ಅರಂತೋಡು : ರಜೆಯಲ್ಲಿ ಅಜ್ಜನ ಮನೆಗೆ ಬಂದಿದ್ದ ಬಾಲಕ ಹೊಳೆಯಲ್ಲಿ ಮುಳುಗಿ ಸಾವು
Team Udayavani, Apr 27, 2022, 9:14 PM IST
ಅರಂತೋಡು : ಕುಕ್ಕುಂಬಳ ಹೊಳೆಗೆ ಸ್ನಾನ ಮಾಡಲು ತೆರಳಿದ ಮಂಗಳೂರಿನ ಬಾಲಕ ಮನ್ವಿತ್(12 ) ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಅರಂತೋಡಿನಿಂದ ವರದಿಯಾಗಿದೆ.
ದಾಮೋದರ ಶೆಟ್ಟಿಯವರ ಮಗಳನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಯಿತು. ರಜೆಯ ಸಮಯವಾದರಿಂದ ಕುಕ್ಕುಂಬಳ ತನ್ನ ಅಜ್ಜನ ಮನೆಗೆ ಬಂದಿದ್ದನು ಸಂಜೆ ಇಬ್ಬರು ಬಾಲಕರು ಸ್ನಾನ ಮಾಡಲು ಕುಕ್ಕುಂಬಳ ಹೊಳೆಗೆ ತೆರಳಿದ್ದರು. ಸ್ನಾನ ಮಾಡುತ್ತ ಆಡವಾಡುತ್ತಿದ್ದಾಗ ಮನ್ವಿತ್ ನೀರಿನ ಸೆಳೆತೆಗೆ ಸಿಲುಕಿಕೊಂಡು ನೀರಲ್ಲಿ ಮುಳುಗಿ ಹೋದ.
ಸಹ ಪಾಟಿ ನೀರಲ್ಲಿ ಮುಳುಗಿದ ವಿಷಯವನ್ನು ಜತೆಗಿದ್ದ ಹುಡುಗ ಮನೆಯವರಿಗೆ ಬಂದು ತಿಳಿಸಿದ್ದಾನೆ. ಬಳಿಕ ಶರತ್ ಅಡ್ಯಡ್ಕ, ನಿಧೀಶ್ ಅರಂತೋಡು,ತಾಜುದ್ದೀನ್ ಅರಂತೋಡು, ಮುನೀರ್ ಸಂಟ್ಯಾರ್, ಫಯಾಜ್ ಪಟೇಲ್, ಸಂಸುದ್ದೀನ್ ಪೇಲ್ತಡ್ಕ ರವರು ಕಾರ್ಯಾಚರಣೆ ಮಾಡಿ ಮೃತದೇಹ ಮೇಲಕ್ಕೆತ್ತಿದ್ದಾರೆ.
ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ವಾರಿಜ ಕುರುಂಜಿ, ಹಂಸ ಕುಕ್ಕುಂಬಳ ,ಸೋಮಶೇಖರ್ ಪೈಕ ಘಟನ ಸ್ಥಳಕ್ಕೆ ಭೇಟಿ ನೀಡಿದರು.
ಇದನ್ನೂ ಓದಿ : ಇಂಧನ ಬೆಲೆ ಹೆಚ್ಚಿರುವ 10 ರಾಜ್ಯಗಳಲ್ಲಿ 8 ರಲ್ಲಿ ವಿಪಕ್ಷಗಳ ಆಡಳಿತ: ಬಿಜೆಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.