ಸುಳ್ಯ: ಅಪರಿಚಿತ ತಂಡದಿಂದ ಗುಂಡಿನ ದಾಳಿ; ಕೂದಲೆಳೆ ಅಂತರದಿಂದ ಪಾರಾದ ಯುವಕ!
Team Udayavani, Jun 6, 2022, 9:43 AM IST
ಸುಳ್ಯ: ವಾಹನದಲ್ಲಿ ಬಂದ ನಾಲ್ಕು ಜನ ಅಪರಿಚಿತರ ತಂಡವೊಂದು ಯುವಕನೋರ್ವನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಜೂ.5ರ ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರದಲ್ಲಿ ನಡೆದಿದೆ.
ದಾಳಿಯಿಂದ ಯುವಕ ಕೂದಲೆಳೆ ಪಾರಾಗಿದ್ದು, ಕಾರಿಗೆ ಹಾನಿ ಸಂಭವಿಸಿದೆ. ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುಳ್ಯ ನಗರದ ಜ್ಯೋತಿ ಸರ್ಕಲ್ ಹತ್ತಿರ ಈ ಘಟನೆ ನಡೆದಿದೆ.
ಸುಳ್ಯ ಜಯನಗರದ ಮಹಮ್ಮದ್ ಸಾಹಿ (39 ವ) ಎಂಬವರ ಮೇಲೆ ಸ್ಕಾರ್ಪಿಯೋದಲ್ಲಿ ಬಂದ ಅಪರಿಚಿತರು ದಾಳಿ ಮಾಡಿದ್ದಾರೆ.
ಮಹಮ್ಮದ್ ಸಾಹಿ ಬಂಟ್ವಾಳದಲ್ಲಿ ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸ್ಸು ಸುಳ್ಯಕ್ಕೆ ಬಂದು ರಾತ್ರಿ ಸಮಯ 10:30 ರ ಸಮಾರಿಗೆ ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿ ತನ್ನ ತಂಗಿಯ ಮನೆಯ ಬಳಿಗೆ ಹೋಗಿದ್ದರು. ವಾಪಸ್ಸು ತನ್ನ ಮನೆಗೆ ಹೋಗುವ ಸಲುವಾಗಿ ತನ್ನ ಕಾರಿನ ಬಳಿಗೆ ಬಂದು ಡೋರ್ ತೆರೆಯಲು ಸಿದ್ದತೆ ಮಾಡುತ್ತಿರುವಾಗ ಜ್ಯೋತಿ ಸರ್ಕಲ್ ಕಡೆಯಿಂದ ಬಂದ ಸ್ಕಾರ್ಪಿಯೋ ಕಾರಿನಲ್ಲಿದ್ದ ನಾಲ್ಕು ಮಂದಿ ಅಪರಿಚಿತರು ಇವರ ಕಡೆಗೆ ಗುಂಡು ಹಾರಿಸಿದ್ದು, ಈ ವೇಳೆ ಕಾರಿನ ಬಲ ಬದಿಯ ಎರಡು ಡೋರ್ ಗಳ ಮಧ್ಯಕ್ಕೆ ಗುಂಡು ತಾಗಿದೆ.
ಘಟನೆಯಲ್ಲಿ ಮಹಮ್ಮದ್ ಸಾಹಿ ಅವರ ಬೆನ್ನಿನ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ನೂಪುರ್ ಶರ್ಮಾ ಅಮಾನತು: ಬಿಜೆಪಿ ನಡೆಯನ್ನು ಸ್ವಾಗತಿಸಿದ ಸೌದಿ ಅರೇಬಿಯಾ
ಸುಳ್ಯ ವೃತ್ತ ನಿರೀಕ್ಷಿತ ನವೀನ್ ಚಂದ್ರ ಜೋಗಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
Sullia: ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
Puttur: ಬಸ್ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.