Ayodhya ಶ್ರೀರಾಮ ಪ್ರತಿಷ್ಠೆ ಹಿನ್ನೆಲೆ: ಅಖಂಡ ರಾಮಾಯಣ ಪಾರಾಯಣ ಆರಂಭ
Team Udayavani, Jan 19, 2024, 11:02 PM IST
ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರಗೋಡು ವ್ಯಾಪ್ತಿಯನ್ನು ಒಳಗೊಂಡ ಸಂಸ್ಕೃತ ಭಾರತಿಯ ಮಂಗಳೂರು ವಿಭಾಗದಿಂದ ಜ. 21ರ ವರೆಗೆ ಸಂಘನಿಕೇತನದಲ್ಲಿ ಹಮ್ಮಿಕೊಂಡ ಅಖಂಡ ರಾಮಾಯಣ ಪಾರಾಯಣಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಆರೆಸ್ಸೆಸ್ ಪ್ರಮುಖ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ರಾಮ ಎಂದರೆ ನಮ್ಮ ಧರ್ಮ, ಸಂಸ್ಕೃತಿ, ಜೀವನ ಮೌಲ್ಯ. ದೇಶದ ಸತ್ವ ಮತ್ತು ತತ್ವ, ದೇಶದ ಅಸ್ಮಿತೆ. ರಾಮಾಯಣ ಪಾರಾಯಣದ ಮೂಲಕ ಶ್ರೀರಾಮನನ್ನು ಅಧ್ಯಯನ ಮಾಡಬೇಕು. ಯುವಜನತೆಗೆ ರಾಮಾಯಣದ ಬಗ್ಗೆ ಜ್ಞಾನ ಇರಬೇಕು. ರಾಮನನ್ನು ತಿಳಿಯುವುದು ಅಂದರೆ ನಮ್ಮ ನಾಗರಿಕತೆಯನ್ನು ತಿಳಿಯುವುದು ಎಂದರ್ಥ ಎಂದರು.
ನಮ್ಮ ದೇಶಕ್ಕಾದ ಅಪಮಾನ ಸ್ವಾತಂತ್ರ್ಯ ಬಳಿಕ ಸರಿ ಹೋಗಬೇಕಿತ್ತು. ಆದರೆ, ಆಗಿಲ್ಲ. ಇಂದು ದೇಶದೆಲ್ಲೆಡೆ ಆನಂದ, ಖುಷಿ ಮನೆ ಮಾಡಿದೆ. ಒಂದೊಮ್ಮೆ ರಾಮಜನ್ಮ ಭೂಮಿಯಿಂದ ರಾಮನನ್ನು ಓಡಿಸಲಾಗಿತ್ತೋ ಅಲ್ಲೇ ಶ್ರೀರಾಮನ ಪಟ್ಟಾಭಿಷೇಕ ನಡೆಯುತ್ತಿದೆ. ವಾಲಿ¾ಕಿ ರಾಮಾಯಣ ಪುರಾಣವಲ್ಲ, ಅದು ಚರಿತ್ರೆ ಎಂದು ಹೇಳಿದರು.
ಸಂಸ್ಕೃತ ಭಾರತಿ ಅಖಿಲ ಭಾರತೀಯ ಸಂಘಟನ ಮಂತ್ರಿ ದಿನೇಶ್ ಕಾಮತ್ ಮಾತನಾಡಿ, ರಾಮ
ಭಕ್ತಿ ರಾಷ್ಟ್ರಶಕ್ತಿಯಾಗಿದೆ. ಸುಭಾಷಿತಗಳು ಕೇವಲ ವಾಕ್ಯವಲ್ಲ. ಜೀವನದ ಏರಿಳಿತವನ್ನು ಎದುರಿಸುವ ಸಾಮರ್ಥ್ಯ ಇದರಿಂದ ಸಿಗುತ್ತದೆ ಎಂದು ತಿಳಿಸಿದರು.
ಸಂಸ್ಕೃತ ಭಾರತಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ್ ಡಾ| ವಿಶ್ವಾಸ್ ಮಾತನಾಡಿ, ಭಾರತೀಯರಾದ ನಮಗೆ
ರಾಮಾಯಣ, ಮಹಾಭಾರತ ಎರಡು ಕಣ್ಣುಗಳು. ಅವುಗಳಿಗೆ ಎಂದೂ ಸಾವಿಲ್ಲ.ಇತ್ತೀಚಿನ ದಿನಗಳಲ್ಲಿ ಈ ಗ್ರಂಥವನ್ನು ಕೆಲವರು ಮೂಲೆಗುಂಪು ಮಾಡುತ್ತಿರು ವುದು ಬೇಸರದ ಸಂಗತಿ. ರಾಮಾಯಣ, ಮಹಾಭಾರತ ಇತಿಹಾಸವೂ ಹೌದು, ಪುರಾಣವೂ ಹೌದು. ರಾಮಾಯಣ ಪಾರಾಯಣ, ವೇದ ಪಾರಾಯಣ ಭಿನ್ನವಲ್ಲ ಎಂದರು.
ಸಂಸ್ಕೃತ ಭಾರತಿ ಪ್ರಾಂತ ಸಂಪರ್ಕ ಪ್ರಮುಖ್ ಸತ್ಯನಾರಾಯಣ ಕೆ.ವಿ. ಸ್ವಾಗತಿಸಿದರು. ವಿಭಾಗ ಸಂಯೋಜಕ ನಟೇಶ ವಂದಿಸಿದರು. ಡಾ| ಉಮಾಮಹೇಶ್ವರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.