ಕಲ್ಲಡ್ಕ, ಪುಣಚ ವಿದ್ಯಾ ಕೇಂದ್ರಗಳ ಅನುದಾನ ರದ್ದು
Team Udayavani, Aug 9, 2017, 8:55 AM IST
ಮಂಗಳೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವತಿಯಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾ ಕೇಂದ್ರವನ್ನು ದತ್ತು ತೆಗೆದುಕೊಂಡು 2007ರಿಂದ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಪಡಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ಈಗ ಪರ-ವಿರೋಧ ಚರ್ಚೆಗೆ ಎಡೆಮಾಡಿದೆ.
ಕಳೆದ ಸುಮಾರು ಹತ್ತು ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ವತಿಯಿಂದ ನೀಡುತ್ತಿದ್ದ ಅನುದಾನಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಆದೇಶವನ್ನು ರಾಜ್ಯ ಸರಕಾರವು ಸಂಪೂರ್ಣವಾಗಿ ರದ್ದುಪಡಿಸಿ ಜು. 31ರಂದು ಮರು ಆದೇಶ ಹೊರಡಿಸಿದೆ.
2007ರಲ್ಲಿ ದತ್ತು
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾ ಕೇಂದ್ರ ಪ್ರೌಢ ಶಾಲೆಯನ್ನು 2007ರ ಜೂನ್ 20ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ದತ್ತು ತೆಗೆದುಕೊಂಡಿತ್ತು. ಗಮನಾರ್ಹ ಅಂಶವೆಂದರೆ ಈ ಸಂಸ್ಥೆಗಳು ಆರ್‌ಎಸ್‌ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಸೇರಿವೆ.
ಅಂದು ಹೊರಡಿಸಿದ ಅದೇಶದಂತೆ ಈ ಎರಡು ವಿದ್ಯಾ ಸಂಸ್ಥೆಗಳಿಗೆ ದೇವಾಲಯದ ಅನುದಾನ ನೀಡಲಾಗುತ್ತಿ¤ತ್ತು. 2007-08ರಿಂದ 2016-17ರ ವರೆಗೆ ಎರಡು ವಿದ್ಯಾ ಸಂಸ್ಥೆಗಳಿಗೆ ಒಟ್ಟು 2,83,25,424 ರೂ. ನೆರವು ನೀಡಲಾಗಿದೆ ಎಂದು ದೇವಾ ಲಯದ ಕಾರ್ಯನಿರ್ವಾಹಕ ಅಧಿಕಾರಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು 2002ರ ನಿಯಮದಂತೆ ದೇವಾ ಲಯ ವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದತ್ತು ತೆಗೆದುಕೊಂಡು ನಿರ್ವಹಿಸಲು ಅವಕಾಶ ವಿಲ್ಲ. ಇದರಿಂದ ದೇವಾಲಯಕ್ಕೆ ಆರ್ಥಿಕ ಹೊರೆ ಅಧಿಕ ವಾಗುತ್ತದೆ. ಆದ್ದರಿಂದ ಈ ಎರಡೂ ಶಾಲೆಗಳನ್ನು ದತ್ತು ಆದೇಶವನ್ನು ರದ್ದುಪಡಿಸಲಾಗಿದೆ ಎಂದು ಸರಕಾರದ ಅಧೀನ ಕಾರ್ಯದರ್ಶಿ ಹೊಸದಾಗಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಆದರೆ ರಾಜ್ಯ ಸರಕಾರದ ಈ ತೀರ್ಮಾನಕ್ಕೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರಕಾರವು ಪ್ರಭಾಕರ ಭಟ್ ಮೇಲೆ ರಾಜಕೀಯ ದ್ವೇಷ ಸಾಧಿಸಲು ಈ ರೀತಿಯ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಕಾನೂನಿನಲ್ಲಿ ಅವಕಾಶವಿಲ್ಲ
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮುಜರಾಯಿ ದೇವಸ್ಥಾನಗಳಿಂದ ಅನುದಾನ ನೀಡಲು ಕಾನೂನಿ ನಲ್ಲಿ ಅವಕಾಶವಿಲ್ಲ. ಆದರೆ ಹಿಂದಿನ ಬಿಜೆಪಿ ಸರಕಾರ ಪ್ರಭಾಕರ ಭಟ್ ಅವರ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲು ಸೂಚಿ ಸಿತ್ತು. ಈ ವಿಷಯ ಐದು ತಿಂಗಳ ಹಿಂದೆ ಕೊಲ್ಲೂರಿಗೆ ಭೇಟಿ ನೀಡಿದಾಗ ತಿಳಿದಿತ್ತು. ಅನಂತರ ಈ ಬಗ್ಗೆ ಚರ್ಚಿಸಿ ಅನುದಾನ ಸ್ಥಗಿತಗೊಳಿಸಲು ತೀರ್ಮಾನ ಕೈಗೊಳ್ಳ ಲಾಗಿದೆ. ಇತ್ತೀಚೆಗೆ ದ.ಕ. ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗೂ ಅನುದಾನ ಸ್ಥಗಿತ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ.
-ರುದ್ರಪ್ಪ ಲಮಾಣಿ, ಮುಜರಾಯಿ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.