ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿ ನಿಂತ ಕಲೆ
Team Udayavani, Mar 1, 2018, 5:14 PM IST
ಸುರತ್ಕಲ್ : ಶುಭ್ರ ಆಕಾಶ, ಅಲ್ಲಿ ಹಾರಾಡುತ್ತಿರುವ ಪಕ್ಷಿಗಳು, ಕೆಳ ಭಾಗದಲ್ಲಿ ಸಸಿಗಳನ್ನು ಪೋಷಿಸುತ್ತಿರುವ ಮಕ್ಕಳು, ಸುತ್ತಲೂ ಕಸ ಕಡ್ಡಿಗಳನ್ನು ಗುಡಿಸಿ ಸ್ವಚ್ಛತೆ ಕಾಪಾಡುವ ಜನರು. ಇದು ನೈಜ ಚಿತ್ರಣ ಅಲ್ಲ ಬದಲಾಗಿ ಸ್ವಚ್ಛತೆ, ಪರಿಸರದ ಕುರಿತು ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿ ನಿಂತ ಕಲೆ.
ಸುರತ್ಕಲ್ ಫ್ಲೈ ಓವರ್ ತಳ ಭಾಗದ ಕೊನೆಯ ಸ್ಲ್ಯಾಬ್ ಗಳನ್ನು ಸ್ವಚ್ಛಗೊಳಿಸಿ, ವಿದ್ಯಾರ್ಥಿಗಳು ಸುಂದರ ಚಿತ್ರ ಬಿಡಿಸಿ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಸುಂದರೀಕರಣದಲ್ಲಿ ಭಾಗಿಯಾದ ಮಕ್ಕಳು ತೈಲವರ್ಣದ ಚಿತ್ರ ಬಿಡಿಸಿದರೆ ಕಲಾ ಶಿಕ್ಷಕರಾದ ಸುಹಾನ್ ನಾನಿಲ್, ಲಾವಣ್ಯ ಅವರು ಮಾರ್ಗದರ್ಶನ ನೀಡಿದರು.
ಸುರತ್ಕಲ್ ಸ್ಲ್ಯಾಬ್ ಉದ್ದಕ್ಕೂ ಇಂತಹ ಬಣ್ಣ ಬಣ್ಣದ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತಿದೆ. ಪ್ರತೀ ವರ್ಣ ಚಿತ್ರಗಳು ಸ್ವಚ್ಛತೆ, ಪಾರಂಪರಿಕ ಆಚರಣೆ, ಕಲೆಗಳನ್ನು ಬಿಂಬಿಸುತ್ತಿವೆ.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
ಚಿತ್ರ ಬಿಡಿಸುವಲ್ಲಿ ಸಂಭ್ರಮಿಸಿದ ಮಕ್ಕಳು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರಲ್ಲದೆ, ಅವರು ಕಲಿಯುತ್ತಿರುವ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವರ್ಗದಿಂದ ಪ್ರೋತ್ಸಾಹವೂ ಲಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.