ಅಡಿಕೆ, ತೆಂಗಿನ ಮರ ಏರುವ ಈ ಸಾಧನ ಕೃಷಿ ಕಾರ್ಯಕ್ಕೆ ಉತ್ತೇಜನ


Team Udayavani, Mar 31, 2017, 10:43 AM IST

2803pkt1A(autometed-coconut.jpg

ಪುಂಜಾಲಕಟ್ಟೆ: ಕೃಷಿ ಚಟುವಟಿಕೆಗೆ ಪೂರಕವಾಗಬಲ್ಲ ಹೊಸ ಯಂತ್ರೋಪಕರಣಗಳ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿರುವುದು ಆಶಾದಾಯಕವಾಗಿದೆ. ಇಂತಹ ಹೊಸ ಆವಿಷ್ಕಾರಗಳಿಂದ ಕೃಷಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಕೃಷಿಯೇ ದೇಶದ ಬೆನ್ನೆಲುಬು. ಆದರೆ ಕೃಷಿ ಮಾಡಲು, ಮಾಡಿದ ಕೃಷಿಯನ್ನು ರೈತ ಪಡೆಯಲು ಸಂಕಷ್ಟಪಡುತ್ತಿದ್ದಾನೆ. ಕೃಷಿ ಕಾರ್ಯಗಳಿಗೆ ಕಾರ್ಮಿಕರ ಸಮಸ್ಯೆ ಕಾಡುತ್ತಿದ್ದು ಕೃಷಿಕರು ಕಂಗೆಟ್ಟಿದ್ದಾರೆ. ಅದರಲ್ಲೂ ಅಡಿಕೆ, ತೆಂಗಿನ ಮರ ಹತ್ತಿ ಫಸಲು ಇಳಿಸುವ ಪರಿಣತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಸಮಸ್ಯೆಯ ಪರಿಹಾರಕ್ಕೆ ಕೃಷಿ ಮೂಲದ ಕುಟುಂಬದಿಂದ ಬಂದಂತಹ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ವಿದ್ಯಾರ್ಥಿ ಪ್ರಮೀತ್‌ ಶೆಟ್ಟಿ ತನ್ನ ಸಹಪಾಠಿ ವೆಂಕಟೇಶ್‌ ಪ್ರಭು ಅವರ ಜತೆ ಸೇರಿ ಸುಲಭ ಉಪಾಯ ಕಂಡುಕೊಂಡಿದ್ದಾರೆ. 

ಏನಿದು ಸಾಧನ
ಕೃಷಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ “ಆಟೋಮೇಟೆಡ್‌ ಕೋಕನಟ್‌ ಪ್ಲಕ್ಕರ್‌ ವಿತ್‌ ಕ್ಯಾಮರಾ’ ಎಂಬ ವಿಶೇಷ ಯಂತ್ರವನ್ನು ಆವಿಷ್ಕಾರ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದು ಅಕ್ಷರಶಃ ಕೃಷಿಕರ ಪಾಲಿಗೆ ವರದಾನ. ಅಡಿಕೆ ಮರವಿರಲಿ, ತೆಂಗಿನ ಮರವಿರಲಿ ಈ ಯಂತ್ರಕ್ಕೆ ಸಮಸ್ಯೆಯೇ ಅಲ್ಲ. ಎಷ್ಟೇ ಎತ್ತರ ಮತ್ತು ಯಾವುದೇ ಸುತ್ತಳತೆಯ ಮರವನ್ನಾದರೂ ಇದು ತಾನಾಗಿಯೇ ಏರಬಲ್ಲದು.

ದ್ವಿತೀಯ ಪ್ರಶಸ್ತಿ 
ಮೂಡಬಿದಿರೆ ಎಸ್‌.ಎನ್‌. ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿರುವ ಪ್ರಮೀತ್‌ ಶೆಟ್ಟಿ ಅವರು ರಾಜ್ಯ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ವತಿಯಿಂದ ಬಾಗಲಕೋಟೆ  ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ ರಾಜ್ಯಮಟ್ಟದ “ನೀವೇ ಮಾಡಿ ನೋಡಿ’ ತಾಂತ್ರಿಕ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಈ ಯಂತ್ರವನ್ನು ತಯಾರಿಸಿ ಈ ಸಾಧನೆ ಮಾಡಿ ದ್ವಿತೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.  ಗ್ರಾಮೀಣ ಪ್ರದೇಶದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಡೆಸಿರುವ ಈ ಪ್ರಯತ್ನ ಅಭಿನಂದನೀಯವಾಗಿದೆ. ಇದಕ್ಕೆ ಅವರ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಮತ್ತು ಇನ್ನೋವೇಟಿವ್‌ ಕ್ಲಬ್‌ ಸಂಚಾಲಕರ ಸಹಕಾರವಿದೆ.

ಕೃಷಿ ಕುಟುಂಬದವರಾಗಿದ್ದು, ಅರಳ ಗ್ರಾ.ಪಂ. ಸದಸ್ಯರಾದ ಲಕ್ಷ್ಮೀಧರ ಮತ್ತು ರೂಪಾ ದಂಪತಿಯ ಪುತ್ರನಾಗಿರುವ ಪ್ರಮೀತ್‌ ಶೆಟ್ಟಿ ಅವರ ಸಾಧನೆ ಮತ್ತಷ್ಟು ಮುಂದುವರಿಸಲು  ಮನೆಮಂದಿಯ ಮತ್ತು ಊರವರ ಉತ್ತೇಜನವಿದೆ. ಪ್ರಸ್ತುತ ಈ ಯಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ಡಿಸ್‌ಪ್ಲೇ ಮೂಲಕ ಚಿತ್ರ ರವಾನೆ 
ಅಡಿಕೆ, ತೆಂಗಿನ ಕೊಯ್ಲಿಗೆ ಈ ಯಂತ್ರ ಪರಿಣಾಮಕಾರಿಯಾಗಿ ಬಳಕೆ ಮಾಡಬಹುದಾಗಿದೆ. ಅಡಿಕೆಗೆ ಔಷಧ ಸಿಂಪಡಣೆಗೂ ಇದನ್ನು ಬಳಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗೊನೆಯಲ್ಲಿರುವ ಕೆಲವು ಕಾಯಿಗಳನ್ನಷ್ಟೇ ಕೀಳಬೇಕು ಎಂದಾದರೂ ಇದರಲ್ಲಿ ವ್ಯವಸ್ಥೆಯಿದೆ. ಆಯ್ದ ಕಾಯಿಗಳನ್ನಷ್ಟೇ ಕತ್ತರಿಸಿ ಕೆಳಗೆ ಹಾಕುವ ವ್ಯವಸ್ಥೆ ಇದೆ. 12 ವೋಲ್ಟ್ ಬ್ಯಾಟರಿಯಿಂದ ಚಾಲನೆಗೊಳ್ಳುವ ಈ ಯಂತ್ರ ಒಂದು ಬಾರಿ ಬ್ಯಾಟರಿ ಫುಲ್‌ ಚಾರ್ಜ್‌ ಮಾಡಿದರೆ 150 ಮರಗಳಿಂದ ಕಾಯಿ ಕೀಳುವ ಸಾಮರ್ಥ್ಯ ಹೊಂದಿದೆ.

ಯಂತ್ರದಲ್ಲಿರುವ  ಕೆಮರಾ ಲೆನ್ಸ್‌ ಸ್ಮಾರ್ಟ್‌ ಫೋನ್‌ಗೆ ಸಿಗ್ನಲ್‌ ರವಾನೆ ಮಾಡುವ ಮೂಲಕ ಡಿಸ್‌ಪ್ಲೇ ಮೂಲಕ ಮರದ ತುತ್ತ ತುದಿಯ ಚಿತ್ರಗಳನ್ನೂ ಗೊನೆ, ಕಾಯಿಗಳ ವೀಕ್ಷಣೆಯನ್ನೂ ಸುಲಭದಲ್ಲಿ ಮಾಡಬಹುದಾಗಿದೆ.

– ರತ್ನದೇವ್‌ ಪುಂಜಾಲಕಟ್ಟೆ

ಟಾಪ್ ನ್ಯೂಸ್

1-aishw

Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!

police

Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್‌ ಸೋಮನ ವಿರುದ್ಧ ಕೇಸ್‌

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ

1-lokk

Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!

MONEY (2)

Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?

Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ

Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್‌ ಧನ್‌ಕರ್‌

ಜನಾಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪ್ರಜಾಪ್ರಭುತ್ವ ಉಳಿಯದು: ಜಗದೀಪ್‌ ಧನ್‌ಕರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-aishw

Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!

police

Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್‌ ಸೋಮನ ವಿರುದ್ಧ ಕೇಸ್‌

Lokayukta

Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

1-gadag

Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ

1-lokk

Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.