ಉಳ್ಳಾಲ ಅಕ್ರಮ ಗೋ ಸಾಗಾಟ ನಾಲ್ವರ ಬಂಧನ
Team Udayavani, Jul 22, 2019, 9:39 PM IST
ಉಳ್ಳಾಲ: ಲಾರಿಯಲ್ಲಿ ಅಕ್ರಮವಾಗಿ ಕೇರಳ ಕಡೆಗೆ ಜಾನುವಾರು ಸಾಗಾಟ ಮಾಡುತಿದ್ದ ನಾಲ್ವರ ತಂಡವನ್ನು ಉಳ್ಳಾಲ ಪೊಲೀಸರು ಲಾರಿ ಸಮೇತ ತಲಪಾಡಿ ಟೋಲ್ಗೇಟ್ ಬಳಿ ಬಂಧಿಸಿದ್ದಾರೆ.
ಬಂಧಿತರನ್ನು ಅಸ್ಸಾಂ ಮೂಲದ ರೂಪೇಯ್ ಮಾರ್ಡಿ, ಸುಮ್ಜಿತ್, ದಶರಥ್ ಹಾಗೂ ಜಾನ್ ಎಂಬವರಾಗಿದ್ದು, ನೆಲ್ಯಾಡಿ ನಿವಾಸಿ ಸೆಬಾಸ್ತಿಯನ್ ಎಂಬಾತ ಜಾನುವಾರುಗಳನ್ನು ಲಾರಿಯಲ್ಲಿ ಲೋಡ್‍ಗೊಳಿಸಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ. ತಲಪಾಡಿ ಟೋಲ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಕೇರಳ ನೋಂದಾಯಿತ ಈಚರ್ ಲಾರಿಯಲ್ಲಿ ಎಮ್ಮೆ ಮತ್ತು ಕೋಣಗಳು ಒಟ್ಟು 10 ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸಲಾಗುತಿತ್ತು. ಯಾವುದೇ ಪರವಾನಿಗೆಯಿಲ್ಲದೆ ಕಳವು ನಡೆಸಿದ ಜಾನುವಾರುಗಳನ್ನು ಕೇರಳಕ್ಕೆ ಸಾಗಾಟ ನಡೆಸುತಿತ್ತು.
ವಶಪಡಿಸಿಕೊಂಡ 10 ಜಾನುವಾರುಗಳನ್ನು ಪಜೀರು ಗೋವನಿತಾಶ್ರಯ ವಶಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಇನ್ಸ್‍ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಎಎಸ್ಐ ರಾಧಾಕೃಷ್ಣ , ಪರಮೇಶ್ವರ್ ಹಾಗೂ ತಲಪಾಡಿ ಚೆಕ್ ಪೋಸ್ಟ್ ನಲ್ಲಿದ್ದ ಸಿಬ್ಬಂದಿ ರವೀಂದ್ರ ಹಾಗೂ ಹೋಂ ಗಾರ್ಡ್ ರಹಿಮಾನ್ ಭಾಗವಹಿಸಿದ್ದರು.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.