ಏಷ್ಯನ್ ತ್ರೋಬಾಲ್: ಭಾರತವನ್ನು ಪ್ರತಿನಿಧಿಸಿ ಗೆದ್ದ ಜಿಲ್ಲೆಯ ಪ್ರತಿಭೆಗಳು
Team Udayavani, Apr 4, 2019, 10:47 AM IST
ಬೆಳ್ತಂಗಡಿ : ಬೆಂಗಳೂರಿನಲ್ಲಿ ನಡೆದ ಏಷ್ಯನ್ ತ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ದ.ಕ. ಜಿಲ್ಲೆಯ ಇಬ್ಬರು ಪ್ರತಿಭೆಗಳು ಬಾಂಗ್ಲಾದೇಶವನ್ನು ಮಣಿಸುವ ಮೂಲಕ ದೇಶಕ್ಕೆ ಅಂತಾರಾಷ್ಟ್ರೀಯ ಟ್ರೋಫಿಯೊಂದನ್ನು ಸಮರ್ಪಿಸಿದ್ದಾರೆ.
ಈ ಪಂದ್ಯಾಟದಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಭಾರತ ತಂಡವನ್ನು ಪ್ರತಿನಿಧಿಸಿ ದ್ದು, ಇಬ್ಬರು ದ.ಕ. ಜಿಲ್ಲೆಯವರಾದರೆ, ಒಬ್ಬರು ಬೆಂಗಳೂರಿನವರಾಗಿದ್ದಾರೆ. ಉಳಿದಂತೆ ತಂಡದಲ್ಲಿ ಕರ್ನಾಟಕದ ಜತೆಗೆ ತಮಿಳುನಾಡು, ಹರಿಯಾಣದವರು ಭಾಗವಹಿಸಿದ್ದರು.
ಆಳ್ವಾಸ್‌ನ ವಿದ್ಯಾರ್ಥಿಗಳಾದ ಪುತ್ತೂರಿನ ಪೂರ್ಣಿಮಾ ಪಿ., ಬಂಟ್ವಾಳದ ಆಶಾ ಪೂಜಾರಿ ಹಾಗೂ ಬೆಂಗಳೂರಿನ ಅನನ್ಯಾ ಭಾಗವಹಿ ಸಿದ್ದರು. ಮಾ. 22ರಿಂದ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ತ್ರೋಬಾಲ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದು, ಮಾ. 28 ಮತ್ತು 29ರಂದು ಪಂದ್ಯಾಟಗಳು ನಡೆದಿದ್ದವು.
ಪೂರ್ಣಿಮಾ ಪಿ.
ಪುತ್ತೂರು ತಾಲೂಕು ಕೌಡಿಚ್ಚಾರ್‌ನ ಪಾಗಲಾಡಿ ಬಾಲಣ್ಣ ಗೌಡ ಹಾಗೂ ಉಮಾವತಿ ದಂಪತಿಯ ಪುತ್ರಿಯಾಗಿರುವ ಪೂರ್ಣಿಮಾ ಪಿ. ಅವರು ಆಳ್ವಾಸ್ ಕಾಲೇಜಿ ನಲ್ಲಿ ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದು, ಪದವಿಯಿಂದಲೇ ಆಳ್ವಾಸ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಪಾಪೆಮಜಲಿನಲ್ಲಿ ಪ್ರೌಢಶಿಕ್ಷಣ ಪಡೆದಿರುವ ಇವರು ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದು, ಇದು ಅವರ ಮೂರನೇ ಅಂತಾರಾಷ್ಟ್ರೀಯ ಪಂದ್ಯಾಟ ವಾಗಿದೆ. ಮುಂದೆ ಅವಕಾಶ ಲಭಿಸಿದರೆ ಇನ್ನಷ್ಟು ಪಂದ್ಯಗಳನ್ನು ಆಡಬೇಕು ಆಸೆ ಇದೆ. ಜತೆಗೆ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ದುಡಿಯಬೇಕು ಎಂಬ ಗುರಿ ಇದೆ ಎನ್ನುತ್ತಾರೆ ಪೂರ್ಣಿಮಾ.
ಆಶಾ
ಬಂಟ್ವಾಳ ತಾ| ಸರಪಾಡಿ ಗ್ರಾಮದ ಕಾಯರಂಬು ರಾಮಣ್ಣ ಪೂಜಾರಿ-ಪುಷ್ಪಾ ದಂಪತಿಯ ಪುತ್ರಿಯಾಗಿರುವ ಆಶಾ ಅವರು ಆಳ್ವಾಸ್ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಣಿನಾಲ್ಕೂರು ಪ.ಪೂ. ಕಾಲೇಜಿನಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪಡೆದಿದ್ದರು. ಇದು ಅವರ ಮೊದಲ ಅಂತಾರಾಷ್ಟ್ರೀಯ ಪಂದ್ಯಾಟವಾಗಿದ್ದು, ದೇಶಕ್ಕಾಗಿ ಆಡಿದ ಹೆಮ್ಮೆಯಿದೆ. ಮನೆಯಲ್ಲಿ ಉತ್ತಮ ಸಹಕಾರ ಲಭಿಸಿರುವುದು ಈ ಸಾಧನೆಗೆ ಸಹಕಾರಿಯಾಗಿದೆ ಎನ್ನುತ್ತಾರೆ ಆಶಾ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.