ಆಷಾಢ ಅತ್ಯಂತ ಶುಭ ತಿಂಗಳು :ವಾಂತಿಚಾಲು

Team Udayavani, Jul 31, 2017, 7:10 AM IST

vantichalu.jpg

ನಗರ : ಸೌಕರ್ಯಗಳು ಇಲ್ಲದಿದ್ದ ಸಮಯದಲ್ಲಿ ಹಲವು ಕಾರಣಗಳಿಗಾಗಿ ಹಿರಿಯರು ಆಷಾಢ ತಿಂಗಳಿನಲ್ಲಿ ಕಾರ್ಯಕ್ರಮಗಳಿಂದ ದೂರವಿದ್ದರು. ಆದರೆ ಆಷಾಢ ತಿಂಗಳು ಅನಿಷ್ಟದ ತಿಂಗಳಲ್ಲ, ಬದಲಾಗಿ ಅತ್ಯಂತ ಶುಭ ತಿಂಗಳು ಎಂದು ಗೋಪಾಲಕೃಷ್ಣ ಕುಲಾಲ್‌ ವಾಂತಿಚಾಲು ಹೇಳಿದರು.

ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಆಶ್ರಯದಲ್ಲಿ ನಗರದ ಟೌನ್‌ಬ್ಯಾಂಕ್‌ ಸಭಾಂಗಣದಲ್ಲಿ ಆಯೋಜಿ ಸಲಾದ ಆಟಿಡೊಂಜಿ ಕೂಟ ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ನಮ್ಮ ಹಿರಿಯರು ಹಾಕಿಕೊಟ್ಟ ವೈಜ್ಞಾನಿಕ, ಧಾರ್ಮಿಕ, ಸಾಮಾಜಿಕ ದಾರಿಯನ್ನು ನಾವು ಎಂದಿಗೂ ಮರೆಯಬಾರದು. ಅದಕ್ಕೆ ಅದರದ್ದೇ ಆದ ಹಿನ್ನೆಲೆ, ಮಹತ್ವ ಇದೆ. ಹಿರಿಯರು ಅಳವಡಿಸಿಕೊಂಡು ಬಂದ ಮೂಲ ನಂಬಿಕೆಗಳನ್ನು ಇಂದು ಮೂಢ ನಂಬಿಕೆ ಎಂದು ಪರಿವರ್ತಿಸುವುದು ಸರಿ ಯಲ್ಲ ಎಂದರು.

ಘಟ್ಟ ಹತ್ತುವುದಿಲ್ಲ
12 ರಾಶಿಗಳಲ್ಲಿ ದೇವರು ಪಥ ಬದ ಲಾಯಿಸುವ ಇಷ್ಟದ ರಾಶಿ ಕರ್ಕಾಟಕ ಆಷಾಢ ಮಾಸದಲ್ಲೇ ಬರುವುದು. ಈ ತಿಂಗಳು ಅಮ್ಮನ ಆರಾಧನೆಯ ತಿಂಗಳು ಎಂಬ ಕಾರಣಕ್ಕೆ ಕಲ್ಲುರ್ಟಿಯ ಆರಾಧನೆ ನಡೆಯುತ್ತಿದೆ. ಕರ್ನಾಟಕ ಸಂಕ್ರಮಣದಲ್ಲಿ ಗುಳಿಗ ದೈವ ಭೂಮಿಗೆ ಬಂದ ಸಮಯ. ಅನೇಕ ಹಬ್ಬಗಳು ಆರಂಭವಾಗುವುದೂ ಆಷಾಢ ಮಾಸದಲ್ಲಿ. ಕೃಷಿಯ ಸಂದರ್ಭದಲ್ಲಿ ಹಿರಿಯರಿಗೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಈ ತಿಂಗಳಲ್ಲಿ ಸಾಧ್ಯವಾಗದೇ ಇರುವುದರಿಂದ, ವಿಪರೀತ ಮಳೆಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗದೇ ಇರು ವುದರಿಂದ ಹಿರಿಯರು ಆಷಾಢ ಮಾಸ ದಲ್ಲಿ ಕಾರ್ಯಕ್ರಮಗಳನ್ನು ಕಡಿಮೆ ಮಾಡುತ್ತಿದ್ದರು. ಹತ್ತನಾವಧಿಯ ಬಳಿಕ ದೈವಗಳು ಘಟ್ಟ ಹತ್ತುತ್ತವೆ ಎನ್ನುವುದು ತಪ್ಪು ಕಲ್ಪನೆ ಎಂದರು.

ತುಳುವಿನ ಆಚರಣೆ ಬೇರೆ
ವರಮಹಾಲಕ್ಷ್ಮೀ ವ್ರತ ಎನ್ನುವುದು ತುಳುನಾಡಿನ ಆಚರಣೆಯೇ ಅಲ್ಲ ಎಂದು ಹೇಳಿದ ಅವರು, ತುಳುನಾಡಿನಲ್ಲಿ ಐಶ್ವರ್ಯ, ಮುತ್ತೈದೆ ಭಾಗ್ಯಕ್ಕಾಗಿ ಕೆಡ್ಡಸದ ಆಚರಣೆಯನ್ನು ಹಿರಿಯರು ಮಾಡಿ ಕೊಂಡು ಬಂದಿದ್ದಾರೆ. ಅಕ್ಷಯ  ತೃತೀಯಾ ಎನ್ನುವುದರ ಬದಲು ಪಗ್ಗು 18 ಶುಭದಿನ ಎಂಬುದನ್ನು ಹಿರಿಯರು ಆಚರಿಸಿಕೊಂಡು ಬಂದಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ತಹಶೀಲ್ದಾರ್‌ ಕುಲಾಲ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಬಿ.ಎಸ್‌. ಕುಲಾಲ್‌, ಇಂದು ಶಿಕ್ಷಣವಿದ್ದರೂ ಧರ್ಮದ ಸೂತ್ರ ಮರೆಯಾಗುತ್ತಿದೆ. ಸಂಘಟನೆಯ ಮೂಲಕ ರಾಜಕೀಯ, ಪ್ರತಿಭಟನೆಯ ಶಕ್ತಿ ಬೆಳೆಸಿಕೊಂಡು ಮುಂಚೂಣಿಗೆ ಬರ ಬೇಕು. ಇದಕ್ಕಾಗಿ ಸಮುದಾಯ ಸಂಘಟ ನಾತ್ಮಕವಾಗಿ ಒಂದಾಗಬೇಕು ಎಂದರು.

ಸಮವಸ್ತ್ರ ವಿತರಣೆ, ಸಮ್ಮಾನ
ಈ ಸಂದರ್ಭ ಸಮುದಾಯ ಸುಮಾರು 36 ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಸಂಘದ ವತಿಯಿಂದ ಶಾಲಾ ಸಮವಸ್ತ್ರ ವಿತರಿಸಲಾಯಿತು. ನವದಂಪತಿಯನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಥಮ ದರ್ಜೆ ಸಹಾಯಕಿ ಗಿರಿಜಾ ಧರ್ಣಪ್ಪ ಶುಭಹಾರೈಸಿದರು. ಹಿರಿ ಯರಾದ ಬಿ.ಎಸ್‌. ಕುಲಾಲ್‌ ಹಾಗೂ ಶೀನಪ್ಪ ಕುಲಾಲ್‌ ಚೆನ್ನೆಮಣೆ ಆಡುವ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಕರ್ಣಾಟಕ ಬ್ಯಾಂಕ್‌ ಕಬಕ ಶಾಖೆಯ ಪ್ರಬಂಧಕ ಅಶೋಕ್‌ ಮೂಲ್ಯ ಬ್ಯಾಂಕ್‌ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಉದ್ಯಮಿ ಯು. ರಾಮ ಉಪ್ಪಿನಂಗಡಿ, ಮಹಿಳಾ ಘಟಕದ ಅಧ್ಯಕ್ಷೆ ರತ್ನಾಕೃಷ್ಣಪ್ಪ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ ಉಪಸ್ಥಿತರಿದ್ದರು.
ನಿವೃತ್ತ ಅರಣ್ಯಾಧಿಕಾರಿ ಕೃಷ್ಣಪ್ಪ ಪ್ರಾಸ್ತಾ ವಿಸಿದ ರು. ಸೇವಾ ಸಂಘದ ಕಾರ್ಯದರ್ಶಿ ಮಹೇಶ್‌ ಕೆ. ಸವಣೂರು ಸ್ವಾಗತಿಸಿದರು. ಕೋಶಾಧಿಕಾರಿ ಪಿ. ಧರ್ಣಪ್ಪ ಮೂಲ್ಯ ನೆಹರೂನಗರ ವಂದಿ ಸಿದರು. ಕೃಷ್ಣ ಎಂ. ಅಳಿಕೆ ಅವರು ಕಾರ್ಯ ಕ್ರಮ ನಿರ್ವಹಿಸಿದರು. 

ಸಮುದಾಯದ ವಿವಿಧ ಮನೆಗಳಲ್ಲಿ ತಯಾರಿಸಿ ತಂದ 35 ಬಗೆಯ ಆಟಿ ತಿಣಿಸು ಗಳ ಸಹಭೋಜನ ಕಾರ್ಯಕ್ರಮದ ವಿಶೇಷತೆಯಾಗಿತ್ತು.  ಸ್ವಜಾತಿ ಬಾಂಧವರಿಗೆ ವಿವಿಧ ಸ್ಪರ್ಧೆಗಳನ್ನು ಈ ಸಂದರ್ಭ ಆಯೋಜಿಸಲಾಯಿತು.

ಟಾಪ್ ನ್ಯೂಸ್

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ

ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್‌ ಧನ್‌ಕರ್‌

ಜನಾಭಿಪ್ರಾಯಕ್ಕೆ ಬೆಲೆ ಕೊಡದಿದ್ದರೆ ಪ್ರಜಾಪ್ರಭುತ್ವ ಉಳಿಯದು: ಜಗದೀಪ್‌ ಧನ್‌ಕರ್‌

Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

2

Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್‌  ಸೇವೆ

1

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Eshwar–forest

Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ

Congress-Symbol

Commission: 60 ಪರ್ಸೆಂಟ್‌ ಕಮಿಷನ್‌: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.