ಅಪಾಯಕಾರಿ ಸ್ಥಿತಿಯಲ್ಲಿ ಅರಂತೋಡು ವಿ.ಎ. ಕಚೇರಿ
Team Udayavani, Feb 1, 2018, 11:12 AM IST
ಬೆಳ್ಳಾರೆ : ಅರಂತೋಡು ಗ್ರಾಮಕರಣಿಕರ ಕಚೇರಿ ಶಿಥಿಲಗೊಂಡು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಕಚೇರಿ ಹಳೆಯದಾಗಿದ್ದು, ಛಾವಣಿಯ ಪಕ್ಕಾಸು, ರೀಪು, ಬಾಗಿಲು ಹಾಗೂ ಕಿಟಕಿಗಳಿಗೆ ಗೆದ್ದಲು ಹಿಡಿದಿದೆ. ಹೀಗಾಗಿ, ಕಚೇರಿ ಇಂದೋ ನಾಳೆಯೋ ಧರಾಶಾಹಿಯಾಗುವ ಸ್ಥಿತಿಯಲ್ಲಿದೆ.
ಎರಡು ಗ್ರಾಮಗಳ ಕಚೇರಿ
ಅರಂತೋಡು ಗ್ರಾಮ ಕರಣಿಕರ ಕಚೇರಿಯಲ್ಲಿ ಅರಂತೋಡು ಮತ್ತು ತೊಡಿಕಾನ – ಈ ಎರಡು ಗ್ರಾಮಗಳ ಗ್ರಾಮ ಕರಣಿಕರು ಮತ್ತು ಇಬ್ಬರು ಸಹಾಯಕರು ಹೀಗೆ ಒಟ್ಟು 4 ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡು ಗ್ರಾಮಗಳಿಗೆ ಸಂಬಂಧಪಟ್ಟ ಕಡತಗಳು ಇಲ್ಲಿವೆ. ಕಚೇರಿ ಶಿಥಿಲಗೊಂಡ ಪರಿಣಾಮ ಕಡತಗಳಿಗೂ ಅಪಾಯ ಎದುರಾಗಿದೆ.
ಬ್ರಿಟಿಷರ ಕಾಲದ ಕಟ್ಟಡ
ಇದು ಬ್ರಿಟಿಷರ ಕಾಲದ ಬಂಗ್ಲೆಯಾಗಿದೆ. ಒಂದು ಶತಮಾನಕ್ಕಿಂತಲೂ ಹಳೆಯ ಕಟ್ಟಡವಿದು. ಸಾಮಂತ ರಾಜರು ಅತ್ತಿತ್ತ ಸಂಚರಿಸುತ್ತಿದ್ದಾಗ ಕಟ್ಟಡದ ಎದುರು ತಮ್ಮ ಕುದುರೆಗಳನ್ನು ಕಟ್ಟಿಹಾಕಿ, ಇಲ್ಲಿ ತಂಗುತ್ತಿದ್ದರು ಎಂಬ ಉಲ್ಲೇಖವಿದೆ. ಕಟ್ಟಡದ ಎದುರು ಕುದುರೆಗಳನ್ನು ಕಟ್ಟುವುದಕ್ಕಾಗಿ ಕಂಬಗಳಿದ್ದವು. ರಸ್ತೆ ವಿಸ್ತರಣೆ ಕಾಮಗಾರಿ
ಸಂದರ್ಭದಲ್ಲಿ ಕುದುರೆ ಕಟ್ಟುವ ಕಂಬಗಳನ್ನು ತೆರವುಗೊಳಿಸಲಾಗಿದೆ.
ಗ್ರಾಮಕರಣಿಕರ ಕಚೇರಿಯಿರುವ ಕಟ್ಟಡ ಈತನಕ ವಿದ್ಯುತ್ ಭಾಗ್ಯ ಕಂಡಿಲ್ಲ. ಹರಕು – ಮುರುಕು ಕಟ್ಟಡದಲ್ಲಿ ಸಿಬಂದಿ
ಕತ್ತಲಲ್ಲೇ ಕುಳಿತು ಕೆಲಸ ಮಾಡುತ್ತಾರೆ. ಬೇಸಗೆಯಲ್ಲಿ ಫ್ಯಾನ್ ಹಾಕಲೂ ಅವಕಾಶವಿಲ್ಲದೆ ಸೆಕೆ ಸಹಿಸಿಕೊಂಡೇ ಕಡತಗಳಲ್ಲಿ ಮುಳುಗಿರುತ್ತಾರೆ. ಸೆಕೆ ಜಾಸ್ತಿಯಾದರೆ ಗಾಳಿ ಸೇವನೆಗೆಂದು ಆಗಾಗ ಕಟ್ಟಡದ ಹೊರಗೆ ಬರುತ್ತಾರೆ. ಈ ಕಚೇರಿಗೆ ಶೌಚಾಲಯ ಹಾಗೂ ನೀರಿನ ವ್ಯವಸ್ಥೆಯೂ ಇಲ್ಲ. ಶೌಚಾಲಯಕ್ಕೆ ತೆರಳುವ ಅನಿವಾರ್ಯತೆ ಎದುರಾದರೆ ದೂರದ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯವೇ ಗತಿ.
ಬಾರದ ಗ್ರಾಮ ಕರಣಿಕರು
ತೊಡಿಕಾನ ಗ್ರಾಮಕ್ಕೆ ಪ್ರತ್ಯೇಕ ವಿ.ಎ. ಇದ್ದರೂ ಗ್ರಾಮ ಕರಣಿಕರು ಬಾರದೆ ಅರಂತೋಡಿನ ವಿ.ಎ. ಕಚೇರಿಯಲ್ಲೇ
ಉಳಿದುಕೊಳ್ಳುತ್ತಿದ್ದಾರೆ. ಇದರಿಂದ ಈ ಭಾಗದ ಗ್ರಾಮಸ್ಥರು ತಮ್ಮ ಕಂದಾಯ ಇಲಾಖೆಯ ವ್ಯವಹಾರಕ್ಕೆ ಅರಂತೋಡಿಗೆ ಅಲೆದಾಟ ಮಾಡಬೇಕಾಗಿದೆ. ಅರಂತೋಡು ಗ್ರಾಮ ಕರಣಿಕರ ಕಚೇರಿ ದುರಸ್ತಿ ಮಾಡುವ ಬಗ್ಗೆ ಹಾಗೂ ವಿ.ಎ. ತೊಡಿಕಾನಕ್ಕೆ ಬರುವಂತಾಗಲು ಉಭಯ ಗ್ರಾಮದ ಜನರು ಒತ್ತಾಯಿಸುತ್ತಿದ್ದಾರೆ.
ಬೇಸರದ ವಿಷಯ
ಗ್ರಾಮ ಕರಣಿಕರ ಕಚೇರಿ ತುಂಬಾ ಶಿಥಿಲಗೊಂಡಿದ್ದು, ಸಂಬಂಧಪಟ್ಟ ಇಲಾಖೆಗೆ ನಾವು ಪಂಚಾಯತ್ ವತಿಯಿಂದ ಪತ್ರ ಬರೆದಿದ್ದೇವೆ. ಈ ತನಕ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇದು ತುಂಬಾ ಬೇಸರದ ವಿಷಯ.
– ನೀಲಾವತಿ ಕೊಡಂಕೇರಿ,ಅರಂತೋಡು ಗ್ರಾ.ಪಂ. ಅಧ್ಯಕ್ಷರು
ಜಿಲ್ಲಾಧಿಕಾರಿಗೆ ಪತ್ರ
ಡಿಸಿಗೆ ಪತ್ರ ಬರೆಯುತ್ತೇನೆ. ಅನುದಾನ ದೊರೆತರೆ ದುರಸ್ತಿ ಇಲ್ಲವೆ ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಆಲೋಚನೆ ಮಾಡುತ್ತೇವೆ.
– ಕುಂಞಮ್ಮ, ತಹಶೀಲ್ದಾರ್, ಸುಳ್ಯ
ಶತಮಾನದಷ್ಟು ಹಳೆಯ ಕಟ್ಟಡ
ಸುಳ್ಯಕ್ಕೆ ಹಲವು ತಹಶೀಲ್ದಾರ್‌ಗಳು ಬಂದರೂ ಅರಂತೋಡು ವಿ.ಎ. ಕಚೇರಿ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಇದು ಶತಮಾನದಷ್ಟು ಹಳೆಯ ಕಟ್ಟಡವಾಗಿದೆ.ಯಾವ ವಿ.ಎ.ಗಳೂ ಕಚೇರಿ ದುರಸ್ತಿಗೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.
– ಆಶ್ರಫ್ ಗುಂಡಿ, ಅರಂತೋಡು
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.