಯ ಅವರ ಬ್ಯಾಗ್ನಲ್ಲಿದ್ದ ಸುಮಾರು 3,000 ರೂ. ನಗದು ದೋಚಿದ್ದರು.
ಪೊಲೀಸ್ ತಂಡಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಚಡ್ಡಿಗ್ಯಾಂಗ್ನ ಸದಸ್ಯರೆಂಬುದು ದೃಢವಾಗಿದೆ. ಇದೇ ರೀತಿ ಬೇರೆ ತಂಡಗಳು ಇವೆಯೇ ಅಥವಾ ಇದೇ ತಂಡದಲ್ಲಿ ಬೇರೆ ಸದಸ್ಯರಿದ್ದಾರೆಯೇ ಎಂಬ ಬಗ್ಗೆಯೂ ತಿಳಿಯಲಾಗುವುದು. ಕೋಡಿಕಲ್ನ ಘಟನೆಯೂ ಇದೇ ತಂಡದ ಕೃತ್ಯದಂತಿದೆ. ರಾಜ್ಯದ ಬೇರೆಡೆಯೂ ಪ್ರಕರಣ ನಡೆಸಿದ್ದಾರೆಯೇ ಎಂಬುದನ್ನೂ ಪತ್ತೆ ಹಚ್ಚಲಾಗುವುದು. ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಬಹುಮಾನ ಘೋಷಿಸಲಾಗುವುದು. -ಅನುಪಮ್ ಅಗರ್ವಾಲ್, ಪೊಲೀಸ್ ಆಯುಕ್ತರು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.