360 ಡಿಗ್ರಿ ಪೋಸ್ಟರ್‌ನಲ್ಲಿ ಅಪ್ಪೆ ಟೀಚರ್‌!


Team Udayavani, Feb 15, 2018, 3:51 PM IST

15-Feb-15.jpg

ದಿನಕ್ಕೊಂದು ಸಿನೆಮಾ ರಿಲೀಸ್‌ ಆಗುವ ಕಾಲವಿದು. ಇಂದು ಇದ್ದ ಸಿನೆಮಾ ನಾಳೆ ಏನಾಗುತ್ತದೆ ಎಂಬುದು ತತ್‌ಕ್ಷಣಕ್ಕೆ ಹೇಳುವುದೂ ಕಷ್ಟ. ಇಂತಹ ಕಾಲದಲ್ಲಿ ಸಿನೆಮಾವನ್ನು ಗೆಲ್ಲಿಸಬೇಕಾದರೆ ನಾನಾ ರೀತಿಯ ಪ್ರಚಾರ ತಂತ್ರಕ್ಕೆ ಮೊರೆ ಹೋಗಬೇಕಾಗುತ್ತದೆ. ಪ್ರಸ್ತುತ ಸಾಮಾಜಿಕ ಜಾಲತಾಣ ಸಾಕಷ್ಟು ಸುದ್ದಿಯಲ್ಲಿರುವ ಕಾರಣದಿಂದ ಇದರ ಮೂಲಕವೇ ಪ್ರಚಾರದ ಗಿಮಿಕ್‌ ಮಾಡಲು ಹೊಸ ಹೊಸ ಪ್ಲ್ರಾನ್‌ ಗಳನ್ನು ಹುಡುಕುವುದು ಸಹಜ. ಪ್ರಚಾರ ತಂತ್ರಕ್ಕೆ ಬೇರೆ ಬೇರೆ ಮೂಲಗಳನ್ನು ಹುಡುಕಬಹುದಾದ ಇಂದಿನ ದಿನದಲ್ಲಿ ಕೋಸ್ಟಲ್‌ವುಡ್‌ ಸಿನೆಮಾ ಅಂಗಳ ಕೂಡ ಹೊಸ ಹೊಸ ಪ್ರಚಾರ ತಂತ್ರಕ್ಕೆ ಮುಂದಾಗುತ್ತಿದೆ. 

ಸಹಜವಾಗಿ ಟೈಟಲ್‌ ಮೂಲಕವೇ ಕೋಸ್ಟಲ್‌ವುಡ್‌ನ‌ಲ್ಲಿ ನಿರೀಕ್ಷೆ ಮೂಡಿಸುವ ಸಿನೆಮಾ ತಂಡ ಬಳಿಕ ವಿಧ ವಿಧದ
ಪೋಸ್ಟರ್‌ ಮೂಲಕ ವಿಭಿನ್ನತೆಯನ್ನು ಸಾರುತ್ತದೆ. ಇತ್ತೀಚೆಗೆ ಬಂದ ಹಲವು ತುಳು ಚಿತ್ರಗಳು ಪೋಸ್ಟರ್‌ ಮೂಲಕವೇ
ಸಾಕಷ್ಟು ಸುದ್ದಿ ಮಾಡಿತ್ತು. ಕುತೂಹಲ ಕೂಡ ಸೃಷ್ಟಿಸಿತ್ತು. ಅಂದಹಾಗೆ, ಈಗ ‘ಅಪ್ಪೆ ಟೀಚರ್‌’ ಸಿನೆಮಾ ವಿಭಿನ್ನ ಪ್ರಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ. ಅದರಲ್ಲೂ, ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ‘ಅಪ್ಪೆ ಟೀಚರ್‌’ ಸಿನೆಮಾ 360 ಡಿಗ್ರಿ ಪೋಸ್ಟರ್‌ನಲ್ಲಿ ಗುರುವಾರದಿಂದ ಕಾಣಿಸಿಕೊಂಡು ಕೋಸ್ಟಲ್‌ ವುಡ್‌ನ‌ಲ್ಲಿ ಬೆರಗು ಹುಟ್ಟಿಸಿದ್ದಂತು ನಿಜ. ಇಂತಹ ಪ್ರಯತ್ನ ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎಂಬುದು ನಿರ್ದೇಶಕ ಕಿಶೋರ್‌ ಮೂಡಬಿದಿರೆಯವರ ಅನಿಸಿಕೆ.

ಶಿವರಾಜ್‌ ಕುಮಾರ್‌ ನಟನೆಯ ‘ಟಗರು’ ಸಿನೆಮಾದಲ್ಲಿ ಇದೇ ರೀತಿಯ ಪೋಸ್ಟರ್‌ ಅನ್ನು ಪರಿಚಯಿಸಲಾಗಿತ್ತು. ಅದರಲ್ಲಿ ಶಿವರಾಜ್‌ ಕುಮಾರ್‌ ಅವರ ಎರಡು ಚಿತ್ರವನ್ನು ಪೋಸ್ಟರ್‌ನಲ್ಲಿ ಅಳವಡಿಸಲಾಗಿತ್ತು. ಆದರೆ, ‘ಅಪ್ಪೆ ಟೀಚರ್‌’ನಲ್ಲಿ ತುಳುವಿನ 14 ಕಲಾವಿದರ ಚಿತ್ರವನ್ನು ಹಾಕುವ ಮೂಲಕ 360 ಡಿಗ್ರಿ ಪೋಸ್ಟರ್‌ ರೆಡಿ ಮಾಡಲಾಗಿದೆ. ಫೇಸ್‌ಬುಕ್‌ನಲ್ಲಿ ಸದ್ಯ ಇದು ವೈರಲ್‌ ಆಗುತ್ತಿದೆ. ಮೊಬೈಲ್‌ ಅನ್ನು ಯಾವ ಭಾಗಕ್ಕೆ ತಿರುಗಿಸಿದರೂ, ಕಾಣಸಿಗುವ ಅಪರೂಪದ ಪೋಸ್ಟರ್‌ ಇದಾಗಿದೆ. 

ಈಗಾಗಲೇ ಶೂಟಿಂಗ್‌ ಮುಗಿಸಿರುವ ಸಿನೆಮಾ ಶೀಘ್ರದಲ್ಲಿ ತೆರೆಕಾಣುವ ನಿರೀಕ್ಷೆಯೂ ಇದೆ. ರಿಲೀಸ್‌ನ ಹೊಸ್ತಿಲಲ್ಲಿರುವ ‘ಅಂಡೆ ಪಿರ್ಕಿ’ ಸಿನೆಮಾಕ್ಕೂ ಕೂಡ ಇದೇ ರೀತಿಯಲ್ಲಿ ಪ್ರಚಾರ ನೀಡಲಾಗಿದೆ. ‘ಉಮಿಲ್‌’ ಸಿನೆಮಾ ಕೂಡ ಇದೇ ರೀತಿಯ ಪ್ರಚಾರ ತಂತ್ರದ ಮೂಲಕವೇ ಕೋಸ್ಟಲ್‌ವುಡ್‌ನ‌ಲ್ಲಿ ಸಾಕಷ್ಟು ಹೆಸರು ಪಡೆದಿದೆ. ಉಳಿದಂತೆ ಅಮ್ಮೆರ್‌ ಪೊಲೀಸಾ, ಮೈ ನೇಮ್‌ ಈಸ್‌ ಅಣ್ಣಪ್ಪೆ ಸಹಿತ ಬಹುತೇಕ ಸಿನೆಮಾಗಳು ವಿಭಿನ್ನ ಪೋಸ್ಟರ್‌ ಮೂಲಕವೇ ಗಮನಸೆಳೆಯುತ್ತಿವೆ. ಅಂದಹಾಗೆ, ಈಗ ಸಾಮಾಜಿಕ ಜಾಲತಾಣಗಳ ಮೂಲಕ ಸಿನೆಮಾದ ಪ್ರಚಾರ ಮಾಡಬಹುದಾಗಿದೆ. ಆದರೆ, ಹಿಂದೆ ಸಿನೆಮಾಗಳ ಪ್ರಚಾರ ಹೇಗಿತ್ತು ಎಂಬ ಕುತೂಹಲ ಈಗ ಸಾಮಾನ್ಯ.

 1947ಕ್ಕಿಂತ ಮೊದಲು ಹೆಚ್ಚಿನ ಥಿಯೇಟರ್ನವರಿಗೆ ಎತ್ತಿನಗಾಡಿ ಇರುತ್ತಿತ್ತು. ಹೊಸದಾಗಿ ಬಂದ ಸಿನೆಮಾದ ರೀಲುಗಳಿರುವ ಪೆಟ್ಟಿಗೆಯನ್ನು ಇದೇ ಗಾಡಿಯಲ್ಲಿ ಇಟ್ಟು ಸುತ್ತಲೂ ಪೋಸ್ಟರ್‌ ಹಚ್ಚಿ ಗಾಡಿ ಸಿಂಗರಿಸಿ, ಬಸ್‌ ನಿಲ್ದಾಣದಿಂದ ಸಿನೆಮಾ ಥಿಯೇಟರ್‌ನ ವರೆಗೆ ವಾದ್ಯಘೋಷದೊಂದಿಗೆ ಮೆರವಣಿಗೆಯಲ್ಲಿ ತರುತ್ತಿದ್ದರು. ತಮ್ಮ ಲಕ್ಷ್ಮಣ ಅವರು ಪುಸ್ತಕದಲ್ಲಿ ಬರೆದಿರುವ ಪ್ರಕಾರ, ಆಗ ಆಟೋ ರಿಕ್ಷಾಕ್ಕೆ ಮೈಕ್‌ ಕಟ್ಟಿಕೊಂಡು ಊರೆಲ್ಲ ಸುತ್ತಾಡಿಕೊಂಡು ಪ್ರದರ್ಶನವಾಗುವ ಚಿತ್ರಗಳ ವಿವರ ಘೋಷಿಸಲಾಗುತ್ತಿತ್ತು. ಇದರ ನೋಟಿಸ್‌ ಗಳನ್ನು ಹಂಚಲಾಗುತ್ತಿತ್ತು. ಬರೇ ಕೈ ಬರವಣಿಗೆಯ ಮೂಲಕ ಚಿಕ್ಕ ಚಿಕ್ಕ ಪೋಸ್ಟರ್‌ಗಳನ್ನು ಬಳಸಲಾಗುತ್ತಿತ್ತು.

ವಿಶೇಷ ಎಂಬಂತೆ ಚಿತ್ರಮಂದಿರದ ಹೊರಗೆ ಚಿತ್ರ ಪ್ರಾರಂಭದ ಮೊದಲು ಧ್ವನಿವರ್ಧಕದ ಮೂಲಕ ಸಿನೆಮಾ ಹಾಡುಗಳನ್ನು ಪ್ರಚಾರ ಮಾಡಲಾಗುತ್ತಿತ್ತು. ಭಕ್ತಿಪ್ರಧಾನ ಸಿನೆಮಾಗಳಿದ್ದರೆ ಚಿತ್ರಮಂದಿರದ ಎದುರು ಆ ಚಿತ್ರಕ್ಕೆ ಸಂಬಂಧಪಟ್ಟ ದೇವರ ಮೂರ್ತಿ ಅಥವಾ ಫೊಟೋಗಳನ್ನಿಟ್ಟು ಪೂಜೆ ಮಾಡುತ್ತಿದ್ದರು. ಚಿತ್ರ ನೋಡಲು ಬರುವವರು ಅಲ್ಲಿ ಕಾಣಿಕೆ ಕೂಡ ಹಾಕುತ್ತಿದ್ದರು!

 ದಿನೇಶ್‌ ಇರಾ

ಟಾಪ್ ನ್ಯೂಸ್

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.