ಭೂಸೇನೆ ಸುಭೇದಾರ್ ರವಿಚಂದ್ರ ಕೆ. ಮಾರ್ಕಾಜೆ ಇಂದು ಸೇವಾ ನಿವೃತ್ತಿ
Team Udayavani, Jul 31, 2017, 8:00 AM IST
ಮಾರ್ಕಾಜೆ : ಭಾರತೀಯ ಭೂಸೇನೆಯಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾçಮಣ ಗ್ರಾಮದ ಮಾರ್ಕಾಜೆ ನಿವಾಸಿ ರವಿಚಂದ್ರ ಕೆ. ಅವರು ಜು. 31ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.
1989ರ ಜುಲೈ ತಿಂಗಳಿನಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡ ಅವರು ಆರಂಭದಲ್ಲಿ ಭೂಸೇನೆಯ 10ನೇ ಮದ್ರಾಸ್ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅರುಣಾಚಲ ಪ್ರದೇಶ, ಜೈಪುರ, ಪಂಜಾಬ್, ಜಮ್ಮು ಕಾಶ್ಮಿರ, ನವದೆಹಲಿ, ಹೆದರಾಬಾದ್ ಸೇರಿದಂತೆ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ದೇಶದ ರಕ್ಷಣೆಗೆ ಸಲ್ಲಿಸಿದ ಸೇವೆ ಅವರ ಸೇವಾವಧಿಯಲ್ಲಿ ಅತ್ಯಂತ ಮಹತ್ವದ ಘಟನೆಯಾಗಿದೆ. ಭೂ ಸೇನೆಯಲ್ಲಿ ಮಾತ್ರವಲ್ಲದೇ ಸುಮಾರು 4 ವರ್ಷ ಸ್ಪೆಷಲ್ ಆ್ಯಕ್ಷನ್ ಗ್ರೂಪ್ (ಕ್ಷಿಪ್ರ ಕಾರ್ಯಪಡೆ)ನ ಬ್ಲಾÂಕ್ ಕ್ಯಾಟ್ ಕಾಮಾಂಡೋದಲ್ಲಿ ಅಸಿಸ್ಟಂಟ್ ಕಮಾಂಡೋ ಆಗಿ ತುಂಬಾ ಕ್ಲಿಷ್ಟಕರ ಕರ್ತವ್ಯವನ್ನೂ ನಿರ್ವಹಿಸಿದ ಹೆಗ್ಗಳಿಕೆ ಅವರದು.
ಭೂಸೇನೆಯಲ್ಲಿ ಸುಭೇದಾರ್ ಆಗಿ ಪದೋನ್ನತಿ ಪಡೆದು ಅರುಣಾಚಲಪ್ರದೇಶದಿಂದ ವರ್ಗಾವಣೆಗೊಂಡು ಪ್ರಸ್ತುತ ಊಟಿಯಲ್ಲಿ ಕಥವ್ಯ ನಿರ್ವಹಿಸುತ್ತಿರುವ ರವಿಚಂದ್ರ ಅವರು ಬೆಳಂದೂರು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಾಣಿಯೂರು ಪ.ಪೂ. ಕಾಲೇಜಿನಲ್ಲಿ ಪ್ರೌಢ ಹಾಗೂ ಪ.ಪೂ. ಶಿಕ್ಷಣವನ್ನು ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.