ಸೇನೆ ಸೇರ್ಪಡೆ ಪೂರ್ವ ತರಬೇತಿ ರದ್ದು
Team Udayavani, Jul 30, 2018, 12:17 PM IST
ಸುಳ್ಯ: ಭಾರತೀಯ ಸೇನೆ ಪಡೆಗೆ ಸೇರಲು ಅವಕಾಶ ಎಂದು ಪ್ರಚಾರ ನಡೆಸಿ ಪೂರ್ವ ನೇಮಕಾತಿ ತರಬೇತಿ ಆಯ್ಕೆ ಶಿಬಿರ ಹಮ್ಮಿಕೊಂಡಿದ್ದ ಎನ್‌ಎಪಿಟಿ ಸಂಸ್ಥೆಯ ಕಾರ್ಯಕ್ರಮದ ಬಗ್ಗೆ ಅಭ್ಯರ್ಥಿಗಳಿಗೆ ಅನುಮಾನ, ಗೊಂದಲ ಮೂಡಿ, ಕೊನೆಗೆ ಪೊಲೀಸರ ಮಧ್ಯಪ್ರವೇಶದಿಂದ ಶಿಬಿರ ಸ್ಥಗಿತಗೊಂಡ ಘಟನೆ ರವಿವಾರ ನಡೆದಿದೆ.
ನಗರದ ಖಾಸಗಿ ಸಭಾಭವನವೊಂದರಲ್ಲಿ ಹಮ್ಮಿಕೊಂಡ ಮಾಹಿತಿ ಮತ್ತು ತರಬೇತಿ ಶಿಬಿರ ಸೇನಾ ವತಿಯಿಂದಲೇ ನಡೆಸಲ್ಪಡುತ್ತಿದೆ ಎಂದು ಭಾವಿಸಿ 700ಕ್ಕೂ ಅಧಿಕ ಮಂದಿ ರವಿವಾರ ಬೆಳಗ್ಗೆ ಆಗಮಿಸಿದ್ದರು. ಆದರೆ ಸಂಘಟಕರು ಮಿಲಿಟರಿಯವರು ಅಲ್ಲ ಅನ್ನುವ ಮಾಹಿತಿ ದೊರೆತು, ಪರಿಚಿತರಿಗೆ ವಿಷಯ ನೀಡಿದರು. ಜತೆಗೆ ಶುಲ್ಕದ
ಬಗ್ಗೆಯು ಸಂಘಟಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಿರತ 200 ಕ್ಕೂ ಅಧಿಕ ಮಂದಿಯನ್ನು ಹಾಗೂ ಉಳಿದವರು ಸ್ಥಳದಿಂದ ಮರಳಿ ಕಳುಹಿಸಿದರು. ಸ್ಥಳೀಯಾಡಳಿತದ ಅನುಮತಿ ಇಲ್ಲದೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡದೆ ಶಿಬಿರ ಆಯೋಜಿಸಿದ ಸಂಘಟಕರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು. ಬಳಿಕ ಠಾಣೆಗೆ ಕರೆಯಿಸಿ ಮುಚ್ಚಳಿಕೆ ಪಡೆದು, ಅನುಮತಿ ಇಲ್ಲದೆ ಶಿಬಿರ ಹಮ್ಮಿಕೊಳ್ಳಬಾರದು ಎಂದು ಸೂಚನೆ ನೀಡಿರುವುದಾಗಿ ಮಾಹಿತಿ ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.