Ayodhya ರಾಮ ಮಂದಿರ ಸಾಕಾರ; ಕರಾವಳಿ ರಾಮಮಯ
Team Udayavani, Jan 22, 2024, 11:20 PM IST
ಮಂಗಳೂರು: ದೇವಾಲಯದಲ್ಲಿ ರಾಮ ನಾಮ ಸ್ಮರಣೆ, ಭಜನ ಮಂದಿರಗಳಲ್ಲಿ ರಾಮ ನಾಮ ಭಜನೆ, ಸಂಘ-ಸಂಸ್ಥೆಗಳ ವ್ಯಾಪ್ತಿಯಲ್ಲಿ ರಾಮ ನಾಮ ಧ್ಯಾನ, ಮನೆ-ಮನಗಳಲ್ಲಿ ರಾಮ ರಾಮ ಜಯ ಜಯ ರಾಮ ಉದ್ಘೋಷ!
ಅಯೋಧ್ಯೆಯಲ್ಲಿ ಶ್ರೀರಾಮ ದೇವರಿಗೆ ಸೋಮವಾರ ಪ್ರಾಣ ಪ್ರತಿಷ್ಠೆಯಾಗುತ್ತಿದ್ದಂತೆ ಕರಾವಳಿ ಭಾಗದ ವಿವಿಧ ಸ್ಥಳಗಳು ಸಂಪೂರ್ಣ ರಾಮಮಯವಾಗಿ ಕಂಗೊಳಿಸಿತು. ಅಯೋಧ್ಯಾಧಿಪತಿಯ ಪುರಪ್ರವೇಶದ ಸಂಭ್ರಮ ಅಲ್ಲಿ ಮನೆ ಮಾಡಿದ್ದರೆ ಅದನ್ನು ನೇರ ಪ್ರಸಾರದಲ್ಲಿ ಕಂಡ ಕರಾವಳಿ ಮಂದಿ ಭಕ್ತಿ ಭಾವದಿಂದ ಸಂಭ್ರಮಿಸಿದರು.
ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ವಿವಿಧ ದೇವಾಲಯ/ಭಜನ ಮಂದಿರಗಳಿಗೆ ತೆರಳಿದ ರಾಮ ಭಕ್ತರು ಅಯೋಧ್ಯೆಯ ಶ್ರೀರಾಮನ ಪರಮಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡರು. ಸಂಜೆಯಾಗುತ್ತಲೇ ಧಾರ್ಮಿಕ ಸ್ಥಳ, ಮನೆ, ಅಂಗಡಿಗಳಲ್ಲಿ ದೀಪೋತ್ಸವದಲ್ಲಿ ಭಾಗವಹಿಸಿದರು. ಈ ಮೂಲಕ ಭಕ್ತರು ದಿನಪೂರ್ತಿ ರಾಮೋತ್ಸವದ ಸ್ವರೂಪದಲ್ಲಿಯೇ ಭಾಗವಹಿಸಿ ಸಂಭ್ರಮಿಸಿದರು.
ಕರ ಸೇವೆಯಲ್ಲಿ ಭಾಗವಹಿಸಿದ್ದ ಕರ ಸೇವಕರನ್ನು ಮಂಗಳೂರು ಸಹಿತ ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಹಿಂದೂ ಸಂಘಟನೆಯಿಂದ ಕೆಲವೆಡೆ ರಕ್ತದಾನ ಶಿಬಿರ, ಹಣ್ಣು ಹಂಪಲು ವಿತರಣೆ ನಡೆಯಿತು. ಬಹುತೇಕ ಭಾಗದ ಸಂಘಟನೆ, ಅಂಗಡಿ, ಪ್ರಮುಖರಿಂದ ಸಾರ್ವಜನಿಕರಿಗೆ ಸಿಹಿತಿಂಡಿ/ಪಾನೀಯ ಉಚಿತವಾಗಿ ವಿತರಿಸಲಾಯಿತು. ಕೆಲವು ಅಂಗಡಿ/ವ್ಯಾಪಾರಸ್ಥರು ಉಚಿತವಾಗಿ ಜ್ಯೂಸ್ ವಿತರಿಸಿದರು. ಪೆಟ್ರೋಲ್ ಬಂಕ್, ಅಂಗಡಿ ಸಹಿತ ವಿವಿಧ ಪ್ರದೇಶದಲ್ಲಿ ಅಯೋಧ್ಯೆಯ ಪ್ರಾಣಪ್ರತಿಷ್ಠೆಯ ನೇರ ಪ್ರಸಾರವನ್ನು ಕಣ್ತುಂಬಿಕೊಂಡರು. ಮನೆ, ಅಂಗಡಿ, ಕಟ್ಟಡಗಳಲ್ಲಿ ಕೇಸರಿ ಧ್ವಜ ಹಾಗೂ ಕೆಲವು ರಸ್ತೆಗಳು ಕೇಸರಿಮಯವಾಗಿ ಕಂಗೊಳಿಸಿತು. ರಿಕ್ಷಾ, ಬಸ್, ಬೈಕ್ ಸಹಿತ ವಿವಿಧ ವಾಹನಗಳಲ್ಲಿ ಕೇಸರಿ ಬಾವುಟ ರಾರಾಜಿಸುತ್ತಿದ್ದವು. ಸಂಜೆ ದೀಪಾವಳಿಯ ಸ್ವರೂಪದಲ್ಲಿ ಬೆಳಕಿನ ಚಿತ್ತಾರ ಕಂಗೊಳಿಸಿತು.
ಅಯೋಧ್ಯೆ ಪ್ರಾಣ ಪ್ರತಿಷ್ಠೆಯ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು. ಯಾವುದೇ ಅಹಿತಕರ ಘಟನೆಯೂ ವರದಿಯಾಗಿಲ್ಲ.
ನೇರ ಪ್ರಸಾರ
ಎಲ್ಲ ದೇವಾಲಗಳಲ್ಲಿ ಬೃಹತ್ ಎಲ್‌ಸಿಡಿ ಪರದೆಗಳಲ್ಲಿ, ಟಿ.ವಿ.ಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಸಣ್ಣ ದೊಡ್ಡ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಅನ್ನ ಪ್ರಸಾದದ ವಿತರಣೆ ನಡೆಯಿತು. ಸಂಜೆ ಕೆಲವು ದೇವಾಲಯಗಳಲ್ಲಿ ದೀಪೋತ್ಸವ ನಡೆಯಿತು.
ವಿಹಿಂಪ ವತಿಯಿಂದ ಕದ್ರಿ ದೇಗುಲದಲ್ಲಿ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರಿಂದ ಬೌದ್ಧಿಕ್ ನೆರವೇರಿತು. ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಎಚ್‌ಪಿ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಮೊದಲಾದವರು ಭಾಗವಹಿಸಿದ್ದರು.
ರಾಮ ಮಂದಿರದ ಪವಿತ್ರ ಕ್ಷಣಗಳನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ಶ್ರೀ ಕ್ಷೇತ್ರ ಕಟೀಲಿನಲ್ಲಿ ಕಣ್ತುಂಬಿಕೊಂಡರು. ಅಯೋಧ್ಯೆಯಿಂದ ನೇರ ಪ್ರಸಾರವನ್ನು ವೀಕ್ಷಿಸಿದ ನಳಿನ್ ಅವರು ಕಟೀಲಿನಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಪ್ರಮುಖರು, ಹಿಂದೂ ಸಂಘಟನೆಯ ನೇತಾರರು ಈ ವೇಳೆ ಉಪಸ್ಥಿತರಿದ್ದರು. ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ ಅವರು ಮಂಗಳೂರಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.