ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡು ಸ್ವಂತ ಕಟ್ಟಡ ಹೊಂದಿದ ಸಂಘ

ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘ

Team Udayavani, Feb 15, 2020, 5:11 AM IST

1402VTL-KANYANA-HALU

ಸಂಘವು ಇಂದು ದಿನವೊಂದಕ್ಕೆ 500 ಲೀ. ಸಂಗ್ರಹಿಸುತ್ತಿದೆ. ಕೃಷಿಕರ ಪಶುಗಳ ಕೃತಕ ಗರ್ಭಧಾರಣೆಗಾಗಿ ಸೂಕ್ತ ವ್ಯವಸ್ಥೆಯನ್ನು ಮಾಡುತ್ತಲೇ ಬಂದಿದೆ.

ವಿಟ್ಲ: ಕನ್ಯಾನ ಮತ್ತು ಕರೋಪಾಡಿ ಅವಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘವು 1986ರ ಜ. 21ರಂದು ನೋಂದಾಯಿಸಲ್ಪಟ್ಟು, ಫೆ. 10ರಂದು ಕನ್ಯಾನದಲ್ಲಿ ಉದ್ಘಾಟನೆಗೊಂಡಿತು. ಕನ್ಯಾನ ಗ್ರಾಮದ ಹೃದಯ ಭಾಗದ ಬಾಡಿಗೆ ಕಟ್ಟಡದಲ್ಲಿ 7-8 ಮಂದಿ ಸದಸ್ಯರಿದ್ದು, ಸುಮಾರು 10 ಲೀ. ಹಾಲು ಸಂಗ್ರಹದೊಂದಿಗೆ ಪ್ರಾರಂಭವಾಯಿತು. ಕೆಲವು ಸಮಯ ಗಳ ಬಳಿಕ ಕೆಳಗಿನಪೇಟೆಯ ಬಾಡಿಗೆ ಕಟ್ಟಡದಲ್ಲಿ ಹಾಲು ಖರೀದಿ ಆರಂಭವಾಯಿತು. 1993ರಲ್ಲಿ 5 ಸೆಂಟ್ಸ್‌ ಸ್ವಂತ ನಿವೇಶನದಲ್ಲಿ ಸುಮಾರು ಎರಡು ಲಕ್ಷ ರೂ. ವೆಚ್ಚದ ಸ್ವಂತ ಕಟ್ಟಡ ನಿರ್ಮಾಣವಾಯಿತು.

ಬಳಿಕ ಕರೋಪಾಡಿ ಗ್ರಾಮದ ಮಿತ್ತನಡ್ಕ ಮತ್ತು ಕುಡ³ಲ್ತಡ್ಕದಲ್ಲಿ ಎರಡು ಶಾಖೆಗಳನ್ನು ಹೊಂದಿತು. ಆಗ 1,000 ಲೀ. ಹಾಲು ಸಂಗ್ರಹ ವಾಗುತ್ತಿತ್ತು. ಕ್ರಮೇಣ ಕರೋಪಾಡಿ ಗ್ರಾಮದಲ್ಲಿ ಮಹಿಳೆಯರು ಒಟ್ಟಾಗಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘವನ್ನು ಸ್ಥಾಪಿಸಿದ ಬಳಿಕ ಕರೋಪಾಡಿ ಗ್ರಾಮದ ಸದಸ್ಯರಿಂದ ಹಾಲು ಅಲ್ಲೇ ಸಂಗ್ರಹವಾದರೆ, ಈ ಸಂಘವು ಕನ್ಯಾನ ಗ್ರಾಮದ ಸದಸ್ಯರಿಗೇ ಸೇರಿಕೊಂಡಿತು. ಈಗ‌ ದಿನವೊಂದಕ್ಕೆ 500 ಲೀ. ಹಾಲು ಸಂಗ್ರಹವಾಗುತ್ತಿದೆ. ಪ್ರಸ್ತುತ 291 ಸದಸ್ಯರಿದ್ದಾರೆ.

ಸಂಘದ ಕಟ್ಟಡವನ್ನು ವಿಸ್ತರಿಸುತ್ತಲೇ ಬಂದಿದ್ದು, ಕೃಷಿಕರಿಗೆ ಅಡಿಕೆ ವ್ಯಾಪಾರಕ್ಕೆ ಉಪಯುಕ್ತ ವಾಗಲೆಂದು ಒಂದು ಕೊಠಡಿ ಯನ್ನು ನಿರ್ಮಿಸಿ, ಕ್ಯಾಂಪ್ಕೋ ಶಾಖೆ ಕನ್ಯಾನ ದಲ್ಲಿ ತೆರೆಯುವಂತೆ ಮಾಡಿದೆ. ಆರಂಭದಲ್ಲಿ ಇದ್ದ ಒಂದು ಕೊಠಡಿ ಇಂದು ಐದಕ್ಕೇರಿದೆ. ಅದರಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ನೀಡಿದೆ. ಸ್ಥಾಪಕಾಧ್ಯಕ್ಷ ಮಂಡ್ನೂರು ಗಣಪತಿ ಭಟ್‌ ಇದೀಗ ಅಧ್ಯಕ್ಷರಾಗಿದ್ದು, ಸ್ಥಾಪಕ ಕಾರ್ಯದರ್ಶಿ ಪಿ. ಗಣಪತಿ ಭಟ್‌ ಪಾದೆ ಕಲ್ಲು ಅವರು ಇಂದಿಗೂ ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಲು ಪರೀಕ್ಷಕರಾಗಿ ರಾಧಾಕೃಷ್ಣ ಕನ್ಯಾನ ಮತ್ತು ಕಚೇರಿ ಸಹಾಯಕರಾಗಿ ಕಿರಣ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ಯಾನ ಹಾ.ಉ. ಸಹಕಾರ ಸಂಘವು ಸ್ಥಾಪನೆಯಾದ ಬಳಿಕ ಕನ್ಯಾನ ಕರೋಪಾಡಿ ಗ್ರಾಮಗಳ ಗ್ರಾಮಸ್ಥರ ಆಶಯವನ್ನು ಈಡೇರಿಸುವಲ್ಲಿ ಸಫಲವಾಗಿದೆ. ಇದು ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ, ಸಿಬಂದಿ ಶ್ರಮಕ್ಕೆ ಸಂದ ಪ್ರತಿಫಲವಾಗಿದೆ.

ಪಶುಗಳ ಕೃತಕ ಗರ್ಭಧಾರಣೆ
ಕೃಷಿಕರ ಪಶುಗಳ ಕೃತಕ ಗರ್ಭಧಾರಣೆಯ ವಿಶೇಷ ತರಬೇತಿ ಪಡೆದ ಪಿ. ಗಣಪತಿ ಭಟ್‌ ಅವರು 1987ರಿಂದ ಈ ಎರಡು ಗ್ರಾಮಗಳ ಮತ್ತು ಕೇರಳ ಗಡಿಭಾಗಗಳಾದ ಜೋಡುಕಲ್ಲು, ಕುರುಡಪದವು ಇತ್ಯಾದಿ ಕಡೆಗಳಿಗೆ ತೆರಳಿ, ಪಶುಗಳ ಕೃತಕ ಗರ್ಭಧಾರಣೆಗೆ ಅವಶ್ಯವಿರುವ ಸೂಕ್ತ ವ್ಯವಸ್ಥೆಯನ್ನು ಮಾಡುತ್ತಲೇ ಬಂದಿದ್ದಾರೆ. ಇದು ಕೂಡಾ ಸಂಘದ ಅಭಿವೃದ್ಧಿಗೆ, ಊರಿನ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದಂತಾಗಿದೆ.

ತಾಲೂಕಿನ ಉತ್ತಮ ಸಂಘ
ಆರಂಭದಿಂದ ಇಂದಿನವರೆಗೆ ಸಂಘವು ಲಾಭವನ್ನು ದಾಖಲಿಸಿದ್ದು, ಸತತವಾಗಿ ಆಡಿಟ್‌ ರಿಪೋರ್ಟ್‌ನಲ್ಲಿ ಎ ವರ್ಗೀಕರಣ ಪಡೆದ ಹೆಗ್ಗಳಿಕೆಯನ್ನು ಹೊಂದಿದೆ. ಸಂಘಕ್ಕೆ ದ.ಕ. ಹಾಲು ಒಕ್ಕೂಟವು ತಾಲೂಕಿನ ಉತ್ತಮ ಸಂಘವೆಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸದಸ್ಯರಿಗೆ ನಿರಂತರವಾಗಿ ಡಿವಿಡೆಂಡ್‌ ವಿತರಿಸಿದ್ದು, ಶೇ. 9ರಿಂದ ಇದೀಗ ಶೇ. 17ಕ್ಕೇರಿಸಿದೆ.

ಹಳ್ಳಿಪ್ರದೇಶಕ್ಕೆ ಹಾಲಿಗೆ ಬರಗಾಲವಿದ್ದಾಗ, ಕಡಿಮೆ ಹಾಲು ಸಂಗ್ರಹದೊಂದಿಗೆ ಆರಂಭವಾದ ಕನ್ಯಾನ ಹಾ.ಉ.ಸ. ಹಕಾರ ಸಂಘವು ಇಂದು 500 ಲೀ. ಸಂಗ್ರಹಿಸುತ್ತಿದೆ. 1986ರಲ್ಲಿ ಕನ್ಯಾನ-ಕರೋಪಾಡಿ ಗ್ರಾಮಗಳಲ್ಲಿ ಹಾಲು ಮಾರಾಟ ಕೇಂದ್ರಗಳಿರಲಿಲ್ಲ. ಹಳ್ಳಿಪ್ರದೇಶದ ಹಾಲಿನ ಸಮಸ್ಯೆಯನ್ನು ಪರಿಹರಿಸಿ, ಇದೀಗ ಯಥೇತ್ಛ ಹಾಲನ್ನು ಒದಗಿಸುವ ಸಂಘವಾಗಿ ಪ್ರಸಿದ್ಧಿಯನ್ನು ಪಡೆದಿದೆ.
– ಮಂಡ್ನೂರು ಗಣಪತಿ ಭಟ್‌, ಅಧ್ಯಕ್ಷರು

ಮಾಜಿ ಅಧ್ಯಕ್ಷರು
ಎ. ಶಂಕರ ಭಟ್‌ ಪಂಜಜೆ, ಎ. ರಾಮಚಂದ್ರ ಭಟ್‌ ಅಂಗ್ರಿ, ಡಿ. ನಾರಾಯಣ ಭಟ್‌ ದೇಲಂತಬೆಟ್ಟು.

-ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆDelhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ

Madhya Pradesh: ಕೈಗಾರಿಕ ತ್ಯಾಜ್ಯ ವಿಲೇವಾರಿ ಖಂಡಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

4

Uppinangady: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deeee

Udupi; ಮಕ್ಕಳ ರಕ್ಷಣೆ ಕಾಯ್ದೆ ಅನುಷ್ಠಾನ ಅಗತ್ಯ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.