ಉದಯವಾಣಿ ವಿಶೇಷ : ಏರಿಕೆಯತ್ತ ಅಡಿಕೆ, ಕರಿಮೆಣಸು ಧಾರಣೆ
Team Udayavani, Jul 27, 2018, 5:50 AM IST
ಸುಳ್ಯ: ಕೆಲವು ತಿಂಗಳುಗಳಿಂದ ಕುಸಿತ ಕಂಡಿರುವ ಅಡಿಕೆ, ಕರಿಮೆಣಸು ಧಾರಣೆಯೀಗ ತುಸು ಏರಿಕೆ ಕಂಡಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಹೊರ ರಾಜ್ಯದ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು ಈ ಏರಿಕೆಗೆ ಕಾರಣ. ಆದರೆ ಮಾರ್ಚ್ ಕೊನೆಯಲ್ಲಿ ಹೊಸ ಅಡಿಕೆ 220 ರೂ., ಹಳೆ ಅಡಿಕೆ 260 ರೂ.ನಲ್ಲಿ ಖರೀದಿ ಆಗಿತ್ತು. ಎಪ್ರಿಲ್, ಮೇ, ಜೂನ್ ತಿಂಗಳಲ್ಲಿಯೂ ಧಾರಣೆ ಇಳಿ ಹಂತದಲ್ಲೇ ಇತ್ತು. ಜುಲೈ ಆರಂಭದಿಂದ ತುಸು ಏರುಗತಿಯಲ್ಲಿದೆ.
ಧಾರಣೆಯಲ್ಲಿ ಏರಿಕೆ
ಜುಲೈ ಮೊದಲ ವಾರದಿಂದ ಅಡಿಕೆ ಧಾರಣೆ ಪರವಾಗಿಲ್ಲ. ಜು. 26ರಂದು ಪುತ್ತೂರು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 200ರಿಂದ 233 ರೂ. ಒಳಗೆ ಖರೀದಿಯಾಗಿದೆ. ಜು. 23ರಿಂದ 26ರ ಈ ಮೂರು ದಿನಗಳಲ್ಲಿ 3 ರೂ.ಗಳಷ್ಟು ಏರಿಕೆಯಾದಂತಾಗಿದೆ. ಹಳೆ ಅಡಿಕೆ ಗುರುವಾರ 290ರಲ್ಲಿ ಖರೀದಿಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಧಾರಣೆ ಯಥಾಸ್ಥಿತಿಯಲ್ಲಿದೆ.
ಕರಿಮೆಣಸಿನಲ್ಲೂ 15 ರೂ. ಏರಿಕೆ
ಈ ಹಿಂದಿನ ವರ್ಷ 800 ರೂ. ಸನಿಹಕ್ಕೆ ಬಂದಿದ್ದ ಕರಿಮೆಣಸು ಧಾರಣೆ ಬಳಿಕ ಏಕಾಏಕಿ ಕುಸಿತ ಕಂಡಿತ್ತು. ಅಡಿಕೆ, ತೆಂಗು ಬೆಳೆಗಾರರ ಪಾಲಿಗೆ ಉಪ ಬೆಳೆಯಾಗಿ, ಅಡಿಕೆ ಧಾರಣೆ ಕೈಕೊಡುವ ಸಂದರ್ಭ ಆಸರೆಯಾಗುತ್ತಿದ್ದ ಕರಿಮೆಣಸೂ 285ಕ್ಕೆ ಕುಸಿದಿತ್ತು. ಕೆಲವು ದಿನಗಳಿಂದ ಧಾರಣೆಯಲ್ಲಿ ಏರಿಕೆ ಕಾಣುತ್ತಿದ್ದು, ಜು. 26ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 320ಕ್ಕೆ ಖರೀದಿ ಆಗಿದೆ. ಸೋಮವಾರಕ್ಕೆ ಹೋಲಿಸಿದರೆ ಮೂರು ದಿನಗಳಲ್ಲಿ 15 ರೂ. ಏರಿಕೆಯಾಗಿದೆ. ಹೊರ ಮಾರುಕಟ್ಟೆಯಲ್ಲಿ 322ರ ತನಕವೂ ಇತ್ತು ಅನ್ನುತ್ತಾರೆ ಕೆಲವು ಬೆಳೆಗಾರರು.
ಹೊರ ರಾಜ್ಯದಲ್ಲಿ ಬೇಡಿಕೆ
ಗಣೇಶ ಚತುರ್ಥಿ ಸೇರಿದಂತೆ ನಾನಾ ಹಬ್ಬಗಳು ಬರುತ್ತಿರುವುದರಿಂದ ಹೊರ ರಾಜ್ಯಗಳಲ್ಲಿ ಅಡಿಕೆ ಬೇಡಿಕೆ ಹೆಚ್ಚಿದೆ. ಉತ್ತರ ಭಾರತದಲ್ಲಿ ಪಾನ್ ಮಸಾಲಗಳಿಗೆ, ಅಡಿಕೆ ಆಧಾರಿತ ಇತರ ಉತ್ಪನ್ನಗಳಿಗೆ ಮಂಗಳೂರು ಚಾಲಿ ಅಡಿಕೆ ಬಳಸುವುದೂ ಏರಿಕೆಗೆ ಕಾರಣ ಎನ್ನುತ್ತವೆ ಮಾರುಕಟ್ಟೆ ಮೂಲಗಳು.
ಏರು-ಇಳಿಕೆ…!
2017ರ ಜುಲೈಯ ಮಾರುಕಟ್ಟೆಗೆ ಹೋಲಿಸಿದರೆ ಈ ವರ್ಷ ಹಳೆ ಅಡಿಕೆ ಧಾರಣೆ ಹೆಚ್ಚಳವಾಗಿದೆ. ಹೊಸ ಅಡಿಕೆ ಧಾರಣೆ ಕಡಿಮೆ ಇದೆ. 2017 ಜು. 26 ರಂದು ಹಳೆ ಅಡಿಕೆ ಧಾರಣೆ 280ರ ಆಸುಪಾಸಿನಲ್ಲಿತ್ತು. ಈ ಬಾರಿ 290ಕ್ಕೆ ಏರಿದೆ. ಹೊಸ ಅಡಿಕೆ ಧಾರಣೆ ಕಳೆದ ವರ್ಷ 240 ರೂ.ನಲ್ಲಿತ್ತು. ಈ ವರ್ಷ 233 ರೂ. ಗಡಿಯಲ್ಲಿದ್ದು, 7 ರೂ. ಕುಸಿತದಲ್ಲಿದೆ. ಜೂನ್ -ಜುಲೈ ಅಡಿಕೆ ಧಾರಣೆ ಗಮನಿಸಿದಾಗ, ಹಳೆ ಅಡಿಕೆಗೆ 2014ರಲ್ಲಿ 222, 2015ರಲ್ಲಿ 330, 2016ರಲ್ಲಿ 300, 2017ರಲ್ಲಿ 285, ಹೊಸ ಅಡಿಕೆಗೆ 200, 250, 235, 240 ರೂ. ಗಳಿತ್ತು.
ಏರಿಕೆ ಕಾಣಲಿದೆ
ಹೊಸ ಅಡಿಕೆ ಧಾರಣೆ ಇನ್ನಷ್ಟು ಏರಿಕೆ ಕಾಣುವ ಅವಕಾಶ ಇದೆ. ಬೇಡಿಕೆ ಹೆಚ್ಚಳದ ಜತೆಗೆ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುತ್ತಿರುವುದು ಇದಕ್ಕೆ ಕಾರಣ. ಕರಿಮೆಣಸು ಧಾರಣೆ ಏರಿಕೆ ಕಂಡಿದ್ದು, ಇಲ್ಲಿನ ಏರಿಳಿಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದೆ.
– ಎಸ್.ಆರ್. ಸತೀಶ್ಚಂದ್ರ ಅಧ್ಯಕ್ಷರು, ಕ್ಯಾಂಪ್ಕೊ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.