ಗುಡ್ಡೆಮನೆ ಅಷ್ಟಪವಿತ್ರ ನಾಗಮಂಡಲ: ಸಮಾಲೋಚನ ಸಭೆ
Team Udayavani, Feb 23, 2017, 3:08 PM IST
ಬಂಟ್ವಾಳ : ಶಂಭೂರು ಗ್ರಾಮ ಗುಡ್ಡೆಮನೆ ಬಂಗೇರ ಕುಟುಂಬಸ್ಥರು ಮತ್ತು ಊರಿನ ಜನರ ಸಹಕಾರದಲ್ಲಿ ಎ. 19ರಂದು ನಡೆಸಲು ಉದ್ದೇಶಿಸಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಪೂರ್ವಭಾವಿ ಸಮಾಲೋಚನ ಸಭೆಯು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದ ಯಶಸ್ಸಿನ ಉದ್ದೇಶದಿಂದ ವಿವಿಧ ಸಮಿತಿಗಳನ್ನು ರಚಿಸಲಾಯಿತು. ನಾಗಮಂಡಲ ನಡೆಸುವ ಶಾಸ್ತ್ರೀಯ ಕ್ರಮಗಳ ಕುರಿತು ಸ್ವಾಮೀಜಿ ಮಾರ್ಗದರ್ಶನ ನೀಡಿದರು. ಮಂಗಳೂರಿನ ಮಹಾಬಲ ಪೂಜಾರಿ ಕಡಂಬೋಡಿ ಮಾತನಾಡಿ ನಾಗಮಂಡಲೋತ್ಸವ ಮಾಡುವುದು ಪುಣ್ಯದ ಕೆಲಸ. ದೈವಾನುಗ್ರಹದಿಂದ ಮಾತ್ರ ಸಾಧನೆ ಆಗುವುದು ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಸಾಮಾಜಿಕ ಸೇವಾಕರ್ತ ಕೆ. ಸೇಸಪ್ಪ ಕೋಟ್ಯಾನ್, ತಾ.ಪಂ.ಮಾಜಿ ಉಪಾಧ್ಯಕ್ಷ ಆನಂದ ಎ. ಶಂಭೂರು, ನರಿಕೊಂಬು ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಸಾಲ್ಯಾನ್, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಕೋಶಾಧಿಕಾರಿ ಕಮಲಾಕ್ಷ ಶಾಂತಿಲ, ಕುಟುಂಬದ ಹಿರಿಯರುಗಳಾದ ಸೇಸಪ್ಪ ಪೂಜಾರಿ, ಪೂವಪ್ಪ ಪೂಜಾರಿ ಆಚಾರಿಬೆಟ್ಟು, ಕುಟುಂಬ ಸಮಿತಿ ಅಧ್ಯಕ್ಷರಾದ ಮಾಧವ ಬಂಗೇರ ಗುಡ್ಡೆಮನೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
Mangaluru ಕಂಬಳಕ್ಕೆ ನೆರವು: ಇಂದು ಸಿಎಂಗೆ ಅಹವಾಲು
ವಿಶಿಷ್ಟ ವಿಚಾರ ಚಿಂತನ ಮಂಥನ: ಮಂಗಳೂರು ಲಿಟ್‌ಫೆಸ್ಟ್ ಇಂದಿನಿಂದ
ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.