ಅರಿಯಡ್ಕ: ನೀರಿನ ಸಮಸ್ಯೆಗೆ ಗ್ರಾಮಸಭೆಯಲ್ಲಿ ಪರಿಹಾರ


Team Udayavani, Feb 25, 2017, 2:15 PM IST

242kbr-1.jpg

ಅರಿಯಡ್ಕ : ಕಳೆದ ಹಲವಾರು ವರ್ಷಗಳಿಂದ ಅರಿಯಡ್ಕ ಗ್ರಾಮದ ಪಳ್ಳದಗುರಿಯ ಸುಮಾರು 25ಕ್ಕೂ ಅಧಿಧಿಕ ಮನೆಯವರು ಕುಡಿಯುವ ನೀರಿಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಇಲ್ಲಿನ ಗ್ರಾಮಸಭೆಯಲ್ಲಿ ತತ್ಕಾಲಿಕ ಪರಿಹಾರದ ಭರವಸೆ ದೊರೆತಿದೆ. 

ಕೌಡಿಚ್ಚಾರು ಶ್ರೀಕೃಷ್ಣ ಭಜನ ಮಂದಿರದ ಸಭಾ ಭವನದಲ್ಲಿ ಅರಿಯಡ್ಕ ಗ್ರಾ.ಪಂ. ಗ್ರಾಮ ಸಭೆ ಪಂಚಾಯತ್‌ ಅಧ್ಯಕ್ಷೆ ಸವಿತಾ ಎಸ್‌. ಅಧ್ಯಕ್ಷತೆಯಲ್ಲಿ ನಡೆಯಿತು.

ಪಳ್ಳದಗುರಿ ಪ್ರದೇಶದಲ್ಲಿ ಕಳೆದ 4 ವರ್ಷಗಳ ಹಿಂದೆ ಜಿ.ಪಂ. ಅನುದಾನದಲ್ಲಿ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಟ್ಯಾಂಕ್‌ ರಚನೆ ಮಾಡಿ ಪೈಪ್‌ ಸಂಪರ್ಕ ನೀಡಲಾಗಿದೆ. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ವಿದ್ಯುತ್‌ ಸಂಪರ್ಕವನ್ನು ಮಾಡದೆ ಅಪೂರ್ಣಗೊಳಿಸಿರುವುದು ಸಮಸ್ಯೆ. ಈ ಪ್ರದೇಶದ ಜನ ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿದ್ದರಿಂದ ಪರಿಹಾರವೊಂದು ದೊರೆತಿದೆ. ಸಮಸ್ಯೆ ಕುರಿತು ಪರಸ್ಪರ ಆರೋಪ ನಡೆಸಲಾಯಿತು. ಅನಂತರ ಲೋಕೇಶ್‌ ಅಮೈ ಮಾತನಾಡಿ, ವಿದ್ಯುತ್‌ ಸಂಪರ್ಕಕ್ಕೆ ತಾತ್ಕಾಲಿಕ ಅನುಮತಿಯಲ್ಲಿ ಮೀಟರ್‌ ಅಳವಡಿಸಿ ನೀರಿನ ಸಂಪರ್ಕಗೊಳಿಸುಲು ವಿನಂತಿ ಮಾಡಿದರು. ಇದಕ್ಕೆ ಗ್ರಾ.ಪಂ. ಅಧ್ಯಕ್ಷೆ ಸವಿತಾ ಸಹಮತ ವ್ಯಕ್ತಪಡಿಸಿ ಸಮಸ್ಯೆಗೆ ಪರಿಹಾರದ ಭರವಸೆ ನೀಡಿದರು.

ರಸ್ತೆ ಅಭಿವೃದ್ಧಿ ಮಾಡಿ
ಗ್ರಾಮದ ಪಯಂದೂರು- ಕೋರಿಕ್ಕಾರ್‌ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮಹಿಳೆಯರು ಒತ್ತಾಯಿಸಿದರು.ಇದಕ್ಕೆ ಪಂಚಾಯತ್‌ ಸದಸ್ಯ ರಾಜೇಶ್‌ ಉತ್ತರಿಸಿ, ಈಗಾಗಲೇ ಪ್ರಥಮ ಹಂತವಾಗಿ ಅನುದಾನವನ್ನು ನೀಡಲಾಗಿದೆ. ಇದರಲ್ಲಿ ಒಂದಷ್ಟು ರಸ್ತೆ ದುರಸ್ತಿಯಾಗಿದೆ. ಮುಂದಿನ ವರ್ಷದಲ್ಲಿ ರಸ್ತೆಯನ್ನು ಹೆಚ್ಚು ಅಭಿವೃದ್ಧಿ ಮಾಡುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಸ್ಥಳೀಯ ನಿವಾಸಿಗಳು “ನಮಗೆ ಶೀಘ್ರವಾಗಿ ಅನುದಾನದ ಬಿಡುಗಡೆಯಾಗಬೇಕು’ ಎಂದು ಪಟ್ಟುಹಿಡಿದರು.

ಹೊರಗಿನವರು ಚರ್ಚೆಯಲ್ಲಿ
ಗ್ರಾಮ ಸಭೆಯಲ್ಲಿ ದಲಿತ ಸಂಘಟನೆ ಮುಖಂಡ ಗಿರಿಧರ್‌ ನಾಯ್ಕ ಉಪಸ್ಥಿತಿ ಇದ್ದು, ಮಾಟ್ನೂರು ಗ್ರಾಮದ ಮಾಡನ್ನೂರು-ಅಂಕೋತ್ತಿಮಾರ್‌ ರಸ್ತೆ ಅಭಿವೃದ್ಧಿ ಕುರಿತು ಪ್ರಶ್ನಿಸಲು ಮುಂದಾದರು. ಈ ವೇಳೆಯಲ್ಲಿ ಗ್ರಾಮಸ್ಥರಾದ ಜಾಬೀರ್‌ ಅರಿಯಡ್ಕ, ಇಕ್ಬಾಲ್‌ ಹುಸೇನ್‌, ಗ್ರಾ.ಪಂ. ಸದಸ್ಯ ದಿವ್ಯನಾಥ ಶೆಟ್ಟಿ ಹಾಗೂ ಇತರರ ಅನೇಕ ಮಂದಿ ಹೊರ ಗ್ರಾಮದವರು ನಮ್ಮ ಗ್ರಾಮಸಭೆಯಲ್ಲಿ ಬಂದು ಪ್ರಶ್ನಿಸುವ ಹಕ್ಕು ಇಲ್ಲ. ಮೊದಲು ಗ್ರಾಮದಲ್ಲದ ವ್ಯಕ್ತಿಯನ್ನು ಹೊರಗೆ ಕಳುಹಿಸಿ ಎಂದು ಸಭೆಯಲ್ಲಿ ಪಂಚಾಯತ್‌ ಅಧ್ಯಕ್ಷರನ್ನು, ಸಭೆಯ ಚರ್ಚಾ ನಿಯಂತ್ರಣಾಧಿಕಾರಿ ರೋಹಿತ್‌ದಾಸ್‌ಗೆ ಒತ್ತಾಯಿಸಿದರು. ಚರ್ಚೆ ವೇಳೆ ಧಿಕ್ಕಾರ, ಆರೋಪ ಪ್ರತ್ಯಾರೋಪ ನಡೆದವು. ಒಟ್ಟಾರೆ ಸಭೆಯಲ್ಲಿ ಗೊಂದಲದ ವಾತಾವರಣ. ಈ ವೇಳೆ ಸಭೆಯಿಂದ ಗ್ರಾಮಸ್ಥರಲ್ಲದಿದ್ದರೆ ಹೊರಹೋಗಲು ಪಂಚಾಯತ್‌ ಅಧ್ಯಕ್ಷೆ ಸವಿತಾ ಎಸ್‌. ಮತ್ತು ಚರ್ಚಾ ನಿಯಂತ್ರಣ ಅಧಿಧಿಕಾರಿ ಸೂಚಿದರು.
 
ಗ್ರಾ.ಪಂ. ಅಧ್ಯಕ್ಷೆ, ತಾ.ಪಂ. ಸದಸ್ಯ ರಾಧಾಕೃಷ್ಣ ಬೋರ್ಕರ್‌, ಪಂ. ಉಪಾಧ್ಯಕ್ಷ ಲೋಕೇಶ್‌ ಚಾಕೋಟೆ ಜನ ಅಸೀನರಾಗಿದ್ದ ಸ್ಥಳಕ್ಕೆ ಬಂದು ಗಿರಿಧರ್‌ ನಾಯ್ಕ ಅವರಲ್ಲಿ ಸಭೆಯಿಂದ ಹೊರಹೋಗಲು ಮನವಿ ಮಾಡಿಕೊಂಡರು. ಈ ನಡುವೆ ಪೋಲಿಸರು ಸಭೆಗೆ ಬಂದು ಸಭೆಯನ್ನು ನಿಯಂತ್ರಣ ಮಾಡಿದರು. ಪೋಲಿಸರ ನಡೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಸಭೆಯಿಂದ ಹೊರ ಗ್ರಾಮದವರನ್ನು ಹೊರಗೆ ಕಳುಹಿಸಲು ಒತಾಯಿಸಿದರು. ಅನಂತರ ಸಭೆಯಿಂದ ಇತರರು ಹೊರನಡೆದ ಬಳಿಕ ಸಭೆ ಶಾಂತವಾಗಿ ಮುಂದುವರಿಯಿತು. 

ದಲಿತ ಮುಖಂಡರು ಒತ್ತಾಯಿಸಿದ ಮಾಡನ್ನೂರು- ಅಂಕೋತ್ತಿಮಾರ್‌ ರಸ್ತೆ ಅಭಿವೃದ್ಧಿಗೆ ಪಂಚಾಯತ್‌ನಿಂದ ಮೀಸಲು ಇಟ್ಟ ಸುಮಾರು 1 ಲಕ್ಷ ರೂ. ಅನುದಾನದ ಕಾಮಗಾರಿ ಶೀಘ್ರ ನಡೆಸಿಕೊಡುವ ಭರವಸೆಯನ್ನು ವಾರ್ಡ್‌ ಸದಸ್ಯ ದಿವ್ಯನಾಥ ಶೆಟ್ಟಿ ನೀಡಿದಾಗ ಚರ್ಚೆ ಕೊನೆಯಾಯಿತು.

ಬೇರೆ ಶಾಲೆಗೆ ದಾಖಲಾತಿ
ಗ್ರಾಮದ ಶಾಲೆಯೊಂದರಲ್ಲಿ ಇತರ ಶಾಲೆಗಳ ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ. ಈ ಮಕ್ಕಳು ನಮ್ಮ ಶಾಲೆಯಿಂದ ಟಿ.ಸಿ.ಯನ್ನು ಪಡೆದಿಲ್ಲ. ಜತೆಗೆ ದಾಖಲಾತಿ ಶುಲ್ಕವನ್ನು ಬಾಕಿ ಇರಿಸಿಕೊಂಡಿದ್ದಾರೆ. ಇವರನ್ನು ಹೇಗೆ ಬೇರೆ ಶಾಲೆಗೆ ಸೇರಿಸಲಾಗುತ್ತಿದೆ ಎಂದು ಅಬ್ದುಲ್‌ ಅಝೀಜ್‌ ಬುಶ್ರಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿ ಶಿಕ್ಷಣ ಇಲಾಖೆ ಅಧಿಧಿಕಾರಿ, ಮಕ್ಕಳ ಹೆತ್ತವರು ದಾಖಲಾತಿಗೆ ಮನವಿ ಮಾಡಿದರೆ ಮಕ್ಕಳನ್ನು ದಾಖಲು ಮಾಡಬಹುದು. ವಿದ್ಯಾರ್ಥಿ ಈ ಹಿಂದೆ ವ್ಯಾಸಂಗ ಮಾಡುತ್ತಿದ್ದ ಶಾಲೆಯಿಂದ ಟಿ.ಸಿಗೆ ಅರ್ಜಿ ಪಡೆಯಲು ಪತ್ರ ಮೂಲಕ ಕೇಳಿಕೊಳ್ಳಬಹುದು ಎಂದರು.

ವಿವಿಧ ಚರ್ಚೆಯಲ್ಲಿ ಪ್ರಮುಖರಾದ ಸಾರ್ಥಕ್‌ ರೈ ಅರಿಯಡ್ಕ, ಲೋಹಿತ್‌ ಅಮಿcನಡ್ಕ ಮತ್ತಿತರರು ಪಾಲ್ಗೊಂಡರು.
ಮಾಟ್ನೂರು ಕೊಳ್ತಿಗೆ ತಾ.ಪಂ. ಸದಸ್ಯರಾದ ರಾಮ ಪಂಬಾರು, ಸದಸ್ಯರಾದ ಸಂತೋಷ್‌ ಕುಮಾರ್‌ ಕೆ, ಸದಾನಂದ ಮಣಿಯಾಣಿ, ಸಾವಿತ್ರಿ ಎಂ.ಬಿ., ಅಮೃತಾ, ರಾಜೇಶ್‌, ಸುಂದರ, ಪ್ರೇಮಲತಾ, ಹೇಮಾವತಿ, ಚಿತ್ರಾ ಎನ್‌. ನಾಯ್ಕ, ನಿರ್ಮಲಾ ಎಸ್‌., ಹೊನ್ನಪ್ಪ ಪೂಜಾರಿ, ಲೋಹಿತ್‌ ಪೂಜಾರಿ, ಸೀತಾರಾಮ ಮೇಲ್ಪಾದೆ, ಎ. ದಿವ್ಯನಾಥ ಶೆಟ್ಟಿ, ರವೀಂದ್ರ ಪೂಜಾರಿ, ಮಹಾಲಿಂಗ ನಾಯ್ಕ, ನವೀನ ಬಿ.ಡಿ., ಸರೋಜಿನಿ, ಸಲ್ಮಾ, ಸಹನಾ ನಳಿನಾಕ್ಷಿ ಮತ್ತು ವಿವಿಧ ಇಲಾಖೆಯ ಅಧಿಧಿಕಾರಿಗಳು ಹಾಜರಿದ್ದರು. ಪಿಡಿಒ ಜಯಪ್ರಕಾಶ್‌ ವಿವಿಧ ಮಾಹಿತಿ ನೀಡಿದರು. ತಿಲಕ್‌ ರೈ ಕುತ್ಯಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

1.5 ಲಕ್ಷ ರೂ. ಅನುದಾನ
ನೆಟ್ಟಣಿಗೆಮೂಟ್ನೂರು ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪಯಂದೂರು ರಸ್ತೆ ಅಭಿವೃದ್ಧಿಗೆ ಜಿ.ಪಂ.ನಿಂದ 1.5 ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದರು. ಉತ್ತರಕ್ಕೆ ಮಹಿಳೆಯರು ಸಂತಸ ವ್ಯಕ್ತಪಡಿಸಿ ಚರ್ಚೆ ಕೊನೆಗೊಳಿಸಿದರು.

ಟಾಪ್ ನ್ಯೂಸ್

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.