ವಿಚಾರಣಾಧೀನ ಕೈದಿಯಿಂದ ಪೊಲೀಸ್ ಸಿಬಂದಿ ಕೊಲೆ ಯತ್ನ
Team Udayavani, Nov 9, 2017, 11:19 AM IST
ಮಂಗಳೂರು: ದರೋಡೆ ಪ್ರಕರಣದ ಆರೋಪಿ ವಿಚಾರಣಾಧೀನ ಕೈದಿ ಪಡೀಲ್ ಸಮೀಪದ ಬಳ್ಳೂರುಗುಡ್ಡೆಯ ನುಮಾನ್ (21) ಬೆಂಗಾವಲು ಪೊಲೀಸ್ ಸಿಬಂದಿ ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಕುರಿಯಾಕೋಸ್ ಅವರ ಕೊಲೆಗೆ ಯತ್ನಿಸಿದ ಘಟನೆ ಬುಧವಾರ ನಗರದ ಪಿವಿಎಸ್ ವೃತ್ತದ ಬಳಿ ಸಂಭವಿಸಿದೆ.
ಆರೋಪಿ ನೌಮಾನ್‌ನ್ನು 3ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆ ಮುಗಿದ ಬಳಿಕ ಜೈಲಿಗೆ ಕರೆದುಕೊಂಡು ಹೋಗುವ ವೇಳೆ ಪಿವಿಎಸ್ ವೃತ್ತದ ಬಳಿ ಕೈಕೋಳದ ಸಂಕೋಲೆಯನ್ನು ಪೊಲೀಸ್ ಸಿಬಂದಿಯ ಕುತ್ತಿಗೆಗೆ ಬಿಗಿ ಹಿಡಿದು ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
“ನನ್ನ ವಿರುದ್ಧ 9 ಕೇಸಿದೆ. ಇನ್ನೊಂದು ಕೇಸಾದರೂ ದೊಡ್ಡದಲ್ಲ. ನಿಮ್ಮನ್ನು ಕೆಲಸದಿಂದ ತೆಗೆಸದೆ ಬಿಡುವುದಿಲ್ಲ” ಎಂದು ಹೇಳಿ ನುಮಾನ್ ಪೊಲೀಸ್ ಸಿಬಂದಿ ಕುರಿಯಾಕೋಸ್ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದನು ಆತನ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.