ಎಪಿಎಂಸಿ ಸಭೆ ಭತ್ತೆ ಹೆಚ್ಚಳಕ್ಕೆ ಸಾಮಾನ್ಯಸಭೆ ನಿರ್ಣಯ
Team Udayavani, Mar 30, 2017, 4:55 PM IST
ಪುತ್ತೂರು: ಜಿ.ಪಂ. ಹಾಗೂ ತಾ.ಪಂ. ಸದಸ್ಯರಿಗೆ ನೀಡುವ ಮಾದರಿಯಲ್ಲೇ ಎಪಿಎಂಸಿ ಸದಸ್ಯರಿಗೂ ಗೌರವಧನ ನೀಡಬೇಕು ಎಂಬ ಆಗ್ರಹವನ್ನು ಸದಸ್ಯರು ಮಾಡಿದ್ದಾರೆ. ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅಧ್ಯಕ್ಷತೆಯಲ್ಲಿ ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಸದಸ್ಯ ಮಹೇಶ್ ರೈ ಅಂಕೊತ್ತಿಮಾರ್ ವಿಷಯ ಪ್ರಸ್ತಾಪಿಸಿ, ಸದಸ್ಯರಿಗೆ ಸಭಾಭತ್ತೆ ಹೆಚ್ಚಿಸಬೇಕು ಎಂದರು. ಪ್ರತಿಕ್ರಿಯಿಸಿದ ಅಧ್ಯಕ್ಷರು, ಸಭಾಭತ್ತೆಯ ಬದಲು ಗೌರವಧನ ಎಂದು ಕೇಳಬಹುದು. ಈ ಕುರಿತು ಸಾಮಾನ್ಯ ಸಭೆಯ ನಿರ್ಣಯ ಕೈಗೊಂಡು, ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಆಡಳಿತದ ಅವಧಿ ಮುಗಿಯುತ್ತಿರುವುದರಿಂದ ಮುಂದಿನ ಅವಧಿಗೆ ಸಿಗಬಹುದು. ಮುಂದೆ ಆಯ್ಕೆಯಾಗಿ ಬರುವ ಸದಸ್ಯರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಹೇಳಿದರು.
ಟೆಂಡರ್ ಅಂತಿಮ
ಆಡಳಿತ ಕಚೇರಿಯಲ್ಲಿರುವ ಜೆರಾಕ್ಸ್ ಯಂತ್ರಕ್ಕೆ ಡ್ರಮ್, ಡೆವಲಪರ್, ಟೋನರ್ ಅಳವಡಿಸಿ ಸರ್ವಿಸ್ ಮಾಡುವ ಕುರಿತು ಈಗಾಗಲೇ ಬಂದಿರುವ ದರಪಟ್ಟಿಗಳ ಕುರಿತು ನಿರ್ಣಯಕ್ಕೆ ಸಭೆ ಮುಂದಿಡಲಾಯಿತು. ಮಂಗಳೂರಿನ ಜೆರೋಟೆಕ್ ಕನ್ಸಲ್‌ಟೆಂಟ್ಸ್‌ಗೆ 12,378 ರೂ., ಮಂಗಳೂರು ಎಸ್.ಎಸ್. ಎಂಟರ್‌ಪ್ರೈಸಸ್‌ಗೆ 12,551 ರೂ., ಮಂಗಳೂರು ಕಂಪ್ಯೂಟರ್ ರಿನೈಸೆನ್ಸ್‌ಗೆ 12,698 ರೂ. ಮೊತ್ತಕ್ಕೆ ಟೆಂಡರ್ ನೀಡಲಾಯಿತು. ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕಳೆಗಿಡಗಳನ್ನು ತೆಗೆಯುವ, ಚರಂಡಿಯ ಹೂಳನ್ನು ತೆಗೆದು ಸ್ವತ್ಛಗೊಳಿಸುವ ಕಾಮಗಾರಿಗೆ ಸಮಿತಿಯಿಂದ ಟೆಂಡರ್ ಆಹ್ವಾನಿಸಲು ಸಭೆಯ ಮುಂದಿಡಲಾಯಿತು. ಲೋಕೋಪಯೋಗಿ ಗುತ್ತಿಗೆದಾರರಾದ ಜಯಕುಮಾರ್ 99,643 ರೂ.ಗೆ ನೀಡಿದ ಮೊತ್ತಕ್ಕೆ ಟೆಂಡರ್ ಅಂತಿಮಗೊಳಿ ಸಲಾಯಿತು.
ಎ. 15: ಕೊನೆಯ ಸಭೆ
ಪುತ್ತೂರು ಎಪಿಎಂಸಿ ಸಮಿತಿಯ ಈ ಅವಧಿ ಕೊನೆಯಾಗುತ್ತಾ ಬಂದಿದ್ದು, ಸಮಿತಿಯ ಕೊನೆಯ ಸಭೆ ಎ. 15ಕ್ಕೆ ನಿಗದಿ ಪಡಿಸಲಾಗಿದೆ. ಈ ನಡುವೆ ಪುತ್ತೂರು ಜಾತ್ರೆಯೂ ನಡೆಯುವುದರಿಂದ ಎ. 15ಕ್ಕೆ ದಿನ ನಿಗದಿ ಮಾಡುವುದು ಸೂಕ್ತ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.