ಬೆಂಕಿ ಕಡ್ಡಿಯಲ್ಲಿ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ
ಜಾಲತಾಣದ ಮೂಲಕ ಮತದಾರರ ಸೆಳೆಯಲು ವಿನೂತನ ಕ್ರಮ
Team Udayavani, Apr 18, 2019, 6:00 AM IST
ಬೆಳ್ಳಾರೆಯ ಭರತ್ ಪೂಜಾರಿ ಬೆಂಕಿಕಡ್ಡಿಯಲ್ಲಿ ರಚಿಸಿದ ಕಲಾಕೃತಿ.
ಬೆಳ್ಳಾರೆ: ಮತದಾನ ಕೇಂದ್ರದಲ್ಲಿ ಸಾಲು ನಿಂತಿರುವ ಮತದಾರರ ಗುರುತು ಚೀಟಿ ಪರಿಶೀಲಿಸಿ, ಬೆರಳಿಗೆ ಶಾಯಿ ಹಾಕುವ, ಮತ ಚಲಾಯಿಸುವ ದೃಶ್ಯಗಳನ್ನು ಬೆಂಕಿ ಕಡ್ಡಿಗಳಲ್ಲಿ ಚಿತ್ರಿಸಿ, ಮತದಾರರನ್ನು ಮತಗಟ್ಟೆಗೆ ಸೆಳೆಯುವ ವಿನೂತನ ಪ್ರಯತ್ನವನ್ನು ಸಾಮಾಜಿಕ ಜಾಲತಾಣದ ಮೂಲಕ ಬೆಳ್ಳಾರೆಯ ಭರತ್ ಪೂಜಾರಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಮತದಾನ ಕೇಂದ್ರದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಕಾತರರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ಕುರಿತು ಜಾಗೃತಿ ಆಗುತ್ತಲಿದೆ. ಜಿಲ್ಲಾಡಳಿತ, ಸ್ವೀಪ್ ಸಮಿತಿಯೂ ಮತದಾನ ಪ್ರಮಾಣ ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.
ಬೆಳ್ಳಾರೆಯ ಹವ್ಯಾಸಿ ಛಾಯಾಗ್ರಾಹಕ ಭರತ್ ಪೂಜಾರಿ ತಮ್ಮ ಕೈಚಳಕದಿಂದ ಬೆಂಕಿಕಡ್ಡಿಗಳಲ್ಲೇ ಮತಗಟ್ಟೆಯ ಪೂರ್ಣ ಚಿತ್ರಣವನ್ನು ಮೂಡಿಸಿದ್ದಾರೆ. ಮತದಾನ ನಮ್ಮ ಹಕ್ಕು. ತಪ್ಪದೇ ಮತ ಚಲಾಯಿಸೋಣ ಎನ್ನುವ ಸಂದೇಶದೊಂದಿಗೆ ಇದರ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪಸರಿಸಿದ್ದಾರೆ.
ವಿಶಿಷ್ಟ ಪ್ರಯತ್ನ
ಸಾಮಾಜಿಕ ಜಾಲತಾಣದಲ್ಲಿ ಇವರ ಚಿತ್ರವು ವ್ಯಾಪಕವಾಗಿ ಪ್ರಚಾರವಾಗಿದ್ದು, ಬೆಂಕಿ ಕಡ್ಡಿಯಲ್ಲಿ ಅರಳಿದ ಈ ಮತದಾನ ಜಾಗೃತಿ ಎಲ್ಲರನ್ನೂ ಆಕರ್ಷಿಸಿದೆ. ಗ್ರಾಮೀಣ ಪ್ರದೇಶಗಳ ಯುವಕರನ್ನು ಮತ ಚಲಾಯಿಸುವಂತೆ ಸಾಮಾಜಿಕ ಜಾಲತಾಣದ ಮೂಲಕ ಪ್ರೇರೇಪಿಸುವ ವಿಶಿಷ್ಟ ಪ್ರಯತ್ನವನ್ನು ಭರತ್ ಮಾಡಿದ್ದಾರೆ.
ಮತ ಚಲಾಯಿಸಿ
ಮತದಾನ ನಮ್ಮ ಹಕ್ಕು. ಯುವ ಮತದಾರರೇ ಉತ್ತಮ ನಾಯಕನ ಆಯ್ಕೆ ಮಾಡುವಲ್ಲಿ ನಿರ್ಣಾಯಕರಾಗಿರುತ್ತಾರೆ. ಯುವ ಸಮುದಾಯ ತಪ್ಪದೇ ಮತ ಚಲಾಯಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರ ಪ್ರಚಾರ ಮಾಡುವುದಕ್ಕಿಂತಲೂ ಮತದಾನ ಮಾಡಿ ಎನ್ನುವ ಜಾಗೃತಿಯನ್ನು ಮೂಡಿಸುವ ಕಾರ್ಯಕ್ಕೆ ಯುವಕರು ಮುಂದಾಗಬೇಕು.
ಭರತ್ ಪೂಜಾರಿ ಬೆಳ್ಳಾರೆ
ಉಮೇಶ್ ಮಣಿಕ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.