Puttur: ಧರ್ಮ ಮಾರ್ಗದಲ್ಲಿ ಋಣ ತೀರಿಸುವ ಅಶೋಕ್ ರೈ: ಡಿಸಿಎಂ
ಶಾಸಕ ಅಶೋಕ್ ರೈಯಿಂದ 85 ಸಾವಿರಕ್ಕೂ ಅಧಿಕ ಮಂದಿಗೆ ವಸ್ತ್ರದಾನ ; ಹೊಸ ದಾಖಲೆ
Team Udayavani, Nov 3, 2024, 11:44 PM IST
ಪುತ್ತೂರು: ಹನ್ನೆರಡು ವರ್ಷಗಳಿಂದ ದೀಪಾವಳಿ ಹಬ್ಬದ ದಿನ ಜಾತಿ, ಮತ, ಧರ್ಮದ ಭೇದವಿಲ್ಲದೆ ಸರ್ವ ಜನರೊಂದಿಗೆ ಬೆರೆತು ಧರ್ಮ ಮಾರ್ಗದ ಮೂಲಕ ಜನರ ಋಣ ತೀರಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಮತ್ತು ಅವರ ಕುಟುಂಬದ ಕಾರ್ಯ ಇಡೀ ಸಮಾಜಕ್ಕೆ ಆದರ್ಶಪ್ರಾಯವಾದುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಪುತ್ತೂರು ರೈ ಎಸ್ಟೇಟ್ಸ್ ಎಜುಕೇಶನ್ ಹಾಗೂ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನ.2ರಂದು ಜರಗಿದ 12ನೇ ವರ್ಷದ ವಸ್ತ್ರದಾನ, ಸಹಭೋಜನ ಹಾಗೂ ದೀಪಾವಳಿ ಗೂಡುದೀಪ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ವರ್ಷ 1 ಲಕ್ಷ
ಟ್ರಸ್ಟ್ ಪ್ರವರ್ತಕ, ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಇದು ಪಕ್ಷಾತೀತ, ಜಾತಿ, ಧರ್ಮ ಮೀರಿದ ಕಾರ್ಯಕ್ರಮ. ಟ್ರಸ್ಟ್ ಮೂಲಕ 24 ಸಾವಿರ ಕುಟುಂಬಗಳಿಗೆ ವಿವಿಧ ರೀತಿಯ ನೆರವು ನೀಡಿದ್ದು, ಆ ಕುಟುಂಬಸ್ಥರಿಗೆ ಒಂದು ಕಾರ್ಡ್ ಹಾಕಿ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತೇವೆ. ಅವರು ಪ್ರೀತಿಯಿಂದ ಬರುತ್ತಾರೆ. ಈ ವರ್ಷ 85 ಸಾವಿರ ಜನರಿಗೆ ವಸ್ತ್ರದಾನ ಮಾಡಿದ್ದು, ಮುಂದಿನ ವರ್ಷ 1 ಲಕ್ಷ ಜನರಿಗೆ ವಸ್ತ್ರದಾನ ಮಾಡುವ ಗುರಿ ಹೊಂದಿದ್ದೇನೆ ಎಂದರು.
ಶಾಸಕನಾಗಿ ಆಯ್ಕೆಯಾದರೆ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವೆ ಎಂದಿದ್ದೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಅಕ್ರಮ ಸಕ್ರಮ, ಕ್ಷೇತ್ರದಲ್ಲಿ 94ಸಿ-94ಸಿಸಿಗೆ ಸಂಬಂಧಿಸಿದ 5 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿ 1 ಸಾವಿರ ಕೋ.ರೂ. ಅನುದಾನಕ್ಕೆ ಟೆಂಡರ್ ಆಗಿದ್ದು, 400 ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಉದ್ಯೋಗ ಸೃಷ್ಟಿಗೆ ಕೆಎಂಎಫ್ ಘಟಕ ತೆರೆಯಲು ಸಿದ್ಧತೆ ನಡೆದಿದೆ.
ಗ್ರಾ. ಪಂ. ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಲು 50 ಎಕ್ರೆ ಜಾಗ ಗುರುತಿಸಲಾಗಿದೆ. ತಾಲೂಕು ಕ್ರೀಡಾಂಗಣಕ್ಕೆ 20 ಎಕ್ರೆ ಜಾಗ ಗುರುತಿಸಿದ್ದು 8 ಕೋ.ರೂ. ಅನುದಾನ ಬಿಡುಗಡೆಯಾಗಲಿದೆ ಎಂದರು.
ಮಾಯಿದೇವುಸ್ ಚರ್ಚ್ ಧರ್ಮಗುರು ಫಾ| ಲಾರೆನ್ಸ್ ಮಸ್ಕರೇನ್ಹಸ್, ಧಾರ್ಮಿಕ ಮುಖಂಡ ಎಸ್.ಬಿ.ದಾರಿಮಿ ಶುಭ ಹಾರೈಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಪದ್ಮರಾಜ್ ಆರ್ ಪೂಜಾರಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ಮುಖಂಡರಾದ ಇನಾಯತ್ ಆಲಿ, ರಕ್ಷಿತ್ ಶಿವರಾಂ, ಕೃಷ್ಣಪ್ಪ ಸುಳ್ಯ, ಭರತ್ ಮುಂಡೋಡಿ, ಸದಾಶಿವ ಉಳ್ಳಾಲ್, ಹೇಮನಾಥ ಶೆಟ್ಟಿ ಕಾವು, ಎಂ.ಎಸ್.ಮಹಮ್ಮದ್, ಡಾ| ರಘು, ರೈ ಎಸ್ಟೇಟ್ಸ್‌ನ ಗಿರಿಜಾ ರೈ, ಸುಮಾ ಅಶೋಕ್ ರೈ ಮೊದಲಾದವರು ಉಪಸ್ಥಿತರಿದ್ದರು.
ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟ್ರಸ್ಟ್ ಕಾರ್ಯಾಧ್ಯಕ್ಷ ಸುಧೇಶ್ ಶೆಟ್ಟಿ ಸ್ವಾಗತಿಸಿ, ಬಾಲಕೃಷ್ಣ ರೈ ಪೊರ್ದಾಲ್, ಹೇಮಾ ನಿರೂಪಿಸಿದರು.
26 ಮಂದಿಗೆ ಸಮ್ಮಾನ
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ವಿವಿಧ ಕ್ಷೇತ್ರಗಳ 20 ಸಾಧಕರನ್ನು ಸಮ್ಮಾನಿಸಲಾಯಿತು.
85 ಸಾವಿರ ಮಂದಿಗೆ ವಸ್ತ್ರದಾನ
ಬೆಳಗ್ಗಿನಿಂದ ಸಂಜೆ ತನಕ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸಹಿತ 85 ಸಾವಿರಕ್ಕೂ ಅಧಿಕ ಮಂದಿಗೆ ವಸ್ತ್ರದಾನ ನಡೆಯಿತು. ಸಮಾವೇಶದಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ಭೋಜನ ಸ್ವೀಕರಿಸಿದರು.
ಸಿಎಂ ಜತೆ ರೈ ಜಗಳ!
ಅಶೋಕ್ ರೈ ಭಾರೀ ವೇಗದ ಮನುಷ್ಯ. ಕ್ಷೇತ್ರದ ಕೆಲಸಕ್ಕಾಗಿ ಸಿಎಂ ಜತೆಗೆ ಆಗಾಗ ಜಗಳವಾಡುತ್ತಾರೆ. ಎಲ್ಲವನ್ನೂ ಒಮ್ಮೆಲೆ ಮಾಡಬೇಕು ಎನ್ನುವ ಆತುರತೆ ಅವರಲ್ಲಿದೆ. ರೈ ಸ್ವಲ್ಪ ತಾಳ್ಮೆ ವಹಿಸಿ ಎಂದು ಸಲಹೆ ನೀಡಿದ ಡಿಕೆಶಿ, ಒಂದೊಂದು ಕೆಲಸವನ್ನು ಮಾಡುತ್ತಾ ಹೋಗಬೇಕು. ತಾಳ್ಮೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಶಾಸಕರಿಗೆ ಕಿವಿಮಾತು ಹೇಳಿದರು. ಪ್ರಾಸ್ತಾವಿಕ ಭಾಷಣದಲ್ಲಿ ರೈ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿ ನನ್ನನ್ನು ಕರೆದು ಟಿಕೆಟ್ ಕೊಟ್ಟಿದ್ದರು. ನಾನು ಶಾಸಕನಾಗಲು ಕ್ಷೇತ್ರದ ಜನರು, ದೇವರು, ಡಿಕೆಶಿ ಆರ್ಶೀವಾದ ಕಾರಣ ಎಂದು ಉಲ್ಲೇಖೀಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.