ನರಹರಿ ಸದಾಶಿವ ದೇವಾಲಯ : ಆ.11: ಆಟಿ ಅಮಾವಾಸ್ಯೆ ತೀರ್ಥಸ್ನಾನ
Team Udayavani, Aug 9, 2018, 1:30 AM IST
ಬಂಟ್ವಾಳ: ರಾ.ಹೆ. 75ರ ಅಂಚಿನಲ್ಲಿ ಮಂಗಳೂರಿನಿಂದ 28 ಕಿ.ಮೀ. ದೂರದ ಮೆಲ್ಕಾರ್-ಕಲ್ಲಡ್ಕದ ಮಧ್ಯೆ ಬೋಳಂಗಡಿ, ಗೋಳ್ತಮಜಲು, ಅಮ್ಟೂರು ಗ್ರಾಮಗಳ ತ್ರಿವೇಣಿ ಸಂಗಮ ಗಡಿ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿ ಎತ್ತರದ ಪರ್ವತದ ತುದಿಯಲ್ಲಿದೆ ನರಹರಿ ಸದಾಶಿವ ದೇವಾಲಯ. ಆ. 11ರ ಆಟಿ ಅಮಾವಾಸ್ಯೆಯಂದು ಮುಂಜಾನೆಯಿಂದಲೇ ಭಕ್ತರು ಪರ್ವತವೇರಿ ಶಂಕ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ಕೆರೆಗಳಲ್ಲಿ ಮಿಂದು ನಾಗರಾಜ, ವಿನಾಯಕ, ನರಹರಿ ಸದಾಶಿವ ದೇವರಿಗೆ ಸೇವೆ ಸಲ್ಲಿಸಿ ಪುನೀತರಾಗುತ್ತಾರೆ.
ಪುನರ್ ನಿರ್ಮಾಣಕ್ಕೆ ಚಾಲನೆ
ಸುಮಾರು 7 ಕೋ. ರೂ. ವೆಚ್ಚದಲ್ಲಿ ಸದಾಶಿವ ದೇವರಿಗೆ ಗರ್ಭ ಗುಡಿ, ಸುತ್ತು ಪೌಳಿ ನಿರ್ಮಾಣ, ಶ್ರೀ ವಿನಾಯಕ ದೇವರ ಗುಡಿ, ನಾಗದೇವರ ಗುಡಿ, ರಾಜಗೋಪುರ, ಸಭಾಗೃಹ ರಚನೆ ಮೊದಲಾದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ವಾಸ್ತು, ನೀಲಿ ನಕ್ಷೆ, ಅಂದಾಜು ಪಟ್ಟಿಯನ್ನು ರಚಿಸಲಾಗಿದೆ. ಡಾ| ಆತ್ಮರಂಜನ್ ರೈ ನೇತೃತ್ವದ ನೂತನ ಜೀರ್ಣೋದ್ಧಾರ ಸಮಿತಿ ಕಾರ್ಯೋನ್ಮುಖವಾಗಿದೆ. ಈಗಾಗಲೇ ಹಲವು ಸಂಘ – ಸಂಸ್ಥೆಗಳಿಂದ ನಿರಂತರ ಕರಸೇವೆ ಜರಗುತ್ತಿದ್ದು, ಗರ್ಭಗುಡಿಯ ಶಿಲಾ ಕಲ್ಲಿನ ಕೆತ್ತನೆಯ ಕೆಲಸಗಳು ಭರದಿಂದ ಸಾಗುತ್ತಿವೆ. ಭಕ್ತರು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಕೈ ಜೋಡಿಸಬೇಕಾಗಿ ಆಡಳಿತ ಮೊಕ್ತೇಸರ ಡಾ| ಪ್ರಶಾಂತ ಮಾರ್ಲ, ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ವಿನಂತಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.