ಗ್ರಾಮೀಣರ ಬದುಕಿಗೆ ಆಸರೆಯಾದ ಹಾಲು ಉತ್ಪಾದಕರ ಸಂಘ
ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ
Team Udayavani, Feb 15, 2020, 5:46 AM IST
105 ಸದಸ್ಯ ಬಲದೊಂದಿಗೆ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ ಪ್ರಸಕ್ತವಾಗಿ 2 ಕೋ.ರೂ. ಗೂ ಅಧಿಕ ವ್ಯವಹಾರ ಮಾಡುತ್ತಿದೆ.1995-96 ರಿಂದ ಇಲ್ಲಿಯವರೆಗೆ ಉತ್ತಮ ಸಂಘ ಎಂಬ ಪ್ರಶಸ್ತಿಯನ್ನು ಪಡೆಯುತ್ತ ಬಂದಿದೆ.
ಮೂಲ್ಕಿ: ಅತಿಕಾರಿಬೆಟ್ಟು, ಕವತ್ತಾರು ಮತ್ತು ಪುತ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿ ತಿಂಗೋಳೆ ರಾಗು ಶೆಟ್ಟಿ ಅವರ ಮುಂದಾಳತ್ವದಲ್ಲಿ ಆರಂಭಗೊಂಡ ಮೂಲ್ಕಿ ಹೋಬಳಿಯ ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘವು 1987ರಲ್ಲಿ ಆರಂಭವಾಯಿತು.
ಸುಮಾರು 105 ಸದಸ್ಯರ ಬಲದೊಂದಿಗೆ 1,540 ರೂ. ಪಾಲು ಬಂಡವಾಳದ ಮೂಲಕ ಬಾಡಿಗೆ ಕಟ್ಟಡದಲ್ಲಿ ಸಂಘವು ಆರಂಭವಾಯಿತು. ಎರಡು ಉಪಕೇಂದ್ರಗಳ ಮೂಲಕ 100 ಲೀ. ಹಾಲು ಸಂಗ್ರಹಿಸಲಾಗುತ್ತಿತ್ತು. ಆರಂಭದ ವರ್ಷದಲ್ಲಿ ಸುಮಾರು 86 ರೂ. ಲಾಭವನ್ನು ಪಡೆದಿದ್ದ ಸಂಘವು ಪ್ರಸಕ್ತವಾಗಿ 2 ಕೋ.ರೂ. ಗೂ ಅಧಿಕ ವ್ಯವಹಾರ ಮಾಡುತ್ತಿದೆ. ಸರ್ವ ರೀತಿಯ ಸೌಕರ್ಯ ಸಹಿತ ಸ್ವಂತ ಕಟ್ಟಡವನ್ನು ಸಂಘವು ಹೊಂದಿದೆ.
ಸದಸ್ಯರಿಗೆ ಕೊಡುಗೆ
ಸಂಘದ ವತಿಯಿಂದ ದ.ಕ. ಒಕ್ಕೂಟದ ನೆರವಿನೊಂದಿಗೆ ಜಾನು ವಾರು ಮೇಳದಲ್ಲಿ ಸುಮಾರು 100 ಜಾನುವಾರುಗಳು ಭಾಗವಹಿಸಿದ್ದವು. ಸದಸ್ಯ ಹೈನುಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನವಿತರಣೆ, ಸದಸ್ಯರಿಗೆ ಜನಶ್ರೀ ವಿಮೆ ಹಾಗೂ ಯಶಸ್ವಿನಿ ಆರೋಗ್ಯ ವಿಮಾ ಸೌಲಭ್ಯ, ಜಾನುವಾರುಗಳಿಗೆ ಕಾಲು ಬಾಯಿ ರೋಗಕ್ಕೆ ಔಷಧ, ಪ್ರೋತ್ಸಾಹ ಧನ ಸಂಘದಿಂದ ಒದಗಿಸಲಾಗುತ್ತಿದೆ.
ಪ್ರಭಾಕರ ಶೆಟ್ಟಿ, ರತ್ನಾಕರ ಶೆಟ್ಟಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಸಂಘವು ವೇಗವಾಗಿ ಬೆಳೆವಣಿಗೆ ಪಡೆಯಿತು. ಗಂಗಾಧರ ಶೆಟ್ಟಿಯವರು ಅಧ್ಯಕ್ಷರಾದ ಅನಂತರ 2 ಕೋ. ರೂ. ರೂ. ವ್ಯವಹಾರ ಮಾಡುತ್ತಿದ್ದು ಸುಮಾರು 6 ಲಕ್ಷ ರೂ. ಲಾಭಾಂಶದ ಗಡಿ ತಲುಪಿದೆ.
ಸ್ವಂತ ಕಟ್ಟಡ
ರತ್ನಾಕರ ಶೆಟ್ಟಿಯವರು ಅಧ್ಯಕ್ಷರಾಗಿದ್ದಾಗ 4 ಲಕ್ಷ ರೂ. ವೆಚ್ಚದ ಸಂಘದ ಸ್ವಂತ ಕಟ್ಟಡ, ಕಪಿಲೆ, ಅಂದಿನ ಶಾಸಕರಾಗಿದ್ದ ಕೆ. ಅಭಯಚಂದ್ರ ಜೈನ್ ಅವರ ಉಪಸ್ಥಿತಿಯಲ್ಲಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಉದ್ಘಾಟಿಸಿದರು.
ಪ್ರಥಮ ಉತ್ತಮ ಸಂಘ
1995-96ರ ಅವಧಿಗೆ ತಾಲೂಕುವಾರು ಸಾಧನೆಯಲ್ಲಿ ಪ್ರಥಮ ಉತ್ತಮ ಸಂಘವಾಗಿದೆ. 1996-97ರಲ್ಲಿ ತಾಲೂಕು ವಾರು ದ್ವಿತೀಯ ಉತ್ತಮ ಸಂಘ, 1997-98 ದ್ವಿತೀಯ ಉತ್ತಮ ಸ ಹಕಾರಿ ಸಂಘ, 1998-99 ದ್ವಿತೀಯ ತಾಲೂಕು ಮಟ್ಟದ ಸಾಧಕಸಂಘ, 2007ರಲ್ಲಿ ದ್ವಿತೀಯ ಉತ್ತಮ ಸಂಘ, 2011-12ರಲ್ಲಿ ದ್ವಿತೀಯ ಉತ್ತಮ ಸಹಕಾರಿ ಸಂಘ, 2013-14ರಲ್ಲಿ ದ್ವಿತೀಯ ಉತ್ತಮ ಸಹಕಾರಿ ಸಂಘ, 2017-2018 ರಲ್ಲಿ ದ್ವಿತೀಯಾ ಉತ್ತಮ ಸಹಕಾರಿ ಸಂಘ ಹಾಗೂ 2018-2019ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಸಹಕಾರಿ ಸಂಘದ ಪ್ರಶಸ್ತಿಯನ್ನು ಪಡೆದಿದೆ.
ಸರ್ವರ ಸಹಕಾರದಿಂದ 10 ವರ್ಷಗಳಿಂದ ಸಂಘದ ಅಭಿವೃದ್ಧಿಗೆ ಅಧ್ಯಕ್ಷನಾಗಿ ಪಾರದರ್ಶಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸದಸ್ಯರಿಗೆ ಸರಕಾರದಿಂದ ಹಾಗೂ ಒಕ್ಕೂಟದಿಂದ ಸಿಗುವ ಸೌಲಭ್ಯವನ್ನು ದೊರಕಿಸಿ ಕೊಡುವ ಮೂಲಕ ಸಂಘದ ಸವಲತ್ತುಗಳನ್ನು ಪೂರೈಸಿ ಎಲ್ಲ ವಿಧದ ಸಹಕಾರ ತತ್ವದ ಯೋಜನೆಗಳನ್ನು ಬಳಸಿಕೊಂಡು ಸಂಸ್ಥೆಯೂ ಮುನ್ನಡೆಯುತ್ತಿದೆ..
– ಬರ್ಕೆ ವಿ. ಗಂಗಾಧರ ಶೆಟ್ಟಿ, ಅಧ್ಯಕ್ಷರು, ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ,
-ಎಂ. ಸರ್ವೋತ್ತಮ ಅಂಚನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.