ಉಜಿರೆಯಲ್ಲಿ ರಿಕ್ಷಾ-ಮಿನಿ ಬಸ್ ಢಿಕ್ಕಿ: ಶಿಕ್ಷಕಿ ಸಾವು
Team Udayavani, Mar 1, 2017, 12:02 PM IST
ಬೆಳ್ತಂಗಡಿ: ಉಜಿರೆಯಲ್ಲಿ ಮಂಗಳವಾರ ಸಂಜೆ ರಿಕ್ಷಾಗೆ ಮಿನಿ ಬಸ್ ಢಿಕ್ಕಿಯಾಗಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ.
ಮಾಚಾರ್ನ ಅಟೋ ರಿಕ್ಷಾ ಚಾಲಕ ಕೇಶವ ನಾಯ್ಕ ಅವರ ಪತ್ನಿ, ಲಾೖಲ ಸೈಂಟ್ ಮೆರೀಸ್ ಶಾಲಾ ಶಿಕ್ಷಕಿ ಅಶ್ವಿನಿ (25) ಮೃತರು. ಅಳದಂಗಡಿ ನಿವಾಸಿಯಾದ ಅವರಿಗೆ ಕಳೆದ ವರ್ಷ ಎಪ್ರಿಲ್ನಲ್ಲಿ ವಿವಾಹವಾಗಿತ್ತು. ಉಜಿರೆ ಜನಾರ್ದನ ಶಾಲೆ ಬಳಿ ಉಜಿರೆ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಪ್ರವಾಸಿಗರನ್ನು ಕರೆತರುತ್ತಿದ್ದ ಮಿನಿ ಬಸ್ ಢಿಕ್ಕಿ ಹೊಡೆದಿದೆ.
ಢಿಕ್ಕಿಯಾದ ರಭಸಕ್ಕೆ ರಿಕ್ಷಾ ಮಗುಚಿಬಿದ್ದು ಅಶ್ವಿನಿ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ರಿಕ್ಷಾ ಚಾಲಕ ಅಬೂಬಕ್ಕರ್ (64) ಹಾಗೂ ಅವರ ಪುತ್ರಿ ಪ್ರಯಾಣಿಕರಾದ ಸುಮಯ್ಯ (23), ಶಹಾನ್ (1) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಢಿಕ್ಕಿ ಹೊಡೆದ ಬಸ್ ಜಖಂಗೊಂಡಿದ್ದರೂ ಪರಾರಿಯಾಗಿತ್ತು. ಅನಂತರ ಹಳೆಪೇಟೆ ಶ್ರೀರಾಮ ಮಂದಿರ ಬಳಿ ಅದನ್ನು ಸಾರ್ವಜನಿಕರ ನೆರವಿನಿಂದ ನಿಲ್ಲಿಸಲಾಯಿತು. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಶ್ವಿನಿ ಅವರು ನಾಲ್ಕು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ಸೇರಿದ್ದರು. ಆಕೆ ತಂದೆ ತಾಯಿ, ಪತಿ ಮತ್ತು ಇಬ್ಬರು ತಮ್ಮಂದಿರನ್ನು ಅಗಲಿದ್ದಾರೆ.
ಕೆಲವು ಸಮಯಗಳಿಂದ ಆಕೆಯ ತಂದೆ ಅನಾರೋಗ್ಯದಲ್ಲಿದ್ದಾರೆ. ಮೃತರ ಗೌರವಾರ್ಥ ಬುಧವಾರ ಶಾಲೆಗೆ ರಜೆ ಸಾರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.