ಬಾರದ ಉತ್ತರ ಪತ್ರಿಕೆ; ಮೌಲ್ಯಮಾಪಕರಿಗೆ ರಜೆ!
ಮಂಗಳೂರು ವಿವಿ ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ
Team Udayavani, Dec 5, 2019, 6:20 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಪರೀಕ್ಷೆ ಗಳು ಮುಗಿದು ಮೌಲ್ಯಮಾಪನ ಕಾರ್ಯ ಆರಂಭವಾಗಿ ವಾರ ಕಳೆದಿದೆ. ಆದರೆ ಮೌಲ್ಯಮಾಪನ ಪ್ರಕ್ರಿಯೆ ಹೊರ ಗುತ್ತಿಗೆ ಪಡೆದುಕೊಂಡಿರುವ ಸಂಸ್ಥೆಯ ಬೇಜವಾಬ್ದಾರಿತನದಿಂದಾಗಿ ಈಗ ಮೌಲ್ಯ ಮಾಪನ ಕೇಂದ್ರ ಗಳಿಗೆ ಉತ್ತರ ಪತ್ರಿಕೆ ಗಳು ಸರಿಯಾಗಿ ರವಾನೆ ಯಾಗದ ಹಿನ್ನೆಲೆ ಯಲ್ಲಿ ಮೌಲ್ಯ ಮಾಪಕ ರಿಗೆ ರಜೆ ನೀಡಬೇಕಾದ ದುಃಸ್ಥಿತಿ ಬಂದಿದೆ. ವಿ.ವಿ.ಯ ಎಲ್ಲ ಪರೀಕ್ಷೆಗಳು ನ. 25ಕ್ಕೆ ಮುಗಿ ದಿದ್ದು, ವಾರದ ಹಿಂದೆ ಮೌಲ್ಯ ಮಾಪನ ಕಾರ್ಯ ಆರಂಭವಾಗಿತ್ತು. ಸಾಮಾನ್ಯ ವಾಗಿ ಕಾಲೇಜುಗಳಲ್ಲಿ ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ವಿ.ವಿ.ಗೆ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿ ಕೋಡಿಂಗ್, ಡಿ- ಕೋಡಿಂಗ್, ಡಾಟಾ ಎಂಟ್ರಿ ಪ್ರಕ್ರಿಯೆ ನಡೆಯುತ್ತದೆ.
ಈ ಬಾರಿ ಮೌಲ್ಯ ಮಾಪನ ಪ್ರಕ್ರಿಯೆ
ನಿರ್ವಹಣೆ ಜವಾಬ್ದಾರಿಯನ್ನು ವಿ.ವಿ. ಆ್ಯಟ್ರಿಸ್ ಟೆಕ್ನಾಲಜೀಸ್ ಸಂಸ್ಥೆಗೆ ಹೊರಗುತ್ತಿಗೆ ವಹಿಸಿದೆ. ಆದರೆ ಸಮನ್ವಯದ ಕೊರತೆಯಿಂದಾಗಿ ಆ ಸಂಸ್ಥೆಯು ಮೌಲ್ಯಮಾಪನ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಣೆ ಮಾಡದೆ, ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎನ್ನುವುದು ಎಬಿವಿಪಿ ಆರೋಪ.
ಮೌಲ್ಯಮಾಪಕರ ಧರಣಿ
ಮೌಲ್ಯಮಾಪನ ಕೇಂದ್ರಗಳಿಗೆ ಉತ್ತರ ಪತ್ರಿಕೆ ಸಕಾಲದಲ್ಲಿ ತಲುಪದ ಕಾರಣ ಮೌಲ್ಯಮಾಪಕರಿಗೆ ಕೆಲಸ
ವಿಲ್ಲದಂತಾಗಿದೆ. ಕೆಲವು ಉತ್ತರ ಪತ್ರಿಕೆಗಳು ಶೇ. 10ರಷ್ಟು ಮಾತ್ರ ಮೌಲ್ಯ ಮಾಪನ ಕೇಂದ್ರಕ್ಕೆ ತಲುಪಿದ್ದು, ಕೆಲವೇ ಸಮಯದೊಳಗೆ ಮೌಲ್ಯಮಾಪನ ಮುಗಿಯುತ್ತಿತ್ತು. ಆ ಬಳಿಕ ಯಾವುದೇ ಕೆಲಸ ಇಲ್ಲದ್ದರಿಂದಾಗಿ ಒಂದೆರಡು ದಿನ ರಜೆ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಕಾರಣಕ್ಕೆ ಕೆಲವು ಮೌಲ್ಯಮಾಪಕರು ಧರಣಿ ಕುಳಿತ ಘಟನೆಯೂ ನಡೆದಿದೆ.
ಪರೀಕ್ಷಾ ಕೇಂದ್ರಗಳಲ್ಲೇ ಬಾಕಿ!
ಇನ್ನೂ ಕೆಲವು ಉತ್ತರ ಪತ್ರಿಕೆಗಳು ಪರೀಕ್ಷಾ ಕೇಂದ್ರಗಳಲ್ಲೇ ಬಾಕಿಯಾ ಗಿವೆ. ಉತ್ತರ ಪತ್ರಿಕೆಗಳು ಕೋಡಿಂಗ್, ಡಿ-ಕೋಡಿಂಗ್ ಆಗದೇ ಮೌಲ್ಯ ಮಾಪನಕ್ಕೆ ಹೋಗುತ್ತಿವೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಸಂದೇಶ ರೈ ತಿಳಿಸಿದ್ದಾರೆ.
ಸಿಗದ ಸಂಬಳ: ಡೇಟಾ ಎಂಟ್ರಿಗೆ ನಕಾರ
ಉತ್ತರ ಪತ್ರಿಕೆಗಳ ಡೇಟಾ ಎಂಟ್ರಿ ಮೂಲಕ ಕಂಪ್ಯೂಟರೀಕರಣ ಮಾಡುವ ಪ್ರಕ್ರಿಯೆಯೂ ಈ ಬಾರಿ ನಡೆದಿಲ್ಲ. ಡೇಟಾ ಎಂಟ್ರಿ ಸಿಬಂದಿಗೆ ವಿ.ವಿ. ಕಳೆದ ವರ್ಷದ ಸಂಬಳವನ್ನು ಸರಿಯಾಗಿ ನೀಡದಿರುವುದು ಕಾರಣವಾಗಿದೆ. ಸಂಬಳ ನೀಡದೆ ಕೆಲಸ ಮಾಡುವುದಿಲ್ಲ ವೆಂದು ಡೇಟಾ ಎಂಟ್ರಿ ಸಿಬಂದಿ ತಿಳಿಸಿ ದ್ದಾರೆ. ವಿವಿಯ ಈ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ತೊಂದರೆಯಲ್ಲಿ ಸಿಲುಕುವಂತಾಗಿದೆ. ಮೌಲ್ಯಮಾಪನ ತಡವಾದರೆ ಫಲಿತಾಂಶ ವಿಳಂಬವಾಗು ತ್ತದೆ. ಇದರಿಂದ ಪಾಠಗಳು ಬಾಕಿಯಾಗಿ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ.
ಹೊರಗುತ್ತಿಗೆ ಸಂಸ್ಥೆ ಬ್ಲ್ಯಾಕ್ ಲಿಸ್ಟ್‌ಗೆ
ಹೊರಗುತ್ತಿಗೆ ವಹಿಸಿಕೊಂಡ ಸಂಸ್ಥೆಯು ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣ ಮೌಲ್ಯಮಾಪನ ಪ್ರಕ್ರಿಯೆ ತಡವಾಗುತ್ತಿದೆ. ಈ ಬಾರಿ ಆ ಸಂಸ್ಥೆಗೆ ಹೊರಗುತ್ತಿಗೆ ನೀಡಿರುವುದರಿಂದ ಏನೂ ಮಾಡಲಾಗುವುದಿಲ್ಲ. ಮುಂದಿನ ಮೇ ತಿಂಗಳಿನಲ್ಲಿ ನಡೆಯುವ ಪರೀಕ್ಷೆಯ ವೇಳೆ ಈಗಿನ ಸಂಸ್ಥೆಯನ್ನು ಕೈ ಬಿಟ್ಟು ಬೇರೆ ಸಂಸ್ಥೆಗೆ ನೀಡಲಾಗುವುದು. ಈಗಿನ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು.
-ಡಾ| ಪಿ.ಎಸ್. ಎಡಪಡಿತ್ತಾಯ, ಉಪಕುಲಪತಿ, ಮಂಗಳೂರು ವಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.