ಕುಖ್ಯಾತ ವಾರಂಟ್ ಆರೋಪಿ ಬಂಧನ
Team Udayavani, Mar 30, 2019, 6:04 AM IST
ಉಪ್ಪಿನಂಗಡಿ: ವಂಚನೆ ಸಹಿತ ರಾಜ್ಯದ ಹಲವು ಠಾಣೆಗಳಲ್ಲಿ ದಾಖಲಾಗಿರುವ ಸುಮಾರು 40ರಿಂದ 50 ಪ್ರಕರಣಗಳಿಗೆ ಸಂಬಂಧಿಸಿ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಪೆರಿಯಡ್ಕದ ಮಾನ್ಯ ಗಾರ್ಡನ್‌ನ ಕೆ.ಎನ್. ನಾಗೇಗೌಡ(50)ನನ್ನು ಉಪ್ಪಿನಂಗಡಿ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ.
ಈತನ ವಿರುದ್ಧ ಸುಳ್ಯ ನ್ಯಾಯಾಲಯದಿಂದ 1, ಪುತ್ತೂರು ನ್ಯಾಯಾಲಯದಿಂದ 4, ಹಾಸನದಿಂದ 2, ಶಿವಮೊಗ್ಗದಿಂದ 2 ವಾರಂಟ್‌ಗಳಿವೆ. ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ, ಯಲ್ಲಾಪುರ, ಗದಗ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಿವೆ. ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ಸಿವಿಲ್ ಪ್ರಕರಣಗಳಿವೆ.
ಚೆನ್ನರಾಯಪಟ್ಟಣ ಠಾಣೆಯಲ್ಲಿ ಮಾನಭಂಗ ಯತ್ನ ಪ್ರಕರಣ ದಾಖಲಾಗಿದೆ. ಈತ ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಯೆಲೆಯೂರು ಗ್ರಾಮದವನು. 15 ವರ್ಷಗಳ ಹಿಂದೆ ಪೆರಿಯಡ್ಕದಲ್ಲಿ ಜಾಗ ಖರೀದಿಸಿ ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದ.ಪೆರಿಯಡ್ಕದಲ್ಲಿ 2013ರಲ್ಲಿ ಟ್ರಸ್ಟ್ ತೆರೆಯಲು ಸರಕಾರದಿಂದ ಅನುಮತಿ ಪಡೆದು ವೃದ್ಧಾಶ್ರಮವನ್ನು ನಡೆಸುವ ಬಗ್ಗೆ ಮಾನ್ಯ ಮಲ್ಟಿ ಪರ್ಪಸ್ ಡೆವಲಪ್ ಮೆಂಟ್ ಸರ್ವಿಸ್ ಟ್ರಸ್ಟ್ ಆರಂಭಿಸಿದ್ದ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.