ಅರ್ಜಿ ವಿಲೇವಾರಿ ಗೊಂದಲ ಆರೋಪ:  ಕಾರ್ಮಿಕರಿಂದ ಪ್ರತಿಭಟನೆ


Team Udayavani, Aug 8, 2017, 6:00 AM IST

0708mlr51.jpg

ಮಹಾನಗರ: ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ವಿವಿಧ ಸವಲತ್ತುಗಳಿಗಾಗಿ ಸಲ್ಲಿಸಿದ ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಕಾರ್ಮಿಕ ಇಲಾಖೆ ಗೊಂದಲ ಹಾಗೂ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಸೋಮವಾರ ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನ ಪ್ರದರ್ಶನ ನಡೆಸಿದರು.

ಅರ್ಜಿಗಳ ವಿಲೇವಾರಿ ಮಾಡಲೇಬೇಕು ಹಾಗೂ ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲೇ ಬೇಕು ಎಂದು ಕಾರ್ಮಿಕರು ಘೋಷಣೆ ಕೂಗಿದರು. 

ವಿನಾ ಕಾರಣ ಕಿರುಕುಳ 
ಪ್ರತಿಭಟನೆಯನ್ನು ಉದ್ಘಾಟಿಸಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್‌ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸುಮಾರು 12 ಲಕ್ಷ ಕಾರ್ಮಿಕರು ನೋಂದಣಿ ಮಾಡಿದ್ದು, ಈಗಾಗಲೇ 5,600 ಕೋಟಿ ರೂ. ಹಣ ಸಂಗ್ರಹವಾಗಿದೆ. ಅದರಲ್ಲಿ ಕಳೆದ 11 ವರ್ಷಗಳಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಖರ್ಚು ಮಾಡಿದ್ದು ಕೇವಲ 171 ಕೋಟಿ ರೂ. ಮಾತ್ರ. ದೀರ್ಘ‌ ಕಾಲದ ಹೋರಾಟ ನಡೆದು ಕಲ್ಯಾಣ ಮಂಡಳಿ ರಚನೆಯಾಗಿ 12 ಬಗೆಯ ಸವಲತ್ತುಗಳು ಜಾರಿಗೊಂಡಿವೆ. ಅವುಗಳು ಕಟ್ಟಡ ಕಾರ್ಮಿಕರಿಗೆ ಸಿಗುವಲ್ಲಿ ಸಿಐಟಿಯು ಅವಿರತ ಪ್ರಯತ್ನ ನಡೆಸುತ್ತಿದೆ. ಆದರೆ ಕಾರ್ಮಿಕ ಇಲಾಖೆಯು ಈ ಸವಲತ್ತುಗಳು ಸಿಗದ ರೀತಿಯಲ್ಲಿ ಹತಾಶ ಪ್ರಯತ್ನ ನಡೆಸುತ್ತಿದೆ. ವಿನಾ ಕಾರಣ ಕಿರುಕುಳ ನೀಡಿ ಕಟ್ಟಡ ಕಾರ್ಮಿಕರನ್ನು ಸತಾಯಿಸುತ್ತಿದೆ ಎಂದು ಆರೋಪಿಸಿದರು.

ದುರುದ್ದೇಶದಿಂದ ಅರ್ಜಿ ರದ್ದು 
ಮದುವೆ, ಮರಣ ಹಾಗೂ ಮಕ್ಕಳ ಸ್ಕಾಲರ್‌ಶಿಪ್‌ಮುಂತಾದವುಗಳಿಗೆ ಸಂಬಂ ಧಿಸಿದ ಅರ್ಜಿಗಳನ್ನು ದುರುದ್ದೇಶದಿಂದಲೇ ರದ್ದುಪಡಿಸಿ ಕಾರ್ಮಿಕರನ್ನು ಸಂಕಷ್ಟಕ್ಕೊಳ ಪಡಿಸಿದೆ. ಮತ್ತೂಂದು ಕಡೆ ರಾಜ್ಯ ಸರಕಾರ ಕೂಡ ಮಂಡಳಿಯಲ್ಲಿ ಜಮಾವಣೆಗೊಂಡ ಹಣದ ಮೇಲೆ ಕಣ್ಣಿಟ್ಟಿದ್ದು ,ಅದನ್ನು ದುರುಪಯೋಗ ಪಡಿಸಲು ಹೊಂಚು ಹಾಕುತ್ತಿದೆ ಎಂದು   ಆರೋಪಿಸಿದ ಅವರು, ಸರಕಾರದ ಈ ಪ್ರಯತ್ನವನ್ನು ತಡೆದು ಕಟ್ಟಡ ಕಾರ್ಮಿಕರ ಪರವಾದ ನೀತಿಗಳನ್ನು ಜಾರಿಗೊಳಿಸಲು ಸಂಘಟಿತ ಹೋರಾಟ ರೂಪಿಸಲು ಕಂಕಣ ಬದ್ಧರಾಗಿ ದುಡಿಯ ಬೇಕೆಂದು ಕರೆ ನೀಡಿದರು.

ಅರ್ಧದಷ್ಟು ಸದಸ್ಯತ್ವ  ಬೋಗಸ್‌
ಸಿಐಟಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಕಲ್ಯಾಣ ಮಂಡಳಿಯಲ್ಲಿ  ಜಿಲ್ಲೆಯ ಸುಮಾರು 45,000 ಸದಸ್ಯರು ನೋಂದಣಿಯಾಗಿದ್ದರೂ ಅದರಲ್ಲಿ ಅರ್ಧದಷ್ಟು ಸದಸ್ಯತ್ವ  ಬೋಗಸ್‌ ಆಗಿದೆ ಎಂದು ಆಪಾದಿಸಿದರು.  

ಸಿಬಂದಿ ಅಸಹಕಾರ
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಸುನಿಲ್‌ ಕುಮಾರ್‌ ಬಜಾಲ್‌ ಮಾತನಾಡಿ, ಕಾರ್ಮಿಕರಿಗೆ ಸವಲತ್ತುಗಳನ್ನು ವಿಸ್ತರಿಸಲು ಇಲಾಖೆ ಸಿಬಂದಿ ಅಸಹಕಾರ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಯೋಗೀಶ್‌ ಜಪ್ಪಿನಮೊಗರು ಮಾತನಾಡಿದರು. ಹೋರಾಟದ ನೇತೃತ್ವವನ್ನು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಮುಖಂಡರಾದ ರವಿಚಂದ್ರ ಕೊಂಚಾಡಿ, ಸಂತೋಷ್‌ ಶಕ್ತಿನಗರ, ಜಯಂತ ನಾಯ್ಕ, ಕೆ. ಪಿ. ಜೋನಿ, ವಸಂತಿ ಕುಪ್ಪೆಪದವು, ಪ್ರೇಮನಾಥ್‌ ಜಲ್ಲಿಗುಡ್ಡೆ, ಶಿವರಾಮ್‌ ಗೌಡ, ಬಿಜು ಅಗಸ್ಟಿನ್‌, ಶಂಕರ ಮೂಡಬಿದಿರೆ, ವಸಂತ ನಡ, ರಾಮಣ್ಣ ವಿಟ್ಲ, ಸೀತಾರಾಮ್‌ ಶೆಟ್ಟಿ, ಜನಾರ್ದನ ಕುತ್ತಾರ್‌ ಮುಂತಾದವರು ವಹಿಸಿದ್ದರು.

ಟಾಪ್ ನ್ಯೂಸ್

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

7

Jyothi ತಂಗುದಾಣ: ಬಸ್‌ಗಳ ಬಳಕೆಗೆ ಸಿಗದ ‘ಬಸ್‌ ಬೇ’

Fraud Case: ಟ್ರ್ಯಾಕಿಂಗ್‌ ಐಡಿ ಬದಲಾಯಿಸಿ ವಂಚಿಸಿದ ಇಬ್ಬರ ಬಂಧನ

Fraud Case: ಟ್ರ್ಯಾಕಿಂಗ್‌ ಐಡಿ ಬದಲಾಯಿಸಿ ವಂಚಿಸಿದ ಇಬ್ಬರ ಬಂಧನ

Moodbidri,Belthangady: ಭಾರೀ ಮಳೆ; ಮರ ಬಿದ್ದು ಶಿರ್ತಾಡಿ ರಸ್ತೆಯಲ್ಲಿ ಸಂಚಾರ ವ್ಯತ್ಯಯ

Moodbidri,Belthangady: ಭಾರೀ ಮಳೆ; ಮರ ಬಿದ್ದು ಶಿರ್ತಾಡಿ ರಸ್ತೆಯಲ್ಲಿ ಸಂಚಾರ ವ್ಯತ್ಯಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Hockey

National Hockey; ಕರ್ನಾಟಕಕ್ಕೆ ಜಯ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.