ಮುಖ್ಯ ವಾಹಿನಿಯಲ್ಲಿ ಕಲಾತ್ಮಕ ಸಿನೆಮಾ: ಸುಕ್ತಾನ್‌ಕರ್‌

Team Udayavani, Apr 26, 2017, 11:12 AM IST

2404mlr26.jpg

ಮಂಗಳೂರು: ಹಿಂದಿನ ದಿನಗಳಲ್ಲಿ ಕಲಾತ್ಮಕ ಚಿತ್ರಗಳು ಕೇವಲ ಪರ್ಯಾಯ ಸಿನೆಮಾಗಳೆಂಬ ಮನ್ನಣೆಗೆ ಪಾತ್ರವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕಲಾತ್ಮಕ ಸಿನೆಮಾಗಳೇ ಮುಖ್ಯ ವಾಹಿನಿಯ ಸಿನೆಮಾಗಳ ಜತೆ ಸಾಗುತ್ತಿರುವುದು ಮಹತ್ವದ ಬೆಳವಣಿಗೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮರಾಠಿ ಸಿನೆಮಾ ನಿರ್ದೇಶಕ ಸುನೀಲ್‌ ಸುಕ್ತಾನ್‌ಕರ್‌ ಅವರು ಹೇಳಿದರು.

ಮಂಗಳೂರಿನ ಭಾರತ್‌ ಮಾಲ್‌ನ ಭಾರತ್‌ ಸಿನೆಮಾಸ್‌ ಚಿತ್ರ ಮಂದಿರದಲ್ಲಿ ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದಿಂದ ಆಯೋಜಿಸಲಾದ 4 ದಿನಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತೀಯ ಸಿನೆಮಾಗೆ ಗೌರವ
ಮನೋರಂಜನ ಸಿನೆಮಾಗಳಿಗೆ ಸರಿಸಾಟಿಧಿಯಾಗಿ ಕಲಾತ್ಮಕ ಚಿತ್ರಗಳೂ ಬೆಳೆಯುತ್ತಿವೆ. ಚಲನಚಿತ್ರೋತ್ಸವದಿಂದ ಕಲಾತ್ಮಕ ಸಿನೆಮಾಗಳಿಗೆ ಪ್ರೋತ್ಸಾಹ ದೊರಕಿದಂತಾಗಿದೆ. ಪ್ರೇಕ್ಷಕರಿಗೂ ಉತ್ತಮ ಚಿತ್ರ ವೀಕ್ಷಿಸಲು ಸಾಧ್ಯವಾಗುತ್ತಿದೆ ಜಗತ್ತಿನ ಸಿನೆಮಾ ರಂಗದಲ್ಲಿ ಭಾರತೀಯ ಸಿನೆಮಾಗಳಿಗೆ ಈಗ ಹೆಚ್ಚಿನ ಗೌರವ ಲಭ್ಯವಾಗುತ್ತಿದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯಸಿನೆಮಾಗಳು ಪ್ರದರ್ಶನ ಕಾಣು ತ್ತಿರುವುದು ಇದಕ್ಕೆ ಉದಾಹರಣೆ ಎಂದು ಅವರು ಹೇಳಿದರು.

ನಾನು ಕ್ಲಾಪ್‌ ಬಾಯ್‌ ಆಗಿ ಸಿನೆಮಾ ಕ್ಷೇತ್ರ ಪ್ರವೇಶಿಸಿದ್ದೆ. ಈಗ “ಕಾಸವ್‌’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದೇನೆ. ಇಂದಿಗೂ ನನಗೆ ಕ್ಲಾಪ್‌ ಬೋರ್ಡ್‌ ಕುತೂಹಲದ ಸಂಗತಿಯಾಗಿಯೇ ಉಳಿದಿದೆ ಎಂದು ಅವರು ನೆನಪಿಸಿಕೊಂಡರು.

ನಿಟ್ಟೆ ವಿ.ವಿ.ಯ ಹೆಮ್ಮೆ
ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ಮಾತ ನಾಡಿ, ಮಂಗಳೂರು ಹಲವು ಭಾಷೆಯ ಚಿತ್ರರಂಗಗಳಿಗೆ ಕಲಾವಿದರು, ನಿರ್ದೇಶಕರು, ತಂತ್ರಜ್ಞರನ್ನು ಒದಗಿಸಿದ ನೆಲ. ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ, ಸುನೀಲ್‌ ಶೆಟ್ಟಿ ಸೇರಿದಂತೆ ಹಲವು ಜನಪ್ರಿಯ ನಟ, ನಟಿಯರು, ರೋಹಿತ್‌ ಶೆಟ್ಟಿಯಂತಹ ಪ್ರತಿಭಾವಂತ ನಿರ್ದೇಶಕರು ಮಂಗಳೂರಿನಕೊಡುಗೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಿಟ್ಟೆ ವಿವಿ ಆಯೋಜಿಸಿರುವುದು ಸಂತೋಷದ ಸಂಗತಿ ಎಂದರು.

ಖ್ಯಾತ ಚಿತ್ರ ನಿರ್ಮಾಪಕ, ವಿಮರ್ಶಕ ಮನು ಚಕ್ರವರ್ತಿ, ಎನ್‌. ರಾಮಚಂದ್ರನ್‌, ಭಿಜಯ ಜನ, ಗಿರಿದೇವ್‌ ಹಸನ್‌, ಸಜಿನ್‌ ಬಾಬು, ನಿಟ್ಟೆ ವಿ.ವಿ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ| ರವಿರಾಜ್‌ ಮೊದಲಾದವರು ಉಪಸ್ಥಿತರಿದ್ದರು. ವಿಲ್ಮಾ ಸೆರಾವೋ ನಿರೂಪಿಸಿದರು.

5 ದೇಶಗಳ 55 ಸಿನೆಮಾ 
ಭಾರತ್‌ ಸಿನೆಮಾಸ್‌ನಲ್ಲಿ ಎ. 27ರ ವರೆಗೆ 5 ದೇಶಗಳ ಒಟ್ಟು 55 ಸಿನೆಮಾಗಳು ಮತ್ತು ದೇಶದ ಹಲವು ಭಾಷೆಗಳ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಪಿ.ಎನ್‌. ರಾಮಚಂದ್ರ, ಅನಿರುದ್ಧ ರಾಯ್‌ ಚೌಧರಿ, ಬಿಜಯ ಜೇನ, ಪ್ರದೀಪ್ತ ಭಟ್ಟಾ
ಚಾರ್ಯ, ಸಿನೆಮಾ ಕಲಾವಿದರಾದ ಮನೋಹರ್‌ ಶೃಂಗ, ಪ್ರತೀಕ್‌ ಗಾಂಧಿ ಹರಿಸ್ರವ, ಹೇಮಂತ್‌ ಭಾಗವಹಿಸುತ್ತಾರೆ. ಚಿತ್ರ ಪ್ರದರ್ಶನದ ಬಳಿಕ ಸಂವಾದ,ಚಿತ್ರಕಥೆ ಬರವಣಿಗೆ ಕಾರ್ಯಾಗಾರ ಕೂಡ ನಡೆಯುತ್ತದೆ. ಹಿಂದಿ, ತುಳು, ಬಂಗಾಲಿ, ಕನ್ನಡ, ಗುಜರಾತಿ, ಮಲಯಾಳ ಮತ್ತು ವಿದೇಶದ ಕೆಲವು ಚಿತ್ರಗಳ ಪ್ರದರ್ಶನವಿರುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಟಾಪ್ ನ್ಯೂಸ್

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಕಂಬಳಕ್ಕೆ ನೆರವು: ಇಂದು ಸಿಎಂಗೆ ಅಹವಾಲು

Mangaluru ಕಂಬಳಕ್ಕೆ ನೆರವು: ಇಂದು ಸಿಎಂಗೆ ಅಹವಾಲು

ವಿಶಿಷ್ಟ ವಿಚಾರ ಚಿಂತನ ಮಂಥನ : ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

ವಿಶಿಷ್ಟ ವಿಚಾರ ಚಿಂತನ ಮಂಥನ: ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Nimma Vasthugalige Neeve Javaabdaararu movie review

Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

5-mudhol

Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.