ಬಿದ್ದು ಸಿಕ್ಕಿದ 50,000 ರೂ. ಮರಳಿಸಿದ ರಿಕ್ಷಾ ಚಾಲಕ
Team Udayavani, May 7, 2018, 7:55 AM IST
ಮಂಗಳೂರು: ಕಂಕನಾಡಿ ನಗರ ಠಾಣೆಯ ಪೊಲೀಸರ ಯತ್ನ ಮತ್ತು ರಿಕ್ಷಾ ಚಾಲಕರ ಪ್ರಾಮಾಣಿಕತೆಯಿಂದ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ 50,000 ರೂ. ಹಣವನ್ನು ಮರಳಿ ಪಡೆಯಲು ಸಾಧ್ಯವಾಗಿದೆ. ಕಾಸರಗೋಡು ಜಿಲ್ಲೆ ಉಪ್ಪಳದ ಪ್ರಶಾಂತ್ ಕುಮಾರ್ (30) ಅವರು ಕಳೆದುಕೊಂಡ ಹಣವನ್ನು ಮರಳಿ ಪಡೆದವರು ಹಾಗೂ ರಿಕ್ಷಾ ಚಾಲಕ ಅಬ್ದುಲ್ ಲಾಯ ಹಣವನ್ನು ಹಿಂದಿರುಗಿಸಿದವರು.
ಪ್ರಶಾಂತ್ ಕುಮಾರ್ ಅವರು ರವಿವಾರ ಬೆಳಗ್ಗೆ 9.30ಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ನಗರದ ಪಂಪ್‌ವೆಲ್ ಗೆ ಬಂದು ಬೈಕ್ ನಿಲ್ಲಿಸಿ ಕಿಸೆಯಿಂದ ಮೊಬೈಲ್ ಫೋನ್ ತೆಗೆಯುತ್ತಿದ್ದಾಗ ಕಿಸೆಯಲ್ಲಿದ್ದ 50,000 ರೂ.ಗಳ ಕಂತೆ ಕೆಳಗೆ ಬಿದ್ದಿತ್ತು. ಬಳಿಕ ಸಾಮಗ್ರಿ ಖರೀದಿಗಾಗಿ ಬಂದರು ಪ್ರದೇಶಕ್ಕೆ ತೆರಳಿದ್ದು, ಅಲ್ಲಿಗೆ ತಲುಪಿದಾಗ ಹಣ ಕಳೆದು ಹೋಗಿರುವುದು ತಿಳಿಯಿತು. ಪಂಪ್‌ವೆಲ್‌ನಲ್ಲಿ ತಾನು ಬೈಕ್ ನಿಲ್ಲಿಸಿದಲ್ಲಿ ಹಣಬಿದ್ದಿರಬಹುದೇ ಎಂಬ ಸಂಶಯದಿಂದ ವಾಪಸ್ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿ ಬಳಿಕ ಕಂಕನಾಡಿ ನಗರ ಪೊಲೀಸರಿಗೆ ದೂರು ಸಲ್ಲಿಸಿದರು.
ಮಧ್ಯಾಹ್ನದ ವೇಳೆಗೆ ಪಂಪ್‌ವೆಲ್ ನ ಓರ್ವ ರಿಕ್ಷಾ ಚಾಲಕ ಕಂಕನಾಡಿ ಪೊಲೀಸ್ ಠಾಣೆಗೆ ಫೋನ್ ಮಾಡಿ ತನ್ನ ಪರಿಚಯದ ಇನ್ನೋರ್ವ ರಿಕ್ಷಾ ಚಾಲಕನಿಗೆ 50,000 ರೂ.ಹಣ ಬಿದ್ದು ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ಇಬ್ಬರೂ ರಿಕ್ಷಾ ಚಾಲಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಪಂಪ್‌ವೆಲ್ ನಲ್ಲಿ ಹಣ ಸಿಕ್ಕಿರುವ ಬಗ್ಗೆ ಖಾತರಿಪಡಿಸಿಕೊಂಡರು. ಬಳಿಕ ಪೊಲೀಸರು ಪ್ರಶಾಂತ್ ಅವರಿಗೂ ಮಾಹಿತಿ ನೀಡಿ ಅವರನ್ನು ಠಾಣೆಗೆ ಕರೆಸಿಕೊಂಡರು. ಹಣ ಸಿಕ್ಕಿದ ರಿಕ್ಷಾ ಚಾಲಕ ಅಬ್ದುಲ್ ಲಾಯ ಅವರು 50,000 ರೂ. ಅನ್ನು ಪ್ರಶಾಂತ್‌ಗೆ ಹಸ್ತಾಂತರಿಸಿದರು. ಪ್ರಶಾಂತ್ ರಿಕ್ಷಾ ಚಾಲಕ ಅಬ್ದುಲ್ ಲಾಯ ಅವರನ್ನು ಸೂಕ್ತ ಬಹುಮಾನ ನೀಡಿ ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.