ಮಂಗಳೂರು ಪೊಲೀಸ್‌ ಆಯುಕ್ತರಿಗೆ ಮನವಿ

ರಾಘವೇಂದ್ರತೀರ್ಥರ ವಿರುದ್ಧ ಕ್ರಮಕ್ಕೆ ಜಿಎಸ್‌ಬಿ ದೇಗುಲಗಳ ಒಕ್ಕೂಟದ ಆಗ್ರಹ

Team Udayavani, Aug 30, 2019, 5:16 AM IST

2908MLR57

ಮಂಗಳೂರು: ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಅಪಹರಿಸಲು ಅಥವಾ ಹೆದರಿಸಲು ಮಠದ ಪರಿತ್ಯಕ್ತ ಸ್ವಾಮೀಜಿ ರಾಘವೇಂದ್ರತೀರ್ಥ ಯಾನೆ ಶಿವಾನಂದ ಪೈ ನಕಲಿ ಸರಕಾರಿ ತನಿಖಾಧಿಕಾರಿ, ಕೇರಳ ಮೂಲದ ಸ್ಯಾಮ್‌ ಪೀಟರ್‌ಗೆ ಸುಪಾರಿ ನೀಡಿದ್ದರು ಎಂಬ ಸುದ್ದಿಯಿಂದ ಗೌಡ ಸಾರಸ್ವತ ಸಮಾಜ ಭಯಭೀತವಾಗಿದೆ.

ಹೀಗಾಗಿ ರಾಘವೇಂದ್ರತೀರ್ಥ ಮತ್ತು ಉಡುಪಿಯ ರಾಮಚಂದ್ರ ನಾಯಕ್‌ ಅವರ ಮೇಲೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕು ಎಂದು ಗೌಡ ಸಾರಸ್ವತ ಬ್ರಾಹ್ಮಣರ ದೇವಸ್ಥಾನಗಳ ಒಕ್ಕೂಟವು ಮಂಗಳೂರು ಪೊಲೀಸ್‌ ಆಯುಕ್ತರನ್ನು ಒತ್ತಾಯಿಸಿದೆ.

ಒಕ್ಕೂಟದ ನಿಯೋಗ ಗುರುವಾರ ಪೊಲೀಸ್‌ ಆಯುಕ್ತ ಡಾ| ಹರ್ಷ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಶಾಸಕ ವೇದವ್ಯಾಸ ಕಾಮತ್‌, ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌, ಒಕ್ಕೂಟದ ಉಪಾಧ್ಯಕ್ಷ ದಿನೇಶ್‌ ಕಾಮತ್‌, ಕಾರ್ಯದರ್ಶಿ ಗಣಪತಿ ಪೈ, ಜತೆ ಕಾರ್ಯದರ್ಶಿ ಅತುಲ್‌ ಕುಡ್ವ, ಕೋಶಾಧಿಕಾರಿ ಜಿ. ಉಮೇಶ್‌ ಪೈ ಮತ್ತಿತರರು ನಿಯೋಗದಲ್ಲಿದ್ದರು.

ಹಾಲಿ ಮಠಾಧೀಶರು ಮತ್ತು ಅವರ ಬೆಂಬಲಿಗರನ್ನು ಬೆದರಿಸಿ ತಾನು ಕಾಶೀಮಠ ಸಂಸ್ಥಾನದ ಪೀಠಾಧಿ ಪತಿಯಾಗುವ ಕೆಲಸ ಸಾಧಿಸುವಂತೆ ರಾಘವೇಂದ್ರ ತೀರ್ಥ ಮತ್ತು ಅವರನ್ನು ಬೆಂಬಲಿಸಿ ಉಡುಪಿಯ ರಾಮಚಂದ್ರ ನಾಯಕ್‌ ತನ್ನನ್ನು ಸಂಪರ್ಕಿಸಿದ್ದರು ಎಂದು ವಿಚಾರಣೆಯ ವೇಳೆ ಬಂಧಿತ ಸ್ಯಾಮ್‌ ಪೀಟರ್‌ ಹೇಳಿರುವುದು ಅತ್ಯಂತ ಕಳವಳಕಾರಿ ಎಂದು ಮನವಿ ಸಲ್ಲಿಕೆಗೆ ಮುನ್ನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಎಂ. ಜಗನ್ನಾಥ ಕಾಮತ್‌ ತಿಳಿಸಿದರು.

ಹಿನ್ನೆಲೆ
ಕಾಶೀ ಮಠಾಧೀಶರಾಗಿದ್ದ ಶ್ರೀಮತ್‌ ಸುಧೀಂದ್ರತೀರ್ಥ ಸ್ವಾಮೀಜಿ 1989ರಲ್ಲಿ ಎರ್ನಾಕುಲಂನ ಶಿವಾನಂದ ಪೈ ಅವರಿಗೆ ಸನ್ಯಾಸ ದೀಕ್ಷೆ ನೀಡಿ ರಾಘವೇಂದ್ರ ತೀರ್ಥರೆಂದು ನಾಮಕರಣ ಮಾಡಿದ್ದರು. 1994ರ‌ ಡಿ.12ರಿಂದ ಅನ್ವಯಿಸುವಂತೆ ರಾಘವೇಂದ್ರತೀರ್ಥ ರಿಗೆ ಸಂಸ್ಥಾನದ ಜವಾಬ್ದಾರಿಯನ್ನು ವಹಿಸಿ ಮಠದ ಆರಾಧ್ಯಮೂರ್ತಿಗಳ ಸಹಿತ ಚಿನ್ನಾಭರಣ ಸೊತ್ತುಗಳನ್ನು ನೀಡಿದ್ದರು. ಆದರೆ ಸಂಸ್ಥಾನದ ಕರ್ತವ್ಯ ನಿರ್ವಹಣೆ ಕಷ್ಟವಾಗುತ್ತಿದ್ದು, ಕರ್ತವ್ಯದಿಂದ ವಿಮುಕ್ತರನ್ನಾಗಿಸಿ ಎಂದು ರಾಘವೇಂದ್ರತೀರ್ಥರು 1999ರಲ್ಲಿ ಕೋರಿಕೆ ಮಂಡಿಸಿದ್ದರು. ಕ್ರಮೇಣ ಸರಿ
ಯಾಗಬಹುದೆಂದ ನಿರೀಕ್ಷೆ ಹುಸಿಯಾದಬಳಿಕ 2000ರ‌ಲ್ಲಿ ರಾಘವೇಂದ್ರ ಅವರನ್ನು ಎಲ್ಲ ಕರ್ತವ್ಯಗಳಿಂದ ಗುರು ಸುಧೀಂದ್ರತೀರ್ಥರು ವಿಮುಕ್ತ ಗೊಳಿಸಿದ್ದರು ಎಂದು ಜಗನ್ನಾಥ ಕಾಮತ್‌ ವಿವರಿಸಿದರು.

ಆದರೂ ರಾಘವೇಂದ್ರತೀರ್ಥ ಅವರು ಸಂಸ್ಥಾನದ ಆರಾಧ್ಯಮೂರ್ತಿ ಗಳು, ಚಿನ್ನಾಭರಣ ಮತ್ತು ಸೊತ್ತುಗಳನ್ನು ಮರಳಿಸದೆ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಅಲ್ಲಿಯೂ ವಿಫಲರಾದಾಗ ಕಾನೂನು ಆದೇಶವನ್ನು ಧಿಕ್ಕರಿಸಿ ತಲೆ ಮರೆಸಿಕೊಂಡಿದ್ದರು. 2011ರಲ್ಲಿ ರಾಘವೇಂದ್ರ ಅವರು ಪೋಲೀಸರ ವಶವಾದ ಬಳಿಕ 2015ರಲ್ಲಿ ಸುಧೀಂದ್ರತೀರ್ಥ ಅವರು ರಾಘವೇಂದ್ರರನ್ನು ತಮ್ಮ ಉತ್ತರಾಧಿಕಾರಿ ಅಲ್ಲ ಎಂದು ಘೋಷಿಸಿ ಸಂಯಮೀಂದ್ರತೀರ್ಥ ಅವರನ್ನು ಸಂಸ್ಥಾನದ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. 2016ರಲ್ಲಿ ಗುರು ಸುಧೀಂದ್ರತೀರ್ಥ ಅವರು ವೃಂದಾವನಸ್ಥರಾದ ಸಂದರ್ಭ ಅವರ ಆದೇಶದಂತೆ ಸಂಯಮೀಂದ್ರತೀರ್ಥ ಅವರು ಶ್ರೀ ಕಾಶೀ ಮಠದ ಪೀಠಾಧಿಪತಿಯಾಗಿ ಸಂಸ್ಥಾನವನ್ನು ಮುನ್ನಡೆಸುತ್ತಿದ್ದಾರೆ ಎಂದು ಜಗನ್ನಾಥ ಕಾಮತ್‌ ತಿಳಿಸಿದರು.

ರಾಘವೇಂದ್ರ ಮತ್ತು ಅವರ ಬೆಂಬಲಿಗರು ಎರಡು ದಶಕಗಳಿಂದ ಶ್ರೀ ಸಂಸ್ಥಾನದ ಮಠಾಧೀಶರು, ದೇಗುಲಗಳ ಟ್ರಸ್ಟಿಗಳು, ಸಂಘ ಸಂಸ್ಥೆಗಳ ಮೇಲೆ ಆರೋಪ, ಸುಳ್ಳು ದಾವೆಗಳಿಗೆ ಮುಂದಾಗಿ ಕಿರುಕುಳ ನೀಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳು ಮತ್ತು ವಿವಿಧ ಜಿಎಸ್‌ಬಿ ದೇವಸ್ಥಾನಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.