ಪೋಗೋದಲ್ಲಿ ‘ಅಂಡೆಪಿರ್ಕಿ’ ಚೇಷ್ಟೆ
Team Udayavani, Nov 18, 2017, 10:55 AM IST
ಮಹಾನಗರ: ನಗರದಲ್ಲಿ ಹಾಸ್ಯದ ಹೊನಲು ಹರಿಸಿದ್ದ ‘ಅಂಡೆಪಿರ್ಕಿ’ಗಳ ಕಿತ್ತಾಟ ಇನ್ನು ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಮನೆ-ಮನ ತಲುಪಲಿದೆ.
ಮಕ್ಕಳು ನೋಡುವ ಕಾರ್ಟೂನ್ ಚಾನೆಲ್ ಪೋಗೋದಲ್ಲಿ ‘ಅಂಡೆಪಿರ್ಕಿ’ಗಳಿಬ್ಬರು ಡಿ. 3ರಿಂದ ಸದ್ದು ಮಾಡಲಿದ್ದಾರೆ. ನಗರದ ವಿವೇಕ್ ಬೋಳಾರ್ ಸಾರಥ್ಯದಲ್ಲಿ ರೂಪಿಸಿದ ಕಾರ್ಟೂನ್ ಧಾರಾವಾಹಿ ಅಂಡೆಪಿರ್ಕಿ. ಡಿಸೆಂಬರ್ ಮೂರರಿಂದ ಪ್ರತಿ ರವಿವಾರ ಬೆಳಗ್ಗೆ 9.30ರಿಂದ 10 ರ ತನಕ ಅಂಡೆಪಿರ್ಕಿಯನ್ನು ನೋಡಬಹುದು. ಒಟ್ಟು 78 ಎಪಿಸೋಡ್‌ಗಳಲ್ಲಿ ಪ್ರಸಾರಗೊಳ್ಳಲಿದೆ. ಆದರೆ ಹಿಂದಿಯಲ್ಲಿ ಅಂಡೆ ಎಂದರೆ ಮೊಟ್ಟೆ ಎಂಬರ್ಥ ಬರುವ ಕಾರಣ ಅಂಡೆಪಿರ್ಕಿ ಬದಲಾಗಿ ‘ಆ್ಯಂಡಿ ಪಿರ್ಕಿ’ ಎಂಬ ಹೆಸರಿನಲ್ಲಿ ಪ್ರಸಾರವಾಗಲಿದೆ.
ವಿವೇಕ್ ಬೋಳಾರ್ ಬ್ಲೂಫಿಕ್ಸೆಲ್ ಆ್ಯನಿಮೇಶನ್ ಸ್ಟುಡಿಯೋ ನಡೆಸುತ್ತಿದ್ದು, 2015ರಲ್ಲಿ ‘ಅಂಡೆಪಿರ್ಕಿ’ ಆ್ಯನಿಮೇಷನ್
ಚಿತ್ರ ನಿರ್ಮಿಸಿ ಯಶಸ್ವಿಯಾಯಿತು. ಬಳಿಕ ಓಂ ಆ್ಯನಿಮೇಶನ್ ಸ್ಟುಡಿಯೋಸ್ ಎಂಬುದಾಗಿ ಸಂಸ್ಥೆಯ ಹೆಸರು ಬದಲಿಸಲಾಗಿದೆ.
ಅವಕಾಶ ಸಿಕ್ಕಿದ್ದು ಹೇಗೆ?
ಪೋಗೋ ಚಾನೆಲ್ ಟರ್ನರ್ ಕಂಪೆನಿಯ ನೇತೃತ್ವದಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮೂರು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಂಪೆನಿಯ ಪ್ರಮುಖರಾದ ಕೃಷ್ಣ ದೇಸಾಯಿ ಅವರು, “ಅಂಡೆಪಿರ್ಕಿ’ ಕಿರು ಕಾರ್ಟೂನ್ ಚಿತ್ರವನ್ನು ವೀಕ್ಷಿಸಿದ್ದರು. ಚಿತ್ರದಲ್ಲಿನ ಗುಣಮಟ್ಟ ಮತ್ತು ಪ್ರಬುದ್ಧತೆಯನ್ನು ಗಮನಿಸಿ ತಮ್ಮ ಚಾನೆಲ್‌ನಲ್ಲಿ ಪ್ರಸಾರ ಮಾಡುವ ಅವಕಾಶ ಕಲ್ಪಿಸಿದ್ದರು.
ಅಂಡೆಪಿರ್ಕಿ
ಅಂಡೆ ಮತ್ತು ಪಿರ್ಕಿ ಸ್ನೇಹಿತರು. ಓರ್ವ ಪೆದ್ದು, ಇನ್ನೊಬ್ಬ ಮಹಾನ್ ಚಾಲಾಕಿ. ಅವರ ಚೇಷ್ಟೆ, ಕಿತಾಪತಿ, ಗಲಾಟೆಗಳು ಚಿತ್ರದ ಪ್ರಮುಖ ಕೇಂದ್ರಬಿಂದು. ಇದು ಸಂಭಾಷಣೆ ರಹಿತ ಮತ್ತು ಆ್ಯಕ್ಷನ್ ಆಧಾರಿತ ಕಿರು ಕಾರ್ಟೂನ್ ಚಿತ್ರ.
ಆತ್ಮವಿಶ್ವಾಸ ವೃದ್ಧಿ
ಅಂತಾರಾಷ್ಟ್ರೀಯ ಚಾನೆಲ್ ಪೋಗೋದಲ್ಲಿ ಪ್ರಸಾರಕ್ಕೆ ಅವಕಾಶ ಸಿಕ್ಕಿರುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮುಂದೆ ಇಂತಹ ಅನೇಕ ಗುಣಮಟ್ಟದ ಹಲವು ಕಾರ್ಟೂನ್ ಚಿತ್ರ ಮಾಡಲು ಪ್ರೇರಣೆ ಸಿಕ್ಕಂತಾಗಿದೆ.
– ವಿವೇಕ್ ಬೋಳಾರ್,
ನಿರ್ದೇಶಕ, ಅಂಡೆಪಿರ್ಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ವ್ಯಕ್ತಿ ನಾಪತ್ತೆ; 25 ದಿನ ಕಳೆದರೂ ಸಿಗದ ಸುಳಿವು
Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.