ಗಮನಸೆಳೆದ ವಿಶ್ವಮಾತಾ ಗೋಮಾತಾ ನೃತ್ಯ ನಾಟಕ
Team Udayavani, Jul 15, 2017, 2:50 AM IST
ಸುಳ್ಯ: ಮಂಗಳೂರು ಕಿನ್ನಿಗೋಳಿ ಶ್ರೀ ಶಕ್ತಿದರ್ಶನ ಯೋಗಾಶ್ರಮ ಮತ್ತು ಮಂಗಳೂರು ರಂಗಭಾರತಿ ಸಹಕಾರದಲ್ಲಿ ಮೂಡಿ ಬಂದ ವಿಶ್ವಮಾತಾ ಗೋಮಾತಾ ನೃತ್ಯ ನಾಟಕ ಗಮನ ಸೆಳೆಯಿತು. ಬಹುಮಾಧ್ಯಮ ಬಳಕೆಯ ಅದ್ದೂರಿಯ ದ್ವಿಭಾಷಾ ನೃತ್ಯ ನಾಟಕದ ಸಾಹಿತ್ಯ ಪರಿಕಲ್ಪನೆ ಕೆ.ವಿ.ರಮಣ್ ಮತ್ತು ಡಾ| ಎಂ.ಪ್ರಭಾಕರ ಜೋಶಿ ಅವರದ್ದು ಮತ್ತು ಸಂಗೀತ, ರಂಗರೂಪ ನೀಡಿ ಕೆ.ವಿ. ರಮಣ್ ಸಮಗ್ರ ನಿರ್ದೇಶನ ನೀಡಿದ್ದಾರೆ. ಸುಳ್ಯದ ಶ್ರೀದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಈ ನಾಟಕಕ್ಕೆ ವಿದುಷಿ ಮೋನಿಕಾ ರಾವ್ ಮತ್ತು ವಿದುಷಿ ಪ್ರಸನ್ನಲಕ್ಷ್ಮೀ ನೃತ್ಯ ಸಂಯೋಜಿಸಿದ್ದರು. ಪಾತ್ರಧಾರಿಗಳಾಗಿ ವಿದುಷಿ ಮೋನಿಕಾ ರಾವ್, ವಿದುಷಿ ಪ್ರಸನ್ನಲಕ್ಷ್ಮೀ, ವಿದುಷಿ ಮಮತಾ ದತ್ತ, ವಿದುಷಿ ಕಾಂತಿ ಜಿ. ಭಟ್, ಅಯನಾ ವಿ. ರಮಣ್, ಖಾದರ್ ಖಾನ್, ವಿಷ್ಣು ಎನ್., ಪ್ರಶಾಂತ್ ಕೆ.ಎಸ್., ದೀಪಕ್‌ಪ್ರಸಾದ್, ವಸಂತ್ ಕೆ., ವಿನೋದ್ ಪಿ., ಪ್ರವೀಣ್, ಅಜೇಯ ಸುಬ್ರಹ್ಮಣ್ಯ, ರಾಜೇಶ್ ಕೆ., ನಿಕ್ಷಿತಾ ಕೆ., ಕೋಮಲ್ ಕುಮಾರ್, ಸುಜಾತ ಕಿಣಿ, ಅಭಿಜ್ಞಾ ಎಸ್.ಎಂ. ಭಾಗವಹಿಸಿದ್ದರು.
ವಸ್ತ್ರ ವಿನ್ಯಾಸ ವಿಕ್ರಮ್ ಆರ್ಟ್ಸ್ ಉಪ್ಪುಂದ, ಧ್ವನಿ-ಬೆಳಕು ಮೂಡಬಿದಿರೆ ವೋಲ್ಟ್ ಆ್ಯಂಪ್ ಎಂಟರ್‌ಪ್ರೈಸಸ್‌ನ ರಾಮಚಂದ್ರ ಭಟ್, ಮಂಗಳೂರು ಲಲಿತಾ ಕಲಾ ಆರ್ಟ್ಸ್ನ ಗಿರಿಯಪ್ಪ ಇಡ್ಯ ಪ್ರಸಾಧನದಲ್ಲಿ ಸಹಕರಿಸಿದ್ದರು. ಹಿನ್ನೆಲೆ ಗಾಯಕರಾಗಿ ಕೆ.ಎಸ್. ಸುರೇಖಾ ಬೆಂಗಳೂರು, ರಮೇಶ್ಚಂದ್ರ ಬೆಂಗಳೂರು, ಗಜಾನನ ಹೆಬ್ಟಾರ್, ನಿಹಾಲ್ ತಾವ್ರೊ, ವಾಣಿಶ್ರೀ ಸಪ್ರ, ಅಯನಾ ವಿ ರಮಣ್, ರವೀಂದ್ರ ಪ್ರಭು, ಅನುಷಾ ಭಟ್, ಸಹನಾ ಭಟ್, ಶ್ಯಮಂತಕ ಐತಾಳ್, ಶುಭಾಂಗ ಐತಾಳ್, ವಾದ್ಯ ವೃಂದ ಸಂಯೋಜನೆ ಪ್ರಮೋದ್ ಸಪ್ರ ಬೆಂಗಳೂರು ಸಹಕರಿಸಿದ್ದರು. ಸುಳ್ಯ ತಾಲೂಕಿನ ಅಡ್ಕಾರ್ ಶ್ರೀಸುಬ್ರಹ್ಮಣ್ಯ ದೇವಸ್ಥಾನ ಮತ್ತು ಚೊಕ್ಕಾಡಿ ಶ್ರೀ ರಾಮ ದೇವಸ್ಥಾನದಲ್ಲೂ ಈ ನೃತ್ಯ ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.